ಹುನಗುಂದ –
ಹೌದು ಸರ್ವಿಸ್ ರಸ್ತೆಯಲ್ಲಿ ರಸ್ತೆಯನ್ನು ಕ್ರಾಸ್ ಮಾಡುವಾಗ ಬೈಕ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಶಿಕ್ಷಕರೊಬ್ಬರು ಸಾವಿಗೀಡಾದ ಘಟನೆ ಹುನಗುಂದ ದಲ್ಲಿ ನಡೆದಿದೆ ಹುನಗುಂದ ದ ಜಯಸೂರ್ಯ ಹೊಟೇಲ್ ಬಳಿ ಈ ಒಂದು ಭೀಕರ ಅಪಘಾತ ವಾಗಿದ್ದ ಬೈಕ್ ನಲ್ಲಿ ಹೊರಟಿದ್ದ ಎಂ ಡಿ ಮಲಗಿ ಹಾಳ ಶಿಕ್ಷಕರು ಇವರು ಸ್ಥಳದಲ್ಲೇ ಮೃತರಾಗಿದ್ದಾರೆ
ಇನ್ನು ಅಪಘಾತದ ಸುದ್ದಿಯನ್ನು ತಿಳಿದ ಹುನಗುಂದ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದು ಇತ್ತ ಅಪಘಾತದಲ್ಲಿ ಶಿಕ್ಷಕರನ್ನು ಕಳೆದುಕೊಂಡ ಸುದ್ದಿಯನ್ನು ತಿಳಿದ ಹುನಗುಂದ ಪಟ್ಟಣದ ಶಿಕ್ಷಕ ಬಂಧುಗಳು ಶಾಲೆಯ ಮಕ್ಕಳು ತೀವ್ರವಾದ ಸಂತಾಪವನ್ನು ಸೂಚಿಸಿ ಭಾವ ಪೂರ್ಣ ನಮನವನ್ನು ಸಲ್ಲಿಸಿದರು.
ಇತ್ತ ಈ ಒಂದು ವಿಷಾದದ ಸುದ್ದಿಯನ್ನು ತಿಳಿದ ರಾಜ್ಯದ ಶಿಕ್ಷಕರು ಸಂತಾಪವನ್ನು ಸೂಚಿಸಿ ಭಾವಪೂರ್ಣ ನಮನವನ್ನು ಸಲ್ಲಿಸಿದರು.