ಧಾರವಾಡ – ಇಷ್ಟು ದಿನ ಶಕ್ತಿ ಸೌಧದಲ್ಲಿ ಅಧಿಕಾರಕ್ಕಾಗಿ ಮಾಟ ಮಂತ್ರದ ಸುದ್ದಿಗಳು ಸದ್ದು ಮಾಡುತ್ತಿದವು. ಆದರೆ ಈಗ ಅದೂ ಗ್ರಾಮ ಪಂಚಾಯತಿ ಅಖಾಡದಲ್ಲೂ ಚುನಾವಣೆಯಲ್ಲಿಯು ಕೂಡಾ ಕಂಡು ಬರುತ್ತಿದೆ.
ಹೌದು ಈಗಾಗಲೇ ಧಾರವಾಡ ತಾಲೂಕಿನಾದ್ಯಂತ, ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಈಗ ಗ್ರಾಮದಲ್ಲಿ ಮಾಟ ಮಂತ್ರವನ್ನು ಮಾಡಲಾಗಿದೇಯಂತೆ. ಇದರಿಂದಾಗಿ ಆ ಗ್ರಾಮದ ಜನತೆಯೇ ಈಗ ಭಯ ಬಿತರಾಗಿದ್ದಾರೆ.
ಹೌದು ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯನ್ನು ಹಂಚ್ಚಿಕೊಂಡಿರುವ ಅಂಬ್ಲಿಕೋಪ್ಪ ಗ್ರಾಮದಲ್ಲಿ ಮಾಟ ಮಂತ್ರವನ್ನು ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಅಲ್ಲದೆ ಗ್ರಾಮ ಪಂಚಾಯತಿಯ ಮುಖ್ಯ ಪ್ರವೇಶ ರಸ್ತೆ ಹಾಗೂ ಬಸ್ ನಿಲ್ದಾಣದಲ್ಲಿ ಮಾಟ ಮಂತ್ರಗಳನ್ನು ಮಾಡಲಾಗಿದೆ.
ಬಸ್ ನಿಲ್ದಾಣದ ರಸ್ತೆಯಲ್ಲಿ ಸಾಸುವೆಯನ್ನು ಹಾಕಲಾಗಿದ್ದು, ಬಸ್ ನಿಲ್ದಾಣದ ಮುಂಭಾಗದಲ್ಲಿ ಮಾಟ ಮಂತ್ರಕ್ಕೆ ಬಳಕೆಯಾಗಿರುವ ಚೀಟಿಗಳು ಸಿಕ್ಕಿವೆ. ಇದರಿಂದಾಗಿ ಈಗ ಗ್ರಾಮದ ಜನತೆಯು ಭಯ ಭೀತರಾಗಿದ್ದಾರೆ.
ಈ ಕೃತ್ಯ ಮಾಡಿರುವವರ ವಿರುದ್ಧ ಮುಂಜಾನೆಯಿಂದಲೇ ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೆ ಚುನಾವಣೆ ಗೆಲ್ಲುವಿಗಾಗಿಯೇ ಒಂದುವೇಳೆ ಈ ರೀತಿ ಪ್ರಯತ್ನ ಮಾಡಿದರೆ ಅವರಿಗೆ ಮೊದಲು ಸೋಲು ಆಗಬೇಕು ಎಂದು ಶಪಿಸುತ್ತಿದ್ದಾರೆ.
ಹಲವು ವರ್ಷಗಳಿಂದ ಗ್ರಾಮ ಪಂಚಾತಿ ಚುನಾವಣೆ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಮಾಟ ಮಂತ್ರಗಳನ್ನು ಗ್ರಾಮದಲ್ಲಿ ಮಾಡಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದಾರೆ. ಕೂಡಲೇ ಇಂತಹ ಕೃತ್ಯ ಮಾಡುವರ ವಿರುದ್ಧ ಪೊಲೀಸ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸುತ್ತಿದ್ದಾರೆ.