This is the title of the web page
This is the title of the web page

Live Stream

[ytplayer id=’1198′]

March 2024
T F S S M T W
 123456
78910111213
14151617181920
21222324252627
28293031  

| Latest Version 8.0.1 |

Sports News

ಶಾಲೆಗಳಲ್ಲಿ ಪ್ರತಿದಿನವೂ ಸಿಗಲಿದೆ ಹೊಸ ಹೊಸ ಊಟ – ಆರು ದಿನವೂ ಬಗೆ ಬಗೆಯ ಊಟ ಹೊಸ ಮೆನುವಿಗೆ ಮಕ್ಕಳು ನೀಡಿದ್ರು ಫುಲ್ ಮಾರ್ಕ್ಸ್…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯ ಸರ್ಕಾರ 2022-23ನೇ ಸಾಲಿನ ಪ್ರಧಾನಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್‌ ಯೋಜನೆಯಡಿ ಶಾಲೆಗಳ ಮಧ್ಯಾಹ್ನ ಊಟದ ಮೆನು ಸಿದ್ಧಪಡಿಸಿದೆ.ಹೊಸ ಮೆನು ಕಂಡು ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಹೌದು ಹೊಸ ಮೆನುವಿಗೆ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ ಶಾಲಾ ವಿದ್ಯಾರ್ಥಿಗಳಿಗೆ ಅವರ ಪ್ರದೇಶಕ್ಕೆ ಅನುಗುಣವಾಗಿ ಬಗೆ ಬಗೆಯ ಊಟ ಸಿಗಲಿದೆ.ಇದರ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಆಹಾರ ಲಭ್ಯವಾಗಲಿದೆ. ಪ್ರತಿ ದಿನ ಮಧ್ಯಾಹ್ನ ಮಕ್ಕಳಿಗೆ ಒಂದೇ ರೀತಿಯ ಆಹಾರ ನೀಡೋದರಿಂದ ಅಪೌಷ್ಟಿಕತೆ ಹೆಚ್ಚಾಗುವ ಸಾಧ್ಯತೆಗಳಿತ್ತು ಈ ಹಿನ್ನೆಲೆ ಮಕ್ಕಳಿಗೆ ಬೇರೆ ಬೇರೆ ಗುಣಮಟ್ಟದ ಆಹಾರ ನೀಡುವಂತೆ ಕೇಂದ್ರ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಸೂಚನೆ ಹಿನ್ನೆಲೆ ಹೊಸ ಮೆನು ಸಿದ್ಧವಾಗಿದೆ.ಕೇಂದ್ರ ಸರ್ಕಾರದ ಆದೇಶದ ಬೆನ್ನಲ್ಲೇ ರಾಜ್ಯ ಸರ್ಕಾರ ಪರಿಷ್ಕೃತ ಮೆನು ಸಿದ್ಧಪಡಿಸಿದೆ.ಈ ಮೆನು ಆಧರಿಸಿ ಶಾಲೆಗಳು ಮಕ್ಕಳಿಗೆ ಬಿಸಿಯೂಟ ನೀಡಬೇಕು ಎಂದು ಹೇಳಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದಾಗಿ ಈ ಹೊಸ ಮೆನು ವಿಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಹೊಸ ಆಹಾರ ಪಟ್ಟಿಯಲ್ಲಿ ಏನೇನಿದೆ…..

ಸೋಮವಾರ: ಅನ್ನ, ಸಾಂಬಾರು

ಮಂಗಳವಾರ: ಪಲಾವ್‌, ದಾಲ್‌ ತೊವ್ವೆ, ಅಥವಾ ಟೊಮೆಟೊ ಬಾತ್‌ ಹಾಗೂ ತರಕಾರಿ ಪಲ್ಯ

ಬುಧವಾರ: ಅನ್ನ, ರಸಂ ಮತ್ತು ಕಾಳು ಪಲ್ಯ ಅಥವಾ ತರಕಾರಿ ಪಲ್ಯ

ಗುರುವಾರ: ಅನ್ನ, ಸಾಂಬಾರು

ಶುಕ್ರವಾರ: -ಬಿಸಿ ಬೇಳೆ ಬಾತ್‌

ಶನಿವಾರ: ಉಪ್ಪಿಟ್ಟು ಅಥವಾ ಚಪಾತಿ ಮತ್ತು ಪಲ್ಯ


Google News

 

 

WhatsApp Group Join Now
Telegram Group Join Now
Suddi Sante Desk