ಬೆಂಗಳೂರು -
ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಈ ಹಿಂದೆ ನಿಗದಿಪಡಿಸಲಾಗಿದ್ದ ದಿನಾಂಕದ ಬದಲಾಗಿ ಅಕ್ಟೋಬರ್ 26ರ ಸೋಮವಾರದಂದು ವಾಲ್ಮೀಕಿ ಜಯಂತಿ ಆಚರಿ ಸಲು ಹಾಗೂ ಅಂದು ಸಾರ್ವತ್ರಿಕ ರಜೆ ನೀಡಲು ಸರ್ಕಾರ ತೀರ್ಮಾನಿಸಿದೆ.ಸರ್ಕಾರದ ಹಿಂದಿನ ಅಧಿಸೂಚನೆಯನ್ವಯ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 25ರ ಭಾನುವಾರ ದಂದು ಘೋಷಿಸಲಾಗಿತ್ತು
ಆದರೆ ವಾಲ್ಮೀಕಿ ಜಯಂತಿಯನ್ನು 'ಶೀಗಿ ಹುಣ್ಣಿಮೆ' ದಿನದಂದೇ ಆಚರಿಸುವ ಸಂಪ್ರದಾಯವಿದೆ. ಹೀಗಾಗಿ ಅಕ್ಟೋಬರ್ 26ರ ಸೋಮವಾರದಂದು ಶೀಗಿ ಹುಣ್ಣಿಮೆ ಬಂದ ಹಿನ್ನೆಲೆಯಲ್ಲಿ ಅಂದೇ ಜಯಂತಿ ಯನ್ನು ಆಚರಿಸಲು ಮತ್ತು ಸಾರ್ವತ್ರಿಕ ರಜೆ ನೀಡಲು ಆದೇಶಿಸಲಾಗಿದೆ.ಈ ರಜೆಯು ನೆಗೋಶಿಯೇಬಲ್ ಇನ್ಸ್‌ಟ್ರುಮೆಂಟ್ ಆಕ್ಟ್, 1881ರ ಸೆಕ್ಷನ್ 25ರ ವಿವರಣೆಯನ್ವಯವೂ ಅನ್ವಯವಾಗಲಿದ್ದು, ಅಕ್ಟೋಬರ್ 26ರ ಸೋಮವಾರದಂದು ರಾಜ್ಯದ ಸರ್ಕಾರಿ ಕಚೇರಿಗಳು, ಶಾಲೆ-ಕಾಲೇಜುಗಳ ಜೊತೆಗೆ ಬ್ಯಾಂಕ್‌ಗಳಿಗೂ ಸಾರ್ವತ್ರಿಕ ರಜೆ ಇರಲಿದೆ.
ವಾಲ್ಮೀಕಿ ಜಯಂತಿ ದಿನಾಂಕ ಬದಲಾವಣೆಯಿಂದ ಮೂರು ದಿನ ಸರಣಿ ರಜೆ ಸಿಗಲಿದೆ. ಅಕ್ಟೋಬರ್ ಮೊದಲ ವಾರದಂತೆ ಕೊನೆಯ ವಾರವೂ ಜನರಿಗೆ ಲಾಂಗ್ ವೀಕೆಂಡ್ ಇರಲಿದೆ. ಅಕ್ಟೋಬರ್ 24 - 4ನೇ ಶನಿವಾರ ಸರ್ಕಾರಿ ರಜೆ, ಅಕ್ಟೋಬರ್ 25 - ಭಾನುವಾರ ರಜೆ, ಅಕ್ಟೋಬರ್ 26 - ವಾಲ್ಮೀಕಿ ಜಯಂತಿ ರಜೆ ಇರಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....