LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮೂರು ದಿನಗಳ ಸರಣಿ ರಜೆ.....ಮೂರು ದಿನಗಳ ಲಾಂಗ್ ವೀಕೆಂಡ್ ರಜೆಗಳ ಕುರಿತು ಮಾಹಿತಿ.....

ಬೆಂಗಳೂರು -

ರಾಜ್ಯದಲ್ಲಿ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಸಾರ್ವಜನಿಕರಿಗೆ ಮೂರು ದಿನಗಳ ಸರಣಿ ರಜೆ ಸಿಗಲಿದೆ ಮಹರ್ಷಿ ವಾಲ್ಮೀಕಿ ಜಯಂತಿಗೆ 2026) ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಜೆ ದಿನಾಂಕದಲ್ಲಿ ಬದಲಾವಣೆ ಮಾಡಿದ್ದು, ಈ ಬದಲಾವಣೆಯಿಂದ ಶನಿವಾರದಿಂದ ಸೋಮವಾರದವರೆಗೆ ಸತತ ರಜೆ ಸಿಗುವಂತಾಗಿದೆ.

ಹೌದು,ಶೀಗಿ ಹುಣ್ಣಿಮೆ ಹಿನ್ನೆಲೆಯಲ್ಲಿ ಜಯಂತಿ ಆಚರಣೆಯ ದಿನಾಂಕವನ್ನು ಬದಲಾಯಿಸಲಾಗಿದೆ. ಹೀಗಾಗಿ ಈ ಬಾರಿ ಅಕ್ಟೋಬರ್ 25ರ ಬದಲಿಗೆ ಅಕ್ಟೋಬರ್ 26ರಂದು ವಾಲ್ಮೀಕಿ ಜಯಂತಿ ಆಚರಿ ಸಲಾಗುತ್ತದೆ. ಅಂದು ಸಾರ್ವತ್ರಿಕ ರಜೆ ಇರಲಿದೆ.

2026ರ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಗೆ ಅಕ್ಟೋಬರ್ 25ರಂದು ರಜೆ ನಿಗದಿಪಡಿಸಲಾಗಿತ್ತು. ಆದರೆ, ಶೀಗಿ ಹುಣ್ಣಿಮೆ ಅಕ್ಟೋಬರ್ 26ರಂದು ಇರುವ ಹಿನ್ನೆಲೆಯಲ್ಲಿ ಜಯಂತಿಯ ಆಚರಣೆ ಮತ್ತು ರಜೆಯನ್ನು ಒಂದು ದಿನ ಮುಂದೂಡಲಾಗಿದೆ.

ಈ ಕುರಿತು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಅಕ್ಟೋಬರ್ 26, ಸೋಮವಾರ ವಾಲ್ಮೀಕಿ ಜಯಂತಿ ಆಚರಿಸಲು ಹಾಗೂ ಅಂದು ಸಾರ್ವತ್ರಿಕ ರಜೆ ನೀಡಲು ಸೂಚಿಸಲಾಗಿದೆ.

ಅಕ್ಟೋಬರ್ 26ರ ರಜೆ ರಾಜ್ಯದ ಸರ್ಕಾರಿ ಕಚೇರಿ ಗಳು,ಶಾಲಾ-ಕಾಲೇಜುಗಳಿಗೆ ಅನ್ವಯಿಸಲಿದೆ. ಇದರ ಜತೆಗೆ ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, 1881ರ ಸೆಕ್ಷನ್ 25ರ ಅಡಿಯಲ್ಲಿ ಬರುವ ರಜೆಯಾಗಿ ಇದನ್ನು ಘೋಷಿಸಲಾಗಿದೆ. ಹೀಗಾಗಿ ರಾಜ್ಯದ ಬ್ಯಾಂಕ್‌ಗಳಿಗೂ ಅಂದು ರಜೆ ಅನ್ವಯವಾಗಲಿದೆ.

ರಜೆ ದಿನಾಂಕ ಬದಲಾವಣೆಯಿಂದ ಅಕ್ಟೋಬರ್ 24ರಿಂದ 26ರವರೆಗೆ ಸತತ ಮೂರು ದಿನಗಳ ರಜೆ ದೊರೆಯಲಿದೆ.

  • ಅಕ್ಟೋಬರ್ 24, ಶನಿವಾರ: ನಾಲ್ಕನೇ ಶನಿವಾರದ ರಜೆ
  • ಅಕ್ಟೋಬರ್ 25, ಭಾನುವಾರ: ವಾರದ ರಜೆ
  • ಅಕ್ಟೋಬರ್ 26, ಸೋಮವಾರ: ವಾಲ್ಮೀಕಿ ಜಯಂತಿ ಸಾರ್ವತ್ರಿಕ ರಜೆ

ಹೀಗಾಗಿ ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಸೇರಿ ದಂತೆ ಹಲವು ವರ್ಗದವರಿಗೆ ಮೂರು ದಿನಗಳ ಲಾಂಗ್ ವೀಕೆಂಡ್ ಸಿಗಲಿದೆ.

ವಾಲ್ಮೀಕಿ ಜಯಂತಿಯ ರಜೆ ದಿನಾಂಕ ಬದಲಾವಣೆ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಯಿಂದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರವಿಕುಮಾರ್ ಎಸ್. ಅವರು ಈ ಆದೇಶ ಹೊರಡಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣ ಸಚಿವರ ಮನೆಯ ಮುಂದೆ ಶಿಕ್ಷಕರು.....ಪ್ರಭಾರಿ ಮುಖ್ಯಶಿಕ್ಷಕ ಅಮಾನತು..... ಅಮಾನತು ಮಾಡಿ ಆದೇಶ.....ವರ್ಗಾವಣೆಗಾಗಿ ಬೆಂಗಳೂರಿಗೆ ಬಂದ ಶಿಕ್ಷಕರು.....ಶಿಕ್ಷಣ ಸಚಿವರನ್ನು ಭೇಟಿಯಾಗಲಿರುವ ಶಿಕ್ಷಕರ ನಿಯೋಗ.....ದಸರಾ ರಜೆ ಉಲ್ಲಂಘಿಸಿದ ಶಾಲೆಗಳ ಮೇಲೆ ಕ್ರಮಕ್ಕೆ ಆಗ್ರಹ.....ಅಕ್ಟೋಬರ್ 26 ಸಾರ್ವತ್ರಿಕ ರಜೆ ಘೋಷಣೆ..... ರಜೆ ಮಾರ್ಪಾಡು ಮಾಡಿದ ರಾಜ್ಯ ಸರ್ಕಾರ.....ದಸರಾ ರಜೆಯಲ್ಲೂ ಶಾಲೆಗಳ ಕಳ್ಳಾಟ... ಸಿಡಿದೆದ್ದ ಸಂಘಟನೆಗಳು.....ಮೂರು ದಿನಗಳ ಸರಣಿ ರಜೆ.....ಮೂರು ದಿನಗಳ ಲಾಂಗ್ ವೀಕೆಂಡ್ ರಜೆಗಳ ಕುರಿತು ಮಾಹಿತಿ.....ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್.....ಶಿಕ್ಷಣ ಇಲಾಖೆಯಲ್ಲೇ ಗೋಲ್ ಮಾಲ್.....ಗೊತ್ತಿದ್ದು ಸುಮ್ಮನಿದ್ರಾ ಅಧಿಕಾರಿಗಳು.....ನಕಲಿ ಅಂಕಪಟ್ಟಿ ನೀಡಿದ್ದ 52 ಸರ್ಕಾರಿ ನೌಕರರು ಅಮಾನತು..... ಸಾಮೂಹಿಕ ವಾಗಿ ಅಮಾನತು ಆದೇಶ.....