LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್.....

ಬೆಂಗಳೂರು -

ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್ ನ್ನು ನೀಡಿದ್ಸು ಮುಟ್ಟಿನ ರಜೆ ಇನ್ಮುಂದೆ ಸ್ವಯಂಚಾಲಿತ ವಾಗಿ ಮಂಜೂರು ಮಾಡಿ‌ ಆದೇಶವನ್ನು ಮಾಡ ಲಾಗಿದೆ.ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಮಹತ್ವದ ಗುಡ್‌ನ್ಯೂಸ್ ಸಿಕ್ಕಿದೆ. ಮುಟ್ಟಿನ ರಜೆ ಪಡೆಯಲು ಇನ್ನು ಮುಂದೆ ಮಂಜೂರಾತಿ ಅಧಿಕಾರಿ ಗಳ ಅನುಮೋದನೆಗಾಗಿ ಕಾಯಬೇಕಾಗಿಲ್ಲ. ಕರ್ತವ್ಯ ಆಯಪ್ ಮೂಲಕ ಅರ್ಜಿ ಸಲ್ಲಿಸಿದರೆ ನಿಗದಿತ ಷರತ್ತುಗಳಂತೆ ರಜೆ ಸ್ವಯಂಚಾಲಿತವಾಗಿ ಮಂಜೂರಾ ಗುವ ವ್ಯವಸ್ಥೆ ಕಲ್ಪಿಸಲಾಗಿದೆ.news_1791208508_0_537.webp

 

news_1791208508_1_785.webp

 

ಈ ಕುರಿತು ಕರ್ನಾಟಕ ಸರ್ಕಾರದ ಪ್ರಜಾಸೇವಾ ಇಲಾಖೆಯು ಅಕ್ಟೋಬರ್ 5, 2026ರಂದು ಸುತ್ತೋಲೆ ಹೊರಡಿಸಿದೆ.18ರಿಂದ 52 ವರ್ಷದ ಮಹಿಳಾ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳು ಒಂದು ದಿನದ ಮುಟ್ಟಿನ ರಜೆ ಸೌಲಭ್ಯ ಕಲ್ಪಿಸಲಾಗಿದ್ದು ಇನ್ನು ಮುಂದೆ ಈ ರಜೆ ಪಡೆಯಲು ಮಂಜೂರಾತಿ ಅಧಿಕಾರಿಗಳ ಅನುಮೋದನೆಗಾಗಿ ಕಾಯಬೇಕಾ ಗಿಲ್ಲ. ಕರ್ತವ್ಯ ಆಯಪ್‌ನಲ್ಲಿ ಅರ್ಜಿ ಸಲ್ಲಿಸಿದರೆ ನಿಗದಿತ ನಿಯಮಗಳಂತೆ ರಜೆ ಸ್ವಯಂಚಾಲಿತವಾಗಿ ಮಂಜೂರಾಗಲಿದೆ ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಆದೇಶದಂತೆ 18ರಿಂದ 52 ವರ್ಷ ವಯೋಮಿತಿಯ ಮಹಿಳಾ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳು ಒಂದು ದಿನದ ಮುಟ್ಟಿನ ರಜೆ ಸೌಲಭ್ಯವಿದೆ. ಇದೀಗ ಈ ರಜೆ ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳ ಗೊಳಿಸ ಲಾಗಿದೆ.

ಮಹಿಳಾ ಸರ್ಕಾರಿ ನೌಕರರು ಮುಟ್ಟಿನ ರಜೆಗೆ ಕರ್ತವ್ಯ ಆಯಪ್‌ನಲ್ಲಿ ಅರ್ಜಿ ಸಲ್ಲಿಸಿದಾಗ, ಮಂಜೂರಾತಿ ಅಧಿಕಾರಿಯ ಅನುಮೋದನೆಗಾಗಿ ಕಾಯುವ ಅಗತ್ಯ ವಿಲ್ಲ. ಆಯಪ್‌ನಲ್ಲಿ ನಿಗದಿಪಡಿಸಿರುವ ನಿಯಮ ಗಳಂತೆ ರಜೆ ಸ್ವಯಂಚಾಲಿತವಾಗಿ ಮಂಜೂರಾಗಲಿದೆ.

ಮುಟ್ಟಿನ ರಜೆ ಪಡೆಯಲು ವೈದ್ಯಕೀಯ ಪ್ರಮಾಣ ಪತ್ರದ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ನಿಗದಿತ ಷರತ್ತುಗಳನ್ನು ಪೂರೈಸುವ ಅರ್ಜಿಗಳನ್ನು ಮಂಜೂರು ಮಾಡಬೇಕು. ಇಂತಹ ಅರ್ಜಿಗಳನ್ನು ತಿರಸ್ಕರಿಸುವ ವಿವೇಚನಾಧಿಕಾರ ಮಂಜೂರಾತಿ ಪ್ರಾಧಿಕಾರಕ್ಕೆ ಇರುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಈ ಸುತ್ತೋಲೆಯನ್ನು ತಮ್ಮ ಇಲಾಖೆಯ ಎಲ್ಲಾ ಮಹಿಳಾ ನೌಕರರು ಹಾಗೂ ರಜೆ ಮಂಜೂರಾತಿ ಪ್ರಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸರ್ಕಾರ ಸೂಚಿಸಿದೆ. ಮಹಿಳಾ ನೌಕರರು ಕರ್ತವ್ಯ ಆಯಪ್ ಮೂಲಕವೇ ಅರ್ಜಿ ಸಲ್ಲಿಸುವುದನ್ನು ಖಚಿತಪಡಿಸಿ ಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಒಟ್ಟಿನಲ್ಲಿ, ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಮುಟ್ಟಿನ ರಜೆ ಪಡೆಯುವ ಪ್ರಕ್ರಿಯೆಯನ್ನು ಸರಳ ಗೊಳಿಸಿರುವ ಸರ್ಕಾರದ ಈ ಹೊಸ ವ್ಯವಸ್ಥೆಯಿಂದ ರಜೆ ಮಂಜೂರಾತಿಗಾಗಿ ಅಧಿಕಾರಿಗಳ ಅನುಮೋದ ನೆಗಾಗಿ ಕಾಯುವ ಅನಿವಾರ್ಯತೆ ತಪ್ಪಲಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು......

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣ ಸಚಿವರ ಮನೆಯ ಮುಂದೆ ಶಿಕ್ಷಕರು.....ಪ್ರಭಾರಿ ಮುಖ್ಯಶಿಕ್ಷಕ ಅಮಾನತು..... ಅಮಾನತು ಮಾಡಿ ಆದೇಶ.....ವರ್ಗಾವಣೆಗಾಗಿ ಬೆಂಗಳೂರಿಗೆ ಬಂದ ಶಿಕ್ಷಕರು.....ಶಿಕ್ಷಣ ಸಚಿವರನ್ನು ಭೇಟಿಯಾಗಲಿರುವ ಶಿಕ್ಷಕರ ನಿಯೋಗ.....ದಸರಾ ರಜೆ ಉಲ್ಲಂಘಿಸಿದ ಶಾಲೆಗಳ ಮೇಲೆ ಕ್ರಮಕ್ಕೆ ಆಗ್ರಹ.....ಅಕ್ಟೋಬರ್ 26 ಸಾರ್ವತ್ರಿಕ ರಜೆ ಘೋಷಣೆ..... ರಜೆ ಮಾರ್ಪಾಡು ಮಾಡಿದ ರಾಜ್ಯ ಸರ್ಕಾರ.....ದಸರಾ ರಜೆಯಲ್ಲೂ ಶಾಲೆಗಳ ಕಳ್ಳಾಟ... ಸಿಡಿದೆದ್ದ ಸಂಘಟನೆಗಳು.....ಮೂರು ದಿನಗಳ ಸರಣಿ ರಜೆ.....ಮೂರು ದಿನಗಳ ಲಾಂಗ್ ವೀಕೆಂಡ್ ರಜೆಗಳ ಕುರಿತು ಮಾಹಿತಿ.....ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್.....ಶಿಕ್ಷಣ ಇಲಾಖೆಯಲ್ಲೇ ಗೋಲ್ ಮಾಲ್.....ಗೊತ್ತಿದ್ದು ಸುಮ್ಮನಿದ್ರಾ ಅಧಿಕಾರಿಗಳು.....ನಕಲಿ ಅಂಕಪಟ್ಟಿ ನೀಡಿದ್ದ 52 ಸರ್ಕಾರಿ ನೌಕರರು ಅಮಾನತು..... ಸಾಮೂಹಿಕ ವಾಗಿ ಅಮಾನತು ಆದೇಶ.....