LIVE TV LocalCrimeNationalInternationalPoliticsEducationTechnologyEntertainmentSportsFeature
State News

ದಸರಾ ರಜೆಯಲ್ಲೂ ಶಾಲೆಗಳ ಕಳ್ಳಾಟ... ಸಿಡಿದೆದ್ದ ಸಂಘಟನೆಗಳು.....

ಬೆಂಗಳೂರು -

ದಸರಾ ರಜೆಯಲ್ಲೂ ಖಾಸಗಿ ಶಾಲೆಗಳ ಕಳ್ಳಾಟ ಸಿಡಿದೆದ್ದ ಹಿಂದೂಪರ ಸಂಘಟನೆಗಳು ಹೌದು ದಸರಾ ರಜೆಯ ವಿಚಾರ ದಲ್ಲಿ ರಾಜ್ಯದಲ್ಲಿ ಇಂತಹ ದೊಂದು ಪರಿಸ್ಥಿತಿ ಸಧ್ಯ ಎದುರಾಗಿದೆ 'ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ' ಎನ್ನುವಂತಾ ಗಿದೆ ಕೆಲ ಶಾಲಾ ಮಕ್ಕಳ ಪರಿಸ್ಥಿತಿ.ಏಕೆಂದರೆ ದಸರಾ ರಜೆಯಲ್ಲೂ ಶಾಲೆಗೆ ಹೋಗುವಂತಾಗಿದೆ.ಈ ಮೂಲಕ ಶಿಕ್ಷಣ ಇಲಾಖೆಯ ನಿಯಮವನ್ನು ಖಾಸಗಿ ಶಾಲೆಗಳು ಗಾಳಿಗೆ ತೂರಿದವಾ ಎಂಬ ಅನುಮಾನಗಳು ಮೂಡಿದೆ

ದಸರಾ ರಜೆ ಇದ್ದರೂ ತರಗತಿ ನಡೆಸುತ್ತಿರುವ ಖಾಸಗಿ ಶಾಲೆಗಳು ನಡೆ ವಿರುದ್ಧ ಹಿಂದೂಪರ ಸಂಘಟನೆಗಳು ಅಕ್ರೋಶ ಹೊರಹಾಕಿವೆ.ಇನ್ನು ಹಿಂದೂಪರ ಸಂಘಟನೆಗಳ ಆರೋಪಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸ್ಪಷ್ಟನೆ ನೀಡಿದ್ದು 'ಸರ್ಕಾರದ ರಜೆ ನಿಯಮ ಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿಲ್ಲ. ಶಾಲೆಗಳ ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣವಾಗಿ ರಜೆಗಳನ್ನು ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ' ಎಂಬುದು ಖಾಸಗಿ ಶಿಕ್ಷಣ ಸಂಸ್ಥೆಗಳ ವಾದವಾಗಿದೆ.

ದಸರಾ ಸಂದರ್ಭದಲ್ಲಿ ಒಂದು ವಾರ ಅಥವಾ ಹತ್ತು ದಿನಗಳವರೆಗೆ ರಜೆ ನೀಡಲಾಗುತ್ತದೆ. ಇನ್ನುಳಿದ ರಜೆಗಳನ್ನು ಕ್ರಿಸ್‌ಮಸ್ ಸೇರಿದಂತೆ ಇತರೆ ಹಬ್ಬಗಳ ಸಂದರ್ಭದಲ್ಲಿ ನೀಡಲಾಗುತ್ತದೆ.ಸ್ಥಳೀಯ ಹಬ್ಬ ಗಳಿಗೂ ರಜೆಗಳನ್ನು ಹೊಂದಾಣಿಕೆ ಮಾಡಿಕೊಳ್ಳಲಾ ಗುತ್ತದೆ.ಸರಕಾರಿ ಶಾಲೆಗಳಲ್ಲಿ ಮೊದಲೇ ತರಗತಿ ನಡೆಯುತ್ತಿಲ್ಲ ಎಸ್ಐಆರ್​ ಸಮಯದಲ್ಲಿ ತಿಂಗಳ ಗಟ್ಟಲೇ ಕ್ಲಾಸ್ ನಡೆದಿಲ್ಲ. ಆಗ ಯಾರೂ ಮಾತನಾ ಡಿಲ್ಲ, ಈಗ ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ ಎಂದು' ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕ್ಯಾಮ್ಸ್ ಶಶಿಕುಮಾರ್ ಹೇಳಿದ್ದಾರೆ.

ದಸರಾ ರಜೆ ವಿಚಾರ ಇದೀಗ ಖಾಸಗಿ ಶಾಲೆಗಳು ಮತ್ತು ಹಿಂದೂಪರ ಸಂಘಟನೆಗಳ ಮಧ್ಯೆ ಜಟಾ ಪಟಿಗೆ ಕಾರಣವಾಗಿದೆ.ಸರ್ಕಾರದ ಆದೇಶ ಉಲ್ಲಂಘ ನೆಯಾಗಿದೆಯೇ ಇಲ್ಲವೇ, ಶಾಲೆಗಳಿಗೆ ರಜೆ ಹೊಂದಾಣಿಕೆ ಮಾಡಿಕೊಳ್ಳುವ ಅವಕಾಶವಿದೆಯೇ? ಇದೆಲ್ಲದರ ಬಗ್ಗೆ ಶಿಕ್ಷಣ ಇಲಾಖೆ ಯಾವ ಕ್ರಮಕೈ ಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣ ಸಚಿವರ ಮನೆಯ ಮುಂದೆ ಶಿಕ್ಷಕರು.....ಪ್ರಭಾರಿ ಮುಖ್ಯಶಿಕ್ಷಕ ಅಮಾನತು..... ಅಮಾನತು ಮಾಡಿ ಆದೇಶ.....ವರ್ಗಾವಣೆಗಾಗಿ ಬೆಂಗಳೂರಿಗೆ ಬಂದ ಶಿಕ್ಷಕರು.....ಶಿಕ್ಷಣ ಸಚಿವರನ್ನು ಭೇಟಿಯಾಗಲಿರುವ ಶಿಕ್ಷಕರ ನಿಯೋಗ.....ದಸರಾ ರಜೆ ಉಲ್ಲಂಘಿಸಿದ ಶಾಲೆಗಳ ಮೇಲೆ ಕ್ರಮಕ್ಕೆ ಆಗ್ರಹ.....ಅಕ್ಟೋಬರ್ 26 ಸಾರ್ವತ್ರಿಕ ರಜೆ ಘೋಷಣೆ..... ರಜೆ ಮಾರ್ಪಾಡು ಮಾಡಿದ ರಾಜ್ಯ ಸರ್ಕಾರ.....ದಸರಾ ರಜೆಯಲ್ಲೂ ಶಾಲೆಗಳ ಕಳ್ಳಾಟ... ಸಿಡಿದೆದ್ದ ಸಂಘಟನೆಗಳು.....ಮೂರು ದಿನಗಳ ಸರಣಿ ರಜೆ.....ಮೂರು ದಿನಗಳ ಲಾಂಗ್ ವೀಕೆಂಡ್ ರಜೆಗಳ ಕುರಿತು ಮಾಹಿತಿ.....ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್.....ಶಿಕ್ಷಣ ಇಲಾಖೆಯಲ್ಲೇ ಗೋಲ್ ಮಾಲ್.....ಗೊತ್ತಿದ್ದು ಸುಮ್ಮನಿದ್ರಾ ಅಧಿಕಾರಿಗಳು.....ನಕಲಿ ಅಂಕಪಟ್ಟಿ ನೀಡಿದ್ದ 52 ಸರ್ಕಾರಿ ನೌಕರರು ಅಮಾನತು..... ಸಾಮೂಹಿಕ ವಾಗಿ ಅಮಾನತು ಆದೇಶ.....