ಯಾದಗಿರಿ -
ಯಾದಗಿರಿಯಲ್ಲಿ ಅತಿಥಿ ಶಿಕ್ಷಕರೊಬ್ಬರು ಒಂದೇ ಅವಧಿಯಲ್ಲಿ ಎರಡೆರಡು ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡಿ ಎರಡೂ ಕಡೆಗಳಿಂದಲೂ ವೇತನ ಪಡೆದು ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಬೆನ್ನಲ್ಲೇ ಇಲಾಖೆಯ ಅಧಿಕಾರಿಗಳಿಗೆ ಎಲ್ಲವೂ ಗೊತ್ತಿತ್ತಾ ಗೊತ್ತಿದ್ದರೂ ಅಧಿಕಾರಿಗಳು ಯಾಕೆ ಸುಮ್ಮನೆ ಇದ್ದರೂ ಎಂಬ ಅನುಮಾನ ಕಾಡ್ತಾ ಇದೆ
ಜಿಲ್ಲೆಯ ಹುಣಸಗಿ ತಾಲೂಕಿನ ಎರಡು ಸರ್ಕಾರಿ ಪ್ರೌಢಶಾಲೆಗಳಲ್ಲಿ ಏಕಕಾಲಕ್ಕೆ ಕರ್ತವ್ಯ ನಿರ್ವಹಿಸಿ ವೇತನ ಲಪಟಾಯಿಸಿದ ಆರೋಪದಡಿ ರಮೇಶ್ ರಾಥೋಡ್ ಎಂಬ ಅತಿಥಿ ಶಿಕ್ಷಕನ ವಿರುದ್ಧ ಶಿಕ್ಷಣ ಇಲಾಖೆಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ ಆದರೆ ಇದೆಲ್ಲವೂ ಮೊದಲೇ ಅಧಿಕಾರಿಗಳಿಗೆ ವಿಷಯ ಗೊತ್ತಿದ್ದರೂ ಯಾಕೆ ಮೌನವಾಗಿದ್ದರು ಎಂಬ ಅನುಮಾನ ಹುಟ್ಟಿಕೊಂಡಿದೆ
ಪರಸ್ಪರ ಕೇವಲ 12 ಕಿಲೋಮೀಟರ್ ಅಂತರದ ಲ್ಲಿರುವ ಬಚಿಮಟ್ಟಿ ಹಾಗೂ ವಜ್ಜಲ್ ಸರ್ಕಾರಿ ಪ್ರೌಢಶಾಲೆಗಳಲ್ಲಿ ರಮೇಶ್ ರಾಥೋಡ್ ಅತಿಥಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದರು ಅಚ್ಚರಿಯ ಸಂಗತಿಯೆಂದರೆ, ಎರಡೂ ಶಾಲೆಗಳ ವೇತನವನ್ನು ಕಕ್ಕೇರಾದ ಒಂದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಖಾತೆಗೆ ಜಮೆ ಮಾಡಿಸಿಕೊಳ್ಳಲಾಗಿತ್ತು. 2025ರ ಜುಲೈ ತಿಂಗಳ ಎರಡೂ ಶಾಲೆಗಳ ಹಾಜರಾತಿ ಪುಸ್ತಕದಲ್ಲೂ ಅವರ ಹೆಸರು ನಮೂದಾಗಿರುವುದು ದಾಖಲೆಗಳಿಂದ ಪತ್ತೆಯಾಗಿದೆ.
ಡಿಡಿಒ ಕೋಡ್ 303460 ಅಡಿ ಬಚಿಮಟ್ಟಿ ಶಾಲೆ ಯಲ್ಲಿ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಾಥೋಡ್, 2025-26ನೇ ಸಾಲಿನಲ್ಲಿ ದಾಖಲೆ ಗಳನ್ನು ಸಲ್ಲಿಸಿ ಡಿಡಿಒ ಕೋಡ್ 303820 ಹೊಂದಿ ರುವ ವಜ್ಜಲ್ ಶಾಲೆಗೂ ನೇಮಕಗೊಂಡಿದ್ದರು. ವಜ್ಜಲ್ ಶಾಲೆಯಿಂದ K-2 ಬಿಲ್ ಟೋಕನ್ ಸಂಖ್ಯೆ 2515442080 ಮೂಲಕ ಹಾಗೂ ಬಚಿಮಟ್ಟಿ ಶಾಲೆ ಯಿಂದ ಟೋಕನ್ ಸಂಖ್ಯೆ 2516812864 ಮೂಲಕ ಸರ್ಕಾರಿ ಖಜಾನೆಯಿಂದ ಹಣ ಜಮೆ ಮಾಡಲಾಗಿದೆ.
ನಿಯಮಾವಳಿಗಳ ಪ್ರಕಾರ ಅತಿಥಿ ಶಿಕ್ಷಕರು ಒಂದು ಶಾಲೆಯಲ್ಲಿ ಪೂರ್ಣಾವಧಿ ಹಾಜರಿರಬೇಕಿರುವು ದರಿಂದ ಇಲಾಖೆಯ ಕಣ್ತಪ್ಪಿಸಿ ಈ ಕೆಲಸ ಹೇಗೆ ನಡೆಯಿತು ಎಂಬ ಬಗ್ಗೆ ತೀವ್ರ ಅನುಮಾನಗಳು ವ್ಯಕ್ತವಾಗಿದ್ದು ತನಿಖೆಯನ್ನು ಮಾಡಲಾಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ಯಾದಗಿರಿ.....