LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶುಲ್ಕ ಕಟ್ಟಿಲ್ಲವೆಂದು ಪರೀಕ್ಷೆ ಗೆ ಅವಕಾಶ ನೀಡದ ಶಾಲೆ‌.....

ಬೆಂಗಳೂರು -

ಶುಲ್ಕ ಕಟ್ಟಿಲ್ಲವೆಂದು ಪರೀಕ್ಷೆ ಕೊಡದೇ ಹೊರಗೆ ಹಾಕಿದ ಘಟನೆ ಯೊಂದು ಬೆಂಗಳೂರಿನಲ್ಲಿ ನಡೆದಿದೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಯ ವಿರುದ್ಧ ಪೋಷಕರು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ ಶುಲ್ಕ ಪಾವತಿಸಲು ತಡವಾದ ಕಾರಣಕ್ಕೆ ಶಾಲಾ ಆಡಳಿತ ಮಂಡಳಿಯು ಇಬ್ಬರು ವಿದ್ಯಾರ್ಥಿಗಳನ್ನು ಪರೀಕ್ಷೆ ಯಿಂದ ವಂಚಿತರನ್ನಾಗಿಸಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿರುವ ಮಗು ಮತ್ತು ಏಳನೇ ತರಗತಿಯಲ್ಲಿ ಓದುತ್ತಿರುವ ಇನ್ನೊಂದು ಮಗುವಿಗೆ ಪರೀಕ್ಷೆ ಬರೆಯದಂತೆ ಶಾಲಾ ಆಡಳಿತ ಮಂಡಳಿ ತಡೆಹಿಡಿದಿದೆ ಶುಲ್ಕ ಪಾವತಿ ಬಾಕಿ ಇದ್ದ ಕಾರಣ, ಮಕ್ಕಳನ್ನು ಪರೀಕ್ಷಾ ಕೊಠಡಿಗೆ ಬಿಡದೇ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

 

ಪೋಷಕರು ಶಾಲೆಯ ಶುಲ್ಕದ ಬಗ್ಗೆ ಇ-ಮೇಲ್ ಮೂಲಕ ಸಂಪರ್ಕಿಸಿ, ಆರ್ಥಿಕ ಮುಗ್ಗಟ್ಟಿನಿಂದಾಗಿ ಸದ್ಯಕ್ಕೆ ಶುಲ್ಕ ಪಾವತಿಸಲು ಸಾಧ್ಯವಿಲ್ಲ, ದಯವಿಟ್ಟು ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಆದರೆ ಶಾಲೆ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡದೆ ನೇರವಾಗಿ ಮಕ್ಕಳನ್ನು ಪರೀಕ್ಷೆ ಯಿಂದ ದೂರವಿಟ್ಟಿದೆ.

ಒಂದನೇ ತರಗತಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ವಾರ್ಷಿಕ ಶುಲ್ಕ ನಿಗದಿಪಡಿಸಲಾಗಿದ್ದು, ಇದರಲ್ಲಿ ಮೊದಲ ಕಂತಾಗಿ 25 ಸಾವಿರ ರೂ. ಪಾವತಿಸಲಾಗಿದೆ. ಎರಡನೇ ಕಂತಿನ 25 ಸಾವಿರ ರೂ. ಪಾವತಿಗೆ ಪೋಷಕರು ಕಾಲಾವಕಾಶ ಕೇಳಿದರೂ ಶಾಲೆ ಒಪ್ಪಿಲ್ಲ.

ಶಾಲಾ ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದು ಎಷ್ಟು ಸರಿ?' ಎಂದು ಪೋಷಕರು ಪ್ರಶ್ನಿಸಿದ್ದಾರೆ. ಮಕ್ಕಳ ಮನಸ್ಥಿತಿಯ ಮೇಲೆ ಈ ಘಟನೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಶಾಲೆಯ ಇಂತಹ ಕಠಿಣ ಕ್ರಮದ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು......

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತನಿಖೆ ಆರಂಭಿಸಿದ IGP ಶಶಿಕುಮಾರ್.....ಅಧಿಕಾರಿಗಳೊಂದಿಗೆ ಸಭೆ.....ಸರ್ಕಾರಿ ಶಾಲೆಯಲ್ಲಿ ಸ್ಪೋಟ ಅಧಿಕಾರಿಗಳ ನಿರ್ಲಕ್ಷ್ಯ.....ದಸರಾ ರಜೆಯಲ್ಲೂ ವಿಶೇಷ ತರಗತಿ.....ಶಿಕ್ಷಕರಿಗೆ ತಲೆನೋವು ತಂದಿಟ್ಟ ಶಾಲಾ ಶಿಕ್ಷಣ ಇಲಾಖೆ ಆದೇಶ.....ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ರಜೆ ರಜೆ.....ಅಕ್ಟೋಬರ್ ತಿಂಗಳದ ರಜೆ ಪಟ್ಟಿ ಇಲ್ಲಿದೆ.....ರಾಜ್ಯ ಸರ್ಕಾರಿ ನೌಕರರೇ ಗಮನಿಸಿ.....ಕೇಂದ್ರ ಸ್ಥಾನದಲ್ಲೇ ಕಡ್ಡಾಯವಾಗಿ ವಾಸಿಸಲು ಸರ್ಕಾರದ ಆದೇಶ.....ವಿಶೇಷ ಸರ್ಕಾರಿ ಶಾಲೆ ಉದ್ಘಾಟನೆ.....ಸರ್ಕಾರಿ ಶಾಲೆಯ ಕಟ್ಟಡದ ನಿರ್ಮಾಣದ ಹಿಂದೆ ಇದೆ ದೊಡ್ಡ ಕಥೆ.....ಶಿಕ್ಷಕ ಈಶ್ವರ್ ರೆಡ್ಡಿ ಅಮಾನತು.....ದೂರು ನೀಡಿದ ವಿದ್ಯಾರ್ಥಿನಿ.....ಶಿಕ್ಷಕರ ವೇತನ ಅನುದಾನ ಬಿಡುಗಡೆ ಗಾಗಿ ಇಲಾಖೆಯ ಅಧಿಕಾರಿಗಳ ಭೇಟಿ..... ಭೇಟಿ ಮಾಡಿ ಅನುದಾನ ಬಿಡುಗಡೆಗೆ ಒತ್ತಾಯಿಸಿದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ.....ಪದವೀಧರ ಶಿಕ್ಷಕರ ಸಂಘಕ್ಕೆ ನೂತನ ಟೀಮ್..... ಅಧ್ಯಕ್ಷರಾಗಿ ನಿರುಪಾದಿ ಅವಿರೋಧ ಆಯ್ಕೆ.....ಪ್ರತಿ ಶನಿವಾರ ರಜೆ ಘೋಷಣೆ.....ನೌಕರರ ಹೋರಾಟಕ್ಕೆ ಮಣಿದ ಸರ್ಕಾರ.....