ಉಪ್ಪಿನಂಗಡಿ -
ಸರಕಾರಿ ಶಾಲೆಯಲ್ಲಿ ಕೊಠಡಿ ಕೊರತೆಯ ಮನಗಂಡ ಪೈಂಟರ್ ವೃತ್ತಿಯಲ್ಲಿರುವ ವ್ಯಕ್ತಿಯೊಬ್ಬರು ಸ್ವಯಂ ಪ್ರೇರಿತರಾಗಿ ನಿರ್ಮಿಸಿ ಕೊಟ್ಟ ಕರಾಯದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಅಕ್ಟೋಬರ್ 2 ರಂದು ಹಸ್ತಾಂತರಗೊಳ್ಳಲಿದೆ.ಹಿಂದೆ ತಣ್ಣೀರುಪಂತ, ಕುಪ್ಪೆಟ್ಟಿ, ಕಲ್ಲೇರಿ ಮೊದಲಾದ ಹಲವು ಊರುಗಳಿಗೆ ಆಸರೆಯಾಗಿದ್ದ ಕರಾಯ ಶಾಲೆಯ ಕಟ್ಟಡದ ಛಾವಣಿ ಕುಸಿದು ಅಪಾಯದ ಅಂಚಿಗೆ ಸಿಲುಕುವ ಸಾಧ್ಯತೆಯ ಬಗ್ಗೆ ಇತ್ತೀಚೆಗೆ ದೂರು ಗಳು ಕೇಳಿ ಬಂದಿದ್ದವು
ಶಿಕ್ಷಣ ಇಲಾಖೆಯು ಶಾಲೆಯನ್ನು ತತ್‌ಕ್ಷಣ ಬದಲಿ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಸೂಚನೆ ನೀಡಿತ್ತು. ಅದರಂತೆ ನಲಿಕಲಿ ಕಟ್ಟಡದ ಒಂದೇ ಕೊಠಡಿಯಲ್ಲಿ 3 ತರಗತಿಗಳು ನಡೆಸಬೇಕಾದ ಅನಿವಾರ್ಯತೆ ಉಂಟಾಯಿತು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ನಿಯೋಗ ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯ ಶಿಕ್ಷಣ ಸಚಿವರಿಗೂ ಮನವಿ ಸಲ್ಲಿಸಿದರೂ ಪ್ರಯೋಜನವಾ ಗಿರಲಿಲ್ಲ ಈ ಮಧ್ಯೆ ಸರಕಾರ ಒಂದೇ ಕೊಠಡಿಯಲ್ಲಿ 3 ತರಗತಿ ನಡೆಸದೇ ಪ್ರತ್ಯೇಕವಾಗಿ ನಡೆಸಲು ಆದೇಶಿ ಸಿತ್ತು. ಇದನ್ನೆಲ್ಲ ಅರಿತ ಗ್ರಾಮಸ್ಥ, ಶಿಕ್ಷಣ ಪ್ರೇಮಿ ಶಶಿಧರ್ ಕಾಪಿಕಾಡ್ ತಾವೇ ಸ್ವತಃ ಕಟ್ಟಡ ಕಟ್ಟಿ ಕೊಡಲು ಮುಂದಾದರು.
ಪೈಂಟಿಂಗ್ ವೃತ್ತಿ ಮಾಡುತ್ತಿರುವ ಅವರು ಶಾಲೆಯ ಪರಿಸ್ಥಿತಿ ಅರಿತು 7 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕೊಠಡಿಯನ್ನು ನಿರ್ಮಿಸುವ ಭರವಸೆಯೊಂದಿಗೆ ಕಾಮಗಾರಿ ಆರಂಭಿಸಿದರು. ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯ ಶಿಕ್ಷಕರ ಸಹಿತ ಕೆಲ ದಾನಿಗಳು ಖುದ್ದು ಭೇಟಿ ನೀಡಿ ಇವರ ಈ ಕಾಮಗಾರಿ ಕಂಡು ಕೈಜೋಡಿ ಸಿದರು. ಇದೀಗ ಕಟ್ಟಡ ಪೂರ್ಣಗೊಂಡಿದೆ.
ಪೈಂಟರ್ ವೃತ್ತಿಯ ಶಶಿಧರ್ ದೊಡ್ಡ ಉಪಕಾರ ಮಾಡಿದ್ದಾರೆ.ಶಾಲೆಯಲ್ಲಿ ಶೌಚಾಲಯ ಕೊರತೆಯಿದ್ದು, ಮಕ್ಕಳು ಸರತಿ ಸಾಲಿನಲ್ಲಿ ತೆರಳಬೇಕಾದ ಅನಿವಾ ರ್ಯತೆ ಇದೆ. ಇದನ್ನು ಹಲವು ಸಂಘ ಸಂಸ್ಥೆಗಳ ಗಮನಕ್ಕೆ ತರಲಾಗಿದೆ ಸರಕಾರದ ಅನುದಾನಕ್ಕೆ ಕಾಯಲಾಗುತ್ತಿದೆ ಎಂದು ಮುಖ್ಯ ಶಿಕ್ಷಕ ಮಹಾಲಿಂಗ ಕೆ. ಹೇಳಿದ್ದಾರೆ.ಇನ್ನೂ ಪೆಂಟರ್ ಮಾತನಾಡಿ ನಾನು ಬೇರೆ ಊರಿನಿಂದ ಇಲ್ಲಿಗೆ ಬಂದು ನೆಲೆಸಿದವನು. ಹಿಂದೆ ನನ್ನ ಮಕ್ಕಳು ಇಲ್ಲೇ ಕಲಿತಿದ್ದಾರೆ ಸ್ಥಳೀಯ ಸರಕಾರಿ ಶಾಲೆಗೆ ಒಳ್ಳೆಯದಾಗಬೇಕು, ಮಕ್ಕಳಿಗೆ ಅನುಕೂಲವಾಗಬೇಕು ಎಂಬ ದೃಷ್ಟಿಯಿಂದ ಕೊಠಡಿ ನಿರ್ಮಿಸಿದ್ದೇವೆ ಎನ್ನುತ್ತಾರೆ ಶಶಿಧರ್ ಕಾಪಿಕಾಡ್, ಸಾಮಾಜಿಕ ಕಾರ್ಯಕರ್ತರು.
ಸುದ್ದಿ ಸಂತೆ ನ್ಯೂಸ್ ಉಪ್ಪಿನಂಗಡಿ.....