LIVE TV LocalCrimeNationalInternationalPoliticsEducationTechnologyEntertainmentSportsFeature
State News

ತನಿಖೆ ಆರಂಭಿಸಿದ IGP ಶಶಿಕುಮಾರ್.....ಅಧಿಕಾರಿಗಳೊಂದಿಗೆ ಸಭೆ.....

ಮಂಗಳೂರು -

ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣದ ಮರು ತನಿಖೆ ಗೆ ನ್ಯಾಯಾಲಯ ಆದೇಶ ಮಾಡಿದ ಬೆನ್ನಲ್ಲೇ ತನಿಖಾ ಅಧಿಕಾರಿ ಯಾಗಿರುವ ಐಜಿಪಿ ಶಶಿಕುಮಾರ್ ಅವರು ಪೂರ್ವಭಾವಿ ಸಭೆ ನಡೆಸಿ ತನಿಖೆ ಆರಂಭ ಮಾಡಿದ್ದಾರೆ ಧರ್ಮಸ್ಥಳ ಗ್ರಾಮದಲ್ಲಿ 2014ರಲ್ಲಿ ನಡೆದಿದ್ದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಆರಂಭಿಸುವುದಕ್ಕೆ ಪೂರ್ವಭಾವಿಯಾಗಿ ನಗರದಲ್ಲಿ ಸಭೆ ನಡೆಸಿತು.

ಎಸ್‌ಐಟಿ ಮುಖ್ಯಸ್ಥರಾಗಿರುವ ಐಜಿಪಿ ಎನ್‌. ಶಶಿಕುಮಾರ್‌, ಸದಸ್ಯರಾಗಿರುವ ಮಂಗಳೂರು ಪೊಲೀಸ್ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ, ರಾಜ್ಯ ಗುಪ್ತ ವಾರ್ತೆ ವಿಭಾಗದ ಎಸ್‌ಪಿ ನಿಶಾ ಜೇಮ್ಸ್, ಸಿಐಡಿ ಎಸ್‌ಪಿ ಲೋಕೇಶ ಜಗಲಾಸರ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಶಶಿಕುಮಾರ್ ಅವರು ತನಿಖೆಯ ಸ್ವರೂಪ, ಇದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಕುರಿತು ಚರ್ಚಿಸಿದರು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.ಎಸ್‌ಐಟಿಯಿಂದ ತಮ್ಮನ್ನು ಕೈಬಿಡುವಂತೆ ಕೋರಿ ಪತ್ರ ಬರೆದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಎಸ್‌ಪಿ ವೆಂಕಟೇಶ್ ಪ್ರಸನ್ನ ಅವರು ಈ ಸಭೆಯಲ್ಲಿ ಭಾಗವಹಿಸಿರಲಿಲ್ಲ.

ಎಸ್‌ಐಟಿಗೆ ಇಲ್ಲಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಕಚೇರಿ ವ್ಯವಸ್ಥೆ ಕಲ್ಪಿಸಲಾಗಿದೆ. ನಿಶಾ ಜೇಮ್ಸ್‌ ಹಾಗೂ ಲೋಕೇಶ ಜಗಲಾಸರ ಅವರು ಬೆಳ್ತಂಗಡಿಗೆ ತೆರಳಿ ಅಲ್ಲಿನ ಪೊಲೀಸ್‌ ಠಾಣೆಯ ಪಕ್ಕದಲ್ಲಿರುವ ಕಟ್ಟಡವನ್ನು ಎಸ್‌ಐಟಿ ಕಚೇರಿಯ ನ್ನಾಗಿ ಬಳಸುವ ಕುರಿತು ಪರಿಶೀಲಿಸಿದರು

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಕುರಿತ ಪ್ರಕರಣದ ತನಿಖೆಗೆ ಈ ಹಿಂದೆ ರಚಿಸಿದ್ದ ಎಸ್‌ಐಟಿಯು ಅದೇ ಕಟ್ಟಡವನ್ನು ಕಚೇರಿಯನ್ನಾಗಿ ಬಳಸಿಕೊಂಡಿತ್ತು.ಸೌಜನ್ಯಾ ಅವರ ತಾಯಿ ಕುಸುಮಾವತಿ ಗೌಡ ಅವರು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಪ್ರಕರಣದ ಮರು ತನಿಖೆಗೆ ಎಸ್‌ಐಟಿ ರಚಿಸುವಂತೆ ಹಾಗೂ ಮೂರು ತಿಂಗಳೊ ಳಗೆ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಅದಕ್ಕಾಗಿ ರಾಜ್ಯ ಸರ್ಕಾರ ಈಚೆಗೆ ಎಸ್‌ಐಟಿಯನ್ನು ರಚಿಸಿದೆ. ತಂಡವು ತನಿಖೆಯನ್ನು ಇನ್ನಷ್ಟೇ ಆರಂಭಿ ಸಬೇಕಿದೆ.

ಸುದ್ದಿ ಸಂತೆ ನ್ಯೂಸ್ ಮಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತನಿಖೆ ಆರಂಭಿಸಿದ IGP ಶಶಿಕುಮಾರ್.....ಅಧಿಕಾರಿಗಳೊಂದಿಗೆ ಸಭೆ.....ಸರ್ಕಾರಿ ಶಾಲೆಯಲ್ಲಿ ಸ್ಪೋಟ ಅಧಿಕಾರಿಗಳ ನಿರ್ಲಕ್ಷ್ಯ.....ದಸರಾ ರಜೆಯಲ್ಲೂ ವಿಶೇಷ ತರಗತಿ.....ಶಿಕ್ಷಕರಿಗೆ ತಲೆನೋವು ತಂದಿಟ್ಟ ಶಾಲಾ ಶಿಕ್ಷಣ ಇಲಾಖೆ ಆದೇಶ.....ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ರಜೆ ರಜೆ.....ಅಕ್ಟೋಬರ್ ತಿಂಗಳದ ರಜೆ ಪಟ್ಟಿ ಇಲ್ಲಿದೆ.....ರಾಜ್ಯ ಸರ್ಕಾರಿ ನೌಕರರೇ ಗಮನಿಸಿ.....ಕೇಂದ್ರ ಸ್ಥಾನದಲ್ಲೇ ಕಡ್ಡಾಯವಾಗಿ ವಾಸಿಸಲು ಸರ್ಕಾರದ ಆದೇಶ.....ವಿಶೇಷ ಸರ್ಕಾರಿ ಶಾಲೆ ಉದ್ಘಾಟನೆ.....ಸರ್ಕಾರಿ ಶಾಲೆಯ ಕಟ್ಟಡದ ನಿರ್ಮಾಣದ ಹಿಂದೆ ಇದೆ ದೊಡ್ಡ ಕಥೆ.....ಶಿಕ್ಷಕ ಈಶ್ವರ್ ರೆಡ್ಡಿ ಅಮಾನತು.....ದೂರು ನೀಡಿದ ವಿದ್ಯಾರ್ಥಿನಿ.....ಶಿಕ್ಷಕರ ವೇತನ ಅನುದಾನ ಬಿಡುಗಡೆ ಗಾಗಿ ಇಲಾಖೆಯ ಅಧಿಕಾರಿಗಳ ಭೇಟಿ..... ಭೇಟಿ ಮಾಡಿ ಅನುದಾನ ಬಿಡುಗಡೆಗೆ ಒತ್ತಾಯಿಸಿದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ.....ಪದವೀಧರ ಶಿಕ್ಷಕರ ಸಂಘಕ್ಕೆ ನೂತನ ಟೀಮ್..... ಅಧ್ಯಕ್ಷರಾಗಿ ನಿರುಪಾದಿ ಅವಿರೋಧ ಆಯ್ಕೆ.....ಪ್ರತಿ ಶನಿವಾರ ರಜೆ ಘೋಷಣೆ.....ನೌಕರರ ಹೋರಾಟಕ್ಕೆ ಮಣಿದ ಸರ್ಕಾರ.....