LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಶಾಲೆಯಲ್ಲಿ ಸ್ಪೋಟ ಅಧಿಕಾರಿಗಳ ನಿರ್ಲಕ್ಷ್ಯ.....

ತುಮಕೂರು -

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ಪೋಟ ಪ್ರಕರಣದಲ್ಲಿ ಈಗಾಗಲೇ ತೀವ್ರವಾಗಿ ಗಾಯಗೊಂಡಿದ್ದ ಅಡುಗೆ ಸಹಾಯಕಿ ನಿಧನರಾಗಿದ್ದು ಇನ್ನೂ ಇತ್ತ ಈ ಒಂದು ಘಟನೆ ಸಾರ್ವಜನಿಕರನ್ನು  ಬೆಚ್ಚಿಬೀಳಿಸಿದೆ

ಬಿಸಿಊಟ ತಯಾರಿಸುವ ಅಡುಗೆ ಕೋಣೆಯಲ್ಲಿ ಇದ್ದಕ್ಕಿದ್ದಂತೆ ಭಾರಿ ಪ್ರಮಾಣದ ಸ್ಪೋಟ ಸಂಭವಿ ಸಿದ್ದು, ಈ ವೇಳೆ ಕರ್ತವ್ಯದಲ್ಲಿದ್ದ ಅಡುಗೆ ಸಹಾಯಕಿ ಲತಾ ಎಂಬುವರು ತೀವ್ರವಾಗಿ ಗಾಯಗೊಂಡಿದ್ದರು 

ಸ್ಪೋಟದ ತೀವ್ರತೆಗೆ ಇಡೀ ಅಡುಗೆ ಕೋಣೆಯ ಗೋಡೆಗಳು ಕುಸಿದುಬಿದ್ದಿದ್ದು, ಛಾವಣಿ ಸಂಪೂರ್ಣ ವಾಗಿ ಜಖಂಗೊಂಡಿದೆ ಗಾಯಾಳು ಲತಾ ಅವರನ್ನು ತಕ್ಷಣವೇ ರಕ್ಷಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು ಚಿಕಿತ್ಸೆ ಫಲಿಸದೇ ನಿಧನರಾಗಿ ದ್ದಾರೆ‌‌ ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ವಾಗಿಲ್ಲ

ಘಟನೆಯ ವಿವರ ಹಾಗೂ ಪ್ರತ್ಯಕ್ಷದರ್ಶಿಗಳ ಕಳವಳ: ಶಾಲಾ ಮಕ್ಕಳಿಗೆ ಬಿಸಿಊಟ ಸಿದ್ಧಪಡಿಸುವ ವೇಳೆ ಈ ದುರಂತ ಸಂಭವಿಸಿದ್ದು ಸ್ಪೋಟದ ರಭಸಕ್ಕೆ ಸುತ್ತ ಮುತ್ತಲಿನ ಗ್ರಾಮಸ್ಥರು ಓಡಿ ಬಂದಿದ್ದಾರೆ. ಅಡುಗೆ ಕೋಣೆಯಲ್ಲಿದ್ದ ದೊಡ್ಡ ಸಾಂಬಾರ್ ಕುಕ್ಕರ್ ಸ್ಪೋಟ ಗೊಂಡಿದೆಯೇ ಅಥವಾ ಗ್ಯಾಸ್ ಸಿಲಿಂಡರ್ ಸೋರಿಕೆ ಯಾಗಿ ಈ ದುರಂತ ಸಂಭವಿಸಿದೆಯೇ ಎಂಬ ಬಗ್ಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ.

ಸ್ಪೋಟದ ರಭಸ ಎಷ್ಟಿತ್ತೆಂದರೆ ಕಟ್ಟಡದ ಗೋಡೆಗಳು ಧರಾಶಾಹಿಯಾಗಿದ್ದು, ಅದೃಷ್ಟವಶಾತ್ ಆ ಸಮಯ ದಲ್ಲಿ ಶಾಲಾ ಮಕ್ಕಳು ಅಡುಗೆ ಕೋಣೆಯ ಹತ್ತಿರ ವಿಲ್ಲದಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂ ತಾಗಿದೆ.ಇನ್ನೂ ಇತ್ತ ಈ ಒಂದು ಘಟನೆ ಗೆ ಅಧಿಕಾರಿ ಗಳ ಬೇಜವಾಬ್ದಾರಿಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆಶಾಲೆ ಮುಂಭಾಗದಲ್ಲೇ ಇಷ್ಟೊಂದು ದೊಡ್ಡ ಮಟ್ಟದ ಭೀಕರ ಸ್ಪೋಟ ಸಂಭವಿಸಿ, ಅಡುಗೆ ಸಿಬ್ಬಂದಿ ರಕ್ತಸ್ರಾವದಿಂದ ಬಳಲುತ್ತಿದ್ದರೂ ಘಟನೆ ನಡೆದು ಮೂರ್ನಾಲ್ಕು ಗಂಟೆಗಳು ಕಳೆದರೂ ಸಂಬಂಧಪಟ್ಟ ಶಿಕ್ಷಣ ಇಲಾಖೆಯಾಗಲಿ ಅಥವಾ ತಾಲೂಕು ಮಟ್ಟದ ಯಾವುದೇ ಹಿರಿಯ ಅಧಿಕಾರಿಗ ಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದಿರು ವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣ ವಾಗಿದೆ. ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಇಲಾಖೆಯು ಇಷ್ಟೊಂದು ಬೇಜವಾಬ್ದಾರಿತನ ತೋರುತ್ತಿರುವುದಕ್ಕೆ ಗ್ರಾಮಸ್ಥರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಪೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ತುಮಕೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತನಿಖೆ ಆರಂಭಿಸಿದ IGP ಶಶಿಕುಮಾರ್.....ಅಧಿಕಾರಿಗಳೊಂದಿಗೆ ಸಭೆ.....ಸರ್ಕಾರಿ ಶಾಲೆಯಲ್ಲಿ ಸ್ಪೋಟ ಅಧಿಕಾರಿಗಳ ನಿರ್ಲಕ್ಷ್ಯ.....ದಸರಾ ರಜೆಯಲ್ಲೂ ವಿಶೇಷ ತರಗತಿ.....ಶಿಕ್ಷಕರಿಗೆ ತಲೆನೋವು ತಂದಿಟ್ಟ ಶಾಲಾ ಶಿಕ್ಷಣ ಇಲಾಖೆ ಆದೇಶ.....ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ರಜೆ ರಜೆ.....ಅಕ್ಟೋಬರ್ ತಿಂಗಳದ ರಜೆ ಪಟ್ಟಿ ಇಲ್ಲಿದೆ.....ರಾಜ್ಯ ಸರ್ಕಾರಿ ನೌಕರರೇ ಗಮನಿಸಿ.....ಕೇಂದ್ರ ಸ್ಥಾನದಲ್ಲೇ ಕಡ್ಡಾಯವಾಗಿ ವಾಸಿಸಲು ಸರ್ಕಾರದ ಆದೇಶ.....ವಿಶೇಷ ಸರ್ಕಾರಿ ಶಾಲೆ ಉದ್ಘಾಟನೆ.....ಸರ್ಕಾರಿ ಶಾಲೆಯ ಕಟ್ಟಡದ ನಿರ್ಮಾಣದ ಹಿಂದೆ ಇದೆ ದೊಡ್ಡ ಕಥೆ.....ಶಿಕ್ಷಕ ಈಶ್ವರ್ ರೆಡ್ಡಿ ಅಮಾನತು.....ದೂರು ನೀಡಿದ ವಿದ್ಯಾರ್ಥಿನಿ.....ಶಿಕ್ಷಕರ ವೇತನ ಅನುದಾನ ಬಿಡುಗಡೆ ಗಾಗಿ ಇಲಾಖೆಯ ಅಧಿಕಾರಿಗಳ ಭೇಟಿ..... ಭೇಟಿ ಮಾಡಿ ಅನುದಾನ ಬಿಡುಗಡೆಗೆ ಒತ್ತಾಯಿಸಿದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ.....ಪದವೀಧರ ಶಿಕ್ಷಕರ ಸಂಘಕ್ಕೆ ನೂತನ ಟೀಮ್..... ಅಧ್ಯಕ್ಷರಾಗಿ ನಿರುಪಾದಿ ಅವಿರೋಧ ಆಯ್ಕೆ.....ಪ್ರತಿ ಶನಿವಾರ ರಜೆ ಘೋಷಣೆ.....ನೌಕರರ ಹೋರಾಟಕ್ಕೆ ಮಣಿದ ಸರ್ಕಾರ.....