ನವದೆಹಲಿ -
ಪ್ರತೀ ಶನಿವಾರ ಬ್ಯಾಂಕ್ʼಗಳಿಗೆ ರಜೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ ಹೌದು ಬ್ಯಾಂಕ್ ನೌಕರರ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಇನ್ಮುಂದೆ ಪ್ರತಿ ಶನಿವಾರ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಲಾಗಿದೆ. ಈ ಸಂಬಂಧ ಕೇಂದ್ರ ಹಣಕಾಸು ಇಲಾಖೆ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಹೊಸ ವ್ಯವಸ್ಥೆ ಜಾರಿಗೆ ಬರುವಂತೆ ಆದೇಶಿಸಿದೆ.
ಈವರೆಗೆ ಬ್ಯಾಂಕ್‌ಗಳಿಗೆ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ರಜೆ ಇತ್ತು. ಇದೀಗ ಬ್ಯಾಂಕ್ ನೌಕರರ ಒತ್ತಾಯದ ಹಿನ್ನೆಲೆಯಲ್ಲಿ ತಿಂಗಳ ಎಲ್ಲಾ ಶನಿವಾರಗಳನ್ನು ರಜಾ ದಿನಗಳಾಗಿ ಘೋಷಿಸ ಲಾಗಿದೆ ಎಂದು ತಿಳಿಸಲಾಗಿದೆ.
ವಾರಕ್ಕೆ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೊಳಿ ಸಬೇಕು ಹಾಗೂ ಪ್ರತೀ ಶನಿವಾರ ಬ್ಯಾಂಕ್‌ಗಳಿಗೆ ರಜೆ ನೀಡಬೇಕು ಎಂಬುದು ಬ್ಯಾಂಕ್ ನೌಕರರ ಸಂಘಟನೆ ಗಳ ಪ್ರಮುಖ ಬೇಡಿಕೆಯಾಗಿತ್ತು.ಇತ್ತೀಚೆಗೆ ಇದೇ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ಸಂಘಟನೆಗಳು ಮೂರು ದಿನಗಳ ಮುಷ್ಕರಕ್ಕೆ ಮುಂದಾಗಿದ್ದವು. ಆದರೆ ಕೊನೆಯ ಕ್ಷಣದಲ್ಲಿ ಮುಷ್ಕರವನ್ನು ಕೈಬಿಡಲಾಗಿತ್ತು.
ಭಾರತೀಯ ಬ್ಯಾಂಕ್‌ಗಳ ಸಂಘ (IBA) ಮತ್ತು ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟದ ನಡುವೆ ನಡೆದ ಸಭೆಯಲ್ಲಿ ತಿಂಗಳ ಎಲ್ಲಾ ಶನಿವಾರಗಳನ್ನು ರಜಾದಿನಗಳಾಗಿ ಘೋಷಿಸುವ ಬೇಡಿಕೆಯ ಕುರಿತು ಚರ್ಚಿಸಲಾಗಿತ್ತು. ಈ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸುವ ತೀರ್ಮಾನವನ್ನೂ ಕೈಗೊಳ್ಳಲಾ ಗಿತ್ತು.ಇದೀಗ ಮುಷ್ಕರಕ್ಕೂ ಮುನ್ನ ಕೇಂದ್ರ ಸರ್ಕಾರದ ಮುಂದಿಟ್ಟಿದ್ದ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಪ್ರತೀ ಶನಿವಾರ ಬ್ಯಾಂಕ್‌ಗಳಿಗೆ ರಜೆ ನೀಡುವ ಬೇಡಿಕೆ ಈಡೇರಿದೆ ಎಂದು ತಿಳಿಸಲಾಗಿದೆ. ಇದರೊಂದಿಗೆ ಬ್ಯಾಂಕ್ ನೌಕರರಿಗೆ ವಾರದಲ್ಲಿ ಐದು ದಿನಗಳ ಕೆಲಸ ಹಾಗೂ ಶನಿವಾರ-ಭಾನುವಾರ ವಾರಾಂತ್ಯದ ರಜೆ ಸಿಗಲಿದೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ.....