LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ನೌಕರರ ಅಧಿಕಾರಿಗಳ ಮನೆ ಜಾಲಾಡಿದ ಲೋಕಾಯುಕ್ತರು.....

ತುಮಕೂರು -

ತುಮಕೂರು ಮಹಾನಗರ ಪಾಲಿಕೆಗೆ ಸೇರಿದ್ದ 9 ನಿವೇಶನಗಳನ್ನು ಅಕ್ರಮವಾಗಿ ಖಾಸಗಿಯವರಿಗೆ ಖಾತೆ ಮಾಡಿಕೊಟ್ಟು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಪಾಲಿಕೆಯ ಕಂದಾಯ ಉಪ ಆಯುಕ್ತ ವಲಯ-1ರ ಕಚೇರಿ ಮತ್ತು ಅಧಿಕಾರಿ ಗಳ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು.

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದ ಶಿರಾ ಗೇಟ್‌ನಲ್ಲಿ ನಿರ್ಮಾಣಗೊಂಡಿದ್ದ ಐಡಿಎಸ್‌ಎಂಟಿ ಲೇಔಟ್‌ ತುಮಕೂರು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿತ್ತು. ಇದರಲ್ಲಿ ವಾರ್ಡ್‌ ನಂ. 2 ಮತ್ತು 3ರಲ್ಲಿನ ನಿವೇಶನ ಸಂಖ್ಯೆ 589ರಿಂದ 597 ರವರೆಗಿನ 9 ನಿವೇಶನಗಳು ಪಾಲಿಕೆಯ ಸ್ವತ್ತಾಗಿದ್ದವು.

ಆದರೆ ತುಮಕೂರು ಮಹಾನಗರ ಪಾಲಿಕೆಯಲ್ಲಿ 2017ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಸ್‌ಡಿಸಿ ಮತ್ತು ವಾರ್ಡ್‌ ನಂ.2 ಮತ್ತು 3ರ ಕೇಸ್‌ ವರ್ಕರ್‌ ಶ್ರೀನಿವಾಸಮೂರ್ತಿ ಜಿ.ಎನ್‌., ಪ್ರಭಾರ ಕಂದಾಯ ನಿರೀಕ್ಷಕ ಶಂಕರಪ್ಪ, ಕಂದಾಯ ಅಧಿಕಾರಿ ರತ್ನಮ್ಮ ಎಲ್‌.ಎನ್‌., ಕಂದಾಯ ಪ್ರಭಾರ ಉಪ ಆಯುಕ್ತ ತುಕಾರಾಂ ಐ. ನಾಯಕ್‌ ಹಾಗೂ ಪಾಲಿಕೆ ಆಯುಕ್ತ ರಾಗಿದ್ದ ಮಂಜುನಾಥ್‌ ಅವರು ಪಾಲಿಕೆ ಹೆಸರಿನಲ್ಲಿದ್ದ 9 ನಿವೇಶನಗಳ ಪಿಐಡಿ ನಂಬರ್‌ ಬ್ಲಾಕ್‌ ಮಾಡಿ ಯಾವುದೇ ದಾಖಲೆಗಳು ಇಲ್ಲದಿದ್ದರೂ ಖಾಸಗಿ ವ್ಯಕ್ತಿಗಳಾದ ಟಿ.ದಾದಯ್ಯ ಮತ್ತು ಅವರ ಮಕ್ಕಳಾದ ಟಿ.ಡಿ.ಶುಭಾ ಮತ್ತು ಟಿ.ಡಿ.ಉಮಾ ಅವರ ಹೆಸರಿಗೆ ಪಿಐಡಿ ನಂಬರ್‌ ಅನ್ನು ಅಕ್ರಮವಾಗಿ ಸೃಷ್ಟಿಸಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಮಂಜುನಾಥ ಜಿ. ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಈ ಸಂಬಂಧ ಲೋಕಾಯುಕ್ತ ಎಸ್‌ಪಿ ಟಿ.ಮಲ್ಲೇಶ್‌ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಮಂಜುನಾಥ ಎಂ., ಇನ್‌ಸ್ಪೆಕ್ಟರ್‌ಗಳಾದ ಸಂತೋಷ್‌ ಕೆ.ಎಂ., ನಿರ್ಮಲಾ ವಿ., ರಾಜು ಟಿ., ರಾಘವೇಂದ್ರ ಜಿ.ಕೆ. ಮತ್ತು ಸುನೀಲ್‌ ಕುಮಾರ್‌ ಎಚ್‌.ಎಸ್‌. ನೇತೃತ್ವದ 6 ತಂಡಗಳು ಗುರುವಾರ ಮಹಾನಗರ ಪಾಲಿಕೆ ಕಂದಾಯ ವಿಭಾಗ ಮತ್ತು ಆರೋಪಿಗಳ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ತುಮಕೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಾರ್ಜ್ ಕೊಟ್ಟರು ಕಬಾರ್ಡ್ ಕೀ ಕೊಡದ JE.....HDMC ಯಲ್ಲಿ ಇದೆಂಥಾ ಆಡಳಿತ ವ್ಯವಸ್ಥೆ.....ಸರ್ಕಾರಿ ನೌಕರಿ ಬಿಡುವಂತೆ ಪತ್ನಿಗೆ ಗಂಡನ ಕಿರುಕುಳ.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ.....ಹತ್ತು ವರ್ಷಗಳ ನಂತರ ನಕಲಿ ಜಾಲ ಪತ್ತೆ.....GPT ಶಿಕ್ಷಕರ ಸಂಘಕ್ಕೆ ಹೊಸ ಟೀಮ್..... ರಾಜ್ಯಾಧ್ಯಕ್ಷರಾಗಿ ಮುರಳೀಧರ್ ಆಯ್ಕೆ.....ತಿಂಗಳಾದರು ಪತ್ತೆಯಾಗದ ಸರ್ಕಾರಿ ನೌಕರ.....ಆತಂಕ ಸೃಷ್ಟಿಸಿದ ನಾಪತ್ತೆ ಪ್ರಕರಣ.....ಭಾನುವಾರವಾದರೂ ಶಾಲೆಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಕಡ್ಡಾಯ ಆಚರಣೆ.....ಇಲಾಖೆಯಿಂದ ಆದೇಶ.....ಸರ್ಕಾರಿ ನೌಕರರ ಅಧಿಕಾರಿಗಳ ಮನೆ ಜಾಲಾಡಿದ ಲೋಕಾಯುಕ್ತರು.....12 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ನೌಕರ.....ದಸರಾ ರಜೆ ಮುಂದುವರೆಸಿ.....ರಾಜ್ಯಾಧ್ಯಕ್ಷರಿಗೆ ಪತ್ರ ಬರೆದ ಶಿಕ್ಷಕರು.....BEO ಕಚೇರಿ SDA ನೌಕರ ಅಮಾನತು.....