ಯಾದಗಿರಿ -
ಸರ್ಕಾರಿ ನೌಕರಿ ಬಿಡುವಂತೆ ಪತ್ನಿಗೆ ಗಂಡನ ಕಿರುಕುಳ ನಡೆದ ಘಟನೆ ಯಾದಗಿರಿ ಯಲ್ಲಿ ನಡೆದಿದೆ ಸರ್ಕಾರಿ ನೌಕರಿ ಬಿಡುವಂತೆ ಪತ್ನಿಗೆ ಕಿರುಕುಳ ನೀಡಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಆಕೆಯ ಪತಿ ಸೇರಿ ಮೂವರ ವಿರುದ್ಧ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಸಗಿ ತಾಲ್ಲೂಕಿನ ಕುರೆಕನಾಳದ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಅನಸೂಯಾ ಜಗದೀಶ ಅವರು ನೀಡಿದ ದೂರಿನ ಅನ್ವಯ ವಸತಿ ಪತಿ ಜಗದೀಶ ಶಂಕ್ರಪ್ಪ, ಅತ್ತೆ ಸಾಬವ್ವ ಶಂಕ್ರಪ್ಪ ಹಾಗೂ ನಾದಿನಿ ಜಗದೇವಿ ಜುಮ್ಮಣ್ಣ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಅನಸೂಯಾ ಹಾಗೂ ಜಗದೀಶ ಅವರು ಮದುವೆಯಾಗಿದ್ದರು. ಮದುವೆ ಯಾದ ಮೂರು ವರ್ಷಗಳ ನಂತರ ಜಗದೀಶ ಪತ್ನಿಗೆ ಆರೋಗ್ಯ ಸಂರಕ್ಷಣಾಧಿಕಾರಿ ನೌಕರಿ ಬಿಡುವಂತೆ ಒತ್ತಾಯಿಸಿದರು. 'ದುಬಾರಿ ದಿನಗಳಲ್ಲಿ ಇಬ್ಬರೂ ನೌಕರಿ ಮಾಡಿದರೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಉತ್ತಮ ಜೀವನ ನಡೆಸಬಹುದು' ಎಂದು ಪತ್ನಿ ಹೇಳಿದರೂ ಗಂಡ ಕೇಳಲಿಲ್ಲ. ಪತ್ನಿಗೆ ದೈಹಿಕ, ಮಾನಸಿಕವಾಗಿ ಕಿರುಕುಳ ನೀಡಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂದು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಯಾದಗಿರಿ....