LIVE TV LocalCrimeNationalInternationalPoliticsEducationTechnologyEntertainmentSportsFeature
State News

GPT ಶಿಕ್ಷಕರ ಸಂಘಕ್ಕೆ ಹೊಸ ಟೀಮ್..... ರಾಜ್ಯಾಧ್ಯಕ್ಷರಾಗಿ ಮುರಳೀಧರ್ ಆಯ್ಕೆ.....

ಬೆಂಗಳೂರು -

GPT ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಮುರಳೀಧರ್ ಆಯ್ಕೆ ಹೌದು ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಪೋಲೂರು ಮುರಳೀಧರ್,ಪ್ರಧಾನ ಕಾರ್ಯ ದರ್ಶಿಯಾಗಿ ಚಂದ್ರಶೇಖರ ಹಕಾರಿ,ಖಜಾಂಚಿಯಾಗಿ ಶಂಕರ್ ಕೆ.ಎನ್.ಆಯ್ಕೆಯಾಗಿದ್ದಾರೆ. 

ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ  ಪೋಲೂರು ಮುರುಳಿಧರ್ ಅವರು 253 ಮತಗಳನ್ನು ಪಡೆದು, ಪ್ರತಿಸ್ಪರ್ಧಿ ಅಮರನಾಥ್ ಎನ್. ಅವರ 68 ಮತಗಳ ವಿರುದ್ಧ, 185 ಮತಗಳ ಭರ್ಜರಿ ಅಂತರದಲ್ಲಿ ಗೆಲುವು ಸಾಧಿಸಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ  ಚಂದ್ರಶೇಖರ ಹಕಾರಿ ಅವರು 213 ಮತಗಳನ್ನು ಪಡೆದು,ಡಾ. ದೊರೆಸ್ವಾಮಿ ಕೆ.ಎನ್. ಅವರ 110 ಮತಗಳ ವಿರುದ್ಧ, 103 ಮತಗಳ ಅಂತರದಿಂದ ಜಯಗಳಿಸಿದರು

ರಾಜ್ಯ ಖಜಾಂಚಿ ಸ್ಥಾನಕ್ಕೆ ಶಂಕರ ಕೆ.ಎನ್. ಅವರು 222 ಮತಗಳನ್ನು ಪಡೆದು ವಿಜೇತರಾದರೆ ಪ್ರತಿಸ್ಪರ್ಧಿ ನಾಗಭೂಷಣ್ ಆರ್.ಎಸ್. ಅವರು 101 ಮತಗಳನ್ನು ಪಡೆದರು.ರಾಜ್ಯ ಚುನಾವಣಾಧಿಕಾರಿ ಲಕ್ಷ್ಮಿ ನಾಥ್ ಎಸ್. ಅವರ ನೇತೃತ್ವದಲ್ಲಿ ಅ.9ರಂದು ನಡೆದ ಚುನಾವಣೆಯಲ್ಲಿ ಒಟ್ಟು 341 ಮತದಾರರ ಪೈಕಿ 323 ಮಂದಿ ಮತ ಚಲಾಯಿಸಿದರು.

ಚುನಾವಣಾ ಫಲಿತಾಂಶವನ್ನು ರಾಜ್ಯ ಚುನಾವ ಣಾಧಿಕಾರಿ ಲಕ್ಷ್ಮಿ ನಾಥ್ ಎಸ್. ಅವರು ಅಧಿಕೃತವಾಗಿ ಘೋಷಿಸಿದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಾರ್ಜ್ ಕೊಟ್ಟರು ಕಬಾರ್ಡ್ ಕೀ ಕೊಡದ JE.....HDMC ಯಲ್ಲಿ ಇದೆಂಥಾ ಆಡಳಿತ ವ್ಯವಸ್ಥೆ.....ಸರ್ಕಾರಿ ನೌಕರಿ ಬಿಡುವಂತೆ ಪತ್ನಿಗೆ ಗಂಡನ ಕಿರುಕುಳ.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ.....ಹತ್ತು ವರ್ಷಗಳ ನಂತರ ನಕಲಿ ಜಾಲ ಪತ್ತೆ.....GPT ಶಿಕ್ಷಕರ ಸಂಘಕ್ಕೆ ಹೊಸ ಟೀಮ್..... ರಾಜ್ಯಾಧ್ಯಕ್ಷರಾಗಿ ಮುರಳೀಧರ್ ಆಯ್ಕೆ.....ತಿಂಗಳಾದರು ಪತ್ತೆಯಾಗದ ಸರ್ಕಾರಿ ನೌಕರ.....ಆತಂಕ ಸೃಷ್ಟಿಸಿದ ನಾಪತ್ತೆ ಪ್ರಕರಣ.....ಭಾನುವಾರವಾದರೂ ಶಾಲೆಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಕಡ್ಡಾಯ ಆಚರಣೆ.....ಇಲಾಖೆಯಿಂದ ಆದೇಶ.....ಸರ್ಕಾರಿ ನೌಕರರ ಅಧಿಕಾರಿಗಳ ಮನೆ ಜಾಲಾಡಿದ ಲೋಕಾಯುಕ್ತರು.....12 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ನೌಕರ.....ದಸರಾ ರಜೆ ಮುಂದುವರೆಸಿ.....ರಾಜ್ಯಾಧ್ಯಕ್ಷರಿಗೆ ಪತ್ರ ಬರೆದ ಶಿಕ್ಷಕರು.....BEO ಕಚೇರಿ SDA ನೌಕರ ಅಮಾನತು.....