LIVE TV LocalCrimeNationalInternationalPoliticsEducationTechnologyEntertainmentSportsFeature
State News

ದಸರಾ ರಜೆ ಮುಂದುವರೆಸಿ.....ರಾಜ್ಯಾಧ್ಯಕ್ಷರಿಗೆ ಪತ್ರ ಬರೆದ ಶಿಕ್ಷಕರು.....

ಬೆಂಗಳೂರು -

 

ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ದಸರಾ ರಜೆಯನ್ನು ಮುಂದುವರೆಸುವಂತೆ ಶಿಕ್ಷಣ ಇಲಾಖೆಯ ಮಾನ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಇತ್ತಾಯಿ ಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾ ಧ್ಯಕ್ಷರಿಗೆ ಶಿಕ್ಷಕರು ಪತ್ರ ಬರೆದಿದ್ದಾರೆ ಹೌದು ರಾಜ್ಯದ ಸಮಸ್ತ ಶಿಕ್ಷಕ ಬಂಧುಗಳ ಪರವಾಗಿ ಷಡಾಕ್ಷರಿ ಅವರ ಅಭಿಮಾನಿ ಬಳಗದವರು ಪತ್ರ ಬರೆದು ಆಗ್ರಹ ಮಾಡಿದ್ದಾರೆ.

ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ದಿನಾಂಕ 3-10-26 ರಿಂದ ದಿನಾಂಕ 21.10.2026 ರ ವರೆಗೆ  ದಸರಾ ರಜೆಯನ್ನು ಮಂಜೂರು ಮಾಡಿರೋದು ಸರಿಯಷ್ಟೆ ಆದರೆ ನಾಡ ಹಬ್ಬವು ದಿನಾಂಕ 21-10-2026 ರಂದು ಮುಗಿಯುವುದರಿಂದ ಉತ್ತರ ಕನನಾಟಕದ ಮತ್ತು ಕರಾವಳಿ ಕರ್ನಾಟಕದ  ಮಧ್ಯ ಕನಾಟಕದ ಸರಕಾರಿ ನೌಕರ ಶಿಕ್ಷಕರು ಮೈಸೂರು ದಸರಾ ನಾಡಹಬ್ಬದಲ್ಲಿ ಭಾಗವಹಿಸಿರುತ್ತಾರೆ

ಇದರಿಂದ ಮಾರನೇ ದಿನವೇ ಶಾಲೆಗಳಿಗೆ ತೆರಳಿ ಎಂದರೆ ಹೇಗೆ ಸಾಧ್ಯ. ಶಿಕ್ಷಕರು ಮಕ್ಕಳು ಮೈಸೂರು ದಸರಾ ನಾಡಹಬ್ಬದಲ್ಲಿ ಭಾಗವಹಿಸುವುದರಿಂದ ತಾವು ಈ ವರ್ಷದ ದಸರಾ ರಜೆಯನ್ನು 31-10-2026 ರವರೆಗೆ ವಿಸ್ತರಿಸಲು ತಾವು ಪತ್ರ ಬರೆದು ಮಾತಾಡ ಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ಆಗ್ರಹಿಸಿದ್ದಾರೆ

ಹಿಂದಿನ ವರ್ಷಗಳಲ್ಲಿ ದಸರಾ ರಜೆ ಒಂದು ತಿಂಗಳು ಮಂಜೂರು ಮಾಡುತ್ತಿದ್ದರು ಆದರೆ ವೈಜ್ಞಾನಿಕ. ವಾಗಿ ಈ ಹಿಂದೆ ಮಂಜೂರು ಮಾಡುತ್ತಿದ್ದ ದಸರಾ ರಜೆ ಯನ್ನು ಇತ್ತಿಚ್ಚಿನ ವರ್ಷಗಳಲ್ಲಿ ಕಡಿತಗೊಳಿಸಲಾಗಿದೆ ಈ ಮೇಲಿನ  ಕಾರಣಗಳಿಂದ ಶಿಕ್ಷಕರಿಗೆ ಒತ್ತಡವಾ ಗುತ್ತಿದೆ.

ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಎಲ್ಲಾ ಶಿಕ್ಷಕ ವರ್ಗದವರು ಮನವಿ ಮಾಡಿಕೊಳ್ಳು ವುದೇನೆಂದರೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ".*ಜನಗಣತಿ ಕಾರ್ಯವನ್ನು ಶಿಕ್ಷಕರು ಈ ಸಲದ ಬೇಸಿಗೆ ರಜೆಯುಲ್ಲಿ ಮುಗಿಸಿ ದ್ದಾರೆ. ಶಿಕ್ಷಕ ಬಂಧುಗಳು ಅತ್ಯಂತ ವ್ಯವಸ್ಥಿತವಾಗಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ,ಹಬ್ಬವನ್ನು ಆಚರಿ ಸಿದೆ ಗಣತಿ ಕಾರ್ಯಗಳನ್ನು ಮಾಡಿದ್ದಾರೆ.

ಬಹುಶಃ ಕೊಟ್ಟಿರುವ ರಜೆಯಲ್ಲಿ ಗಣತಿ ಕಾರ್ಯದಲ್ಲಿ ಭಾಗವಹಿಸಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗ ತ್ತಿದ್ದಾರೆ ಎಂದು ಅವರಿಗೆ ವಿಶ್ರಾಂತಿಯ ಅವಶ್ಯಕತೆ ಜೊತೆ ಅವರ ಆರೋಗ್ಯ ಸುಧಾರಣೆಗೆ ಇನ್ನೂ  ಹೆಚ್ಚಿನ ರಜಾ ದಿನಗಳ ಅವಶ್ಯಕತೆ ಇರುತ್ತದೆ.

 ಕಳೆದ ಸಾಲಿನ ಬೇಸಿಗೆ ರಜಾ ಕಾಲದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗಣತಿ ಕಾರ್ಯ ಮತ್ತು ಕಳೆದ ಸಾಲಿನ ಅಕ್ಟೋಬರ್ ತಿಂಗಳಲ್ಲಿ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ  ಸಮೀಕ್ಷೆ ಗಣತಿ ಕಾರ್ಯದಲ್ಲಿ ಸರ್ಕಾರಿ ನೌಕರರು ಶಿಕ್ಷಕರು ಭಾಗವಹಿ ಸಿರುತ್ತೇವೆ ವಿಶ್ರಾಂತಿಯೇ  ಇಲ್ಲವಾಗಿದೆ

 ಆದ್ದರಿಂದ ರಾಜ್ಯ ಸಂಘಟನೆಯವರು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ  ಜೊತೆಯಲ್ಲಿ ಆಯುಕ್ತರ ಜೊತೆ ಮಾತಾನಾಡಿ ಚರ್ಚೆ ಮಾಡಿ ಶಿಕ್ಷಕ ರಿಗೆ ದಸರಾ ರಜೆಯನುನ್ನು ದಿನಾಂಕ -31-10-2026 ರ ದಿನಾಂಕದವರೆಗೆ ಮುಂದುವರೆಸಲು ಪತ್ರ ಬರೆದು ಮಾತಾನಾಡಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ಇಲ್ಲವಾದರೆ ಸಂಘಟನೆಗಳ ಅವಶ್ಯಕತೆ ಇದೆಯಾ ಎನ್ನುವ ಭಾವನೆ ಶಿಕ್ಷಕ ವರ್ಗದಲ್ಲಿ ಬರುವ ಸಾಧ್ಯತೆ ಇದೆ ಎಂಬ ಮಾತನ್ನು ಸಮಸ್ತ ರಾಜ್ಯದ ಶಿಕ್ಷಕರ ಪರವಾಗಿ ರಾಜ್ಯ ಪ್ರಚಾರ ಮತ್ತು ಸಂಘಟನಾ ಸಮಿತಿ ಸದಸ್ಯರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಕಬ್ಬನ್ ಪಾರ್ಕ್ ಬೆಂಗಳೂರು ಹಾಗೂ
ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಾಜ್ಯ ಷಡಾಕ್ಷರಿ ಸರ್ ಅಭಿಮಾನಿಗಳ ಬಳಗ ಬೆಂಗಳೂರು ಸಂಘದ ಬೂದನೂರು ಮಹೇಶ ಮಂಡ್ಯ ಹೇಳಿದ್ದಾರೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಾರ್ಜ್ ಕೊಟ್ಟರು ಕಬಾರ್ಡ್ ಕೀ ಕೊಡದ JE.....HDMC ಯಲ್ಲಿ ಇದೆಂಥಾ ಆಡಳಿತ ವ್ಯವಸ್ಥೆ.....ಸರ್ಕಾರಿ ನೌಕರಿ ಬಿಡುವಂತೆ ಪತ್ನಿಗೆ ಗಂಡನ ಕಿರುಕುಳ.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ.....ಹತ್ತು ವರ್ಷಗಳ ನಂತರ ನಕಲಿ ಜಾಲ ಪತ್ತೆ.....GPT ಶಿಕ್ಷಕರ ಸಂಘಕ್ಕೆ ಹೊಸ ಟೀಮ್..... ರಾಜ್ಯಾಧ್ಯಕ್ಷರಾಗಿ ಮುರಳೀಧರ್ ಆಯ್ಕೆ.....ತಿಂಗಳಾದರು ಪತ್ತೆಯಾಗದ ಸರ್ಕಾರಿ ನೌಕರ.....ಆತಂಕ ಸೃಷ್ಟಿಸಿದ ನಾಪತ್ತೆ ಪ್ರಕರಣ.....ಭಾನುವಾರವಾದರೂ ಶಾಲೆಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಕಡ್ಡಾಯ ಆಚರಣೆ.....ಇಲಾಖೆಯಿಂದ ಆದೇಶ.....ಸರ್ಕಾರಿ ನೌಕರರ ಅಧಿಕಾರಿಗಳ ಮನೆ ಜಾಲಾಡಿದ ಲೋಕಾಯುಕ್ತರು.....12 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ನೌಕರ.....ದಸರಾ ರಜೆ ಮುಂದುವರೆಸಿ.....ರಾಜ್ಯಾಧ್ಯಕ್ಷರಿಗೆ ಪತ್ರ ಬರೆದ ಶಿಕ್ಷಕರು.....BEO ಕಚೇರಿ SDA ನೌಕರ ಅಮಾನತು.....