LIVE TV LocalCrimeNationalInternationalPoliticsEducationTechnologyEntertainmentSportsFeature
State News

ತಿಂಗಳಾದರು ಪತ್ತೆಯಾಗದ ಸರ್ಕಾರಿ ನೌಕರ.....ಆತಂಕ ಸೃಷ್ಟಿಸಿದ ನಾಪತ್ತೆ ಪ್ರಕರಣ.....

ಗದಗ -

ಗದಗ ನಲ್ಲಿ ನಡೆದ ಸರ್ಕಾರಿ ನೌಕರ ರೊಬ್ಬರ ನಾಪತ್ತೆ ಪ್ರಕರಣ ತಿಂಗಳಾದರೂ ಪತ್ತೆಯಾಗಿಲ್ಲ ಹೌದು ಇಲಾಖೆಯಲ್ಲಿ ಅನುದಾನ ಕೊರತೆಯಾಗಿ ಸರ್ಕಾರಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗದಿ ರುವುದರಿಂದ ಗುತ್ತಿಗೆದಾರರಿಂದ ಒತ್ತಡಕ್ಕೆ ಕೆಆರ್​ಡಿಎಲ್​ ಸಹಾಯಕ ಕಾರ್ಯಪಾಲಕ ಇಂಜಿನಿಯರ್​ (ಎಇಇ) ಫರ್ವೇಜ್​ ಧಾರವಾಡ ನಾಪತ್ತೆ ಆಗಿ ಇಂದಿಗೆ ಒಂದು ತಿಂಗಳು ಗತಿಸಿದರೂ ಸಹ ಇನ್ನೂ ಪತ್ತೆಯಾಗಿಲ್ಲ.

ಕಳೆದ ಒಂದು ತಿಂಗಳಿಂದ ಪೊಲೀಸ್​ ಇಲಾಖೆ ಪರ್ವೇಜ ಅವರನ್ನು ಹುಡುಕುತ್ತಲೇ ಇದ್ದರೂ ಏಇಇ ರ್ವೇಜ ಧಾರವಾಡ ಮಾತ್ರ ನಾಪತ್ತೆ ಆಗಿದ್ದಾರೆ‌ ಜಿಲ್ಲೆ ಮತ್ತು ಬೆಂಗಳೂರು ವಿಭಾಗದ ಪೊಲೀಸ ವಿಭಾಗ 5 ತಂಡಗಳನ್ನು ರಚಿಸಿ ರಾಜ್ಯ ಮತ್ತು ಪರರಾಜ್ಯಗಳನ್ನು ಸಂಚರಿಸುತ್ತಲೇ ಇದ್ದರೂ ಸಿಗದಿರುವುದ ಅನುಮಾನ ಮೂಡುವಂತಿದೆ. ಅಥವಾ ಸಿಕ್ಕರೂ ವಿಚಾರಣೆ ಕಾರಣ ದಿಂದ ಪೊಲೀಸ್​ ಇಲಾಖೆ ಪತ್ತೆ ಮಾಡಿರುವ ವಿಷಯ ಮುಚ್ಚಿಟ್ಟಿದೆಯೇ ಎಂಬ ಮಾತುಗಳು ನಗರಾದ್ಯಂತ ಸುಳಿದಾಡುತ್ತಿವೆ.

ಕೆಆರ್​ಐಡಿಎಲ್​ ಎಇಇ ಫರ್ವೇಜ್​ ಧಾರವಾಡ ಸೆ. 12ರಂದು ಬೆಂಗಳೂರಿನ ಕೆಆರ್​ಡಿಎಲ್​ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದು, ತಮ್ಮ ಉಪವಿಭಾಗದ ವ್ಯಾಪ್ತಿಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗದಿರುವುದರಿಂದ ತೀವ್ರ ಒತ್ತಡ ಎದುರಿಸುತ್ತಿರು ವುದಾಗಿ ಡೆತ್​ನೋಟ್​ನಲ್ಲಿ ತಿಳಿಸಿದ್ದರು ಕೋಟ್ಯಂತರ ರೂ.ಮೊತ್ತದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಹಾಗೂ ಉಪ ಗುತ್ತಿಗೆದಾರರು ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ. ಮನೆ ಬಳಿಗೂ ಬಂದು ಪ್ರಶ್ನಿಸುತ್ತಿದ್ದು, ಅನುದಾನ ಬಿಡುಗಡೆ ಕುರಿತು ದೂರವಾಣಿ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿ ದ್ದರು.

ಸೆ. 13ರಂದು ಬೆಂಗಳೂರಿನಲ್ಲಿ ಸಭೆ ಇದೆ ಎಂದು ಹೇಳಿ ಫರ್ವೇಜ್​ ಮನೆಯಿಂದ ಹೊರಟಿದ್ದರು. ಸೆ. 14ರವರೆಗೆ ಅವರ ಮೊಬೈಲ್​ ಸಂಪರ್ಕದಲ್ಲಿತ್ತು. ಸೆ. 16ರಂದು ಫರ್ವೇಜ್​ ನಾಪತ್ತೆ ಆಗಿರುವ ಕುರಿತು ಗದಗ- ಬೆಟಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ 5 ತಂಡ ರಚಿಸಿ ಕಾರ್ಯಾಚರಣೆ ನಡೆಸು ತ್ತಿದ್ದಾರೆ.

ತದ ನಂತರ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಪೊನ್​ ಆನ್​ ಗಿ ಸ್ವಿಚ್​ ಆ​ ಆಗಿತ್ತು. ಮೂರ್ನಾಲ್ಕು ದಿನಗಳ ನಂತರ ಮಧ್ಯಪ್ರದೇಶದ ಭೂಪಾಲ ರೈಲು ನಿಲ್ದಾಣದಲ್ಲಿ ರ್ವೇ ಸಂಚರಿಸುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದವು ತದನಂತರ ಪೊಲೀಸ್​ ಇಲಾಖೆ ಶೋದ ಕಾರ್ಯಾಚರಣೆ ಗೌಪ್ಯವಾಗಿಯೇ ನಡೆಯುತ್ತಿದೆ.

ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸವು ಸಂಸ್ಥೆ ಆಗಿರುವ ಕೆಆರ್​ಐಡಿಎಲ್​ ಸಂಸ್ಥೆಯು ಕಾಮ ಗಾರಿಗಳನ್ನು ಅನುಷ್ಠಾನ ಮಾಡುವ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇಲ್ಲಿನ ಅಧಿಕಾರಿಗಳು ಅದೇ ಕಾರ್ಯವನ್ನು ಮಾಡಬೇಕಾಗಿದೆ. ಹಾಗೂ ಕೆಆರ್​ಐಡಿಎಲ್​ ಮತ್ತು ನಿಮಿರ್ತಿ ಕೇಂದ್ರಗಳಿಗೆ ಯೋಜನೆ ಅನುಷ್ಠಾನಕ್ಕೂ ಮನ್ನವೇ ಸರ್ಕಾರ ಅನುದಾನ ಬಿಡುಗಡೆ ಆಗುತ್ತದೆ.

ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆ ಆಗಬಾರದು ಎಂಬ ಉದ್ದೇಶದಿಂದ ಮುಂಗಡ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಹಾಗಾಗಿ ಅನುದಾನ ಪಡೆದು ಕಾಮಗಾರಿ ಅನುಷ್ಠಾನ ಮಾಡುವ ಕೆಲಸ ವನ್ನು ಇಲ್ಲಿನ ಅಧಿಕಾರಿಗಳು ಮಾಡಬೇಕು. ಆದರೆ ಕೆಆರ್​ಐಡಿಎಲ್​ ಗೆ ಸರ್ಕಾರ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡದಿರುವುದರಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ಒತ್ತಡ ಏಕಾಗುತ್ತದೆ. ಹಿಂದಿನ ಉದ್ದೇಶವಾದರೂ ಏನು ಎಂದು ನಗರದ ಜನರು ಮಾತನಾಡಿಕೊಳ್ಳು ತ್ತಿದ್ದಾರೆ.

ಕಳೆದ 15 ದಿನಗಳಿಂದ ಪೊಲೀಸರು ಪ್ರಕರಣ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ಹಾಗಾಗಿ ಪರ್ವೇಜ್ ಪತ್ತೆ ಮಾಡಲಾಗಿದ್ದು ಬೆಂಗಳೂರಿನ ಕಚೇರಿಗೆ ಭೇಟಿ ನೀಡಿದ ನಂತರ ಸ್ವಿಚ್ಚ ಆಫ್​ ಮಾಡಿ ಕೊಂಡು ಬೇರೆಡೆ ಪಲಾಯನ ಮಾಡಿದ. ಡೆತ್​ ನೊಟ ಬರೆದಿಡಲು ಕಾರನವೇನು? ನಿಜವಾಗಲೂ ಅನುದಾನ ಬಿಡುಗಡೆ ಆಗದಿರುವುದೇ ಕಾರಣವೇ ಅಥವಾ ಅದ ಹಿನ್ನೆಲೆ ಬೇರೆ ಇದೆಯೇ  ಹಣಕಾಸಿನ ವ್ಯವಹಾರಗಳು ಏನಾದರೂ ಇವೆಯೇ ಎಂಬುದರ ಕುರಿತು ಪರ್ವೇಜ್ ನನ್ನು ಪೊಲೀಸರು ಗೌಪ್ಯವಾಗಿ ವಿಚಾರಣೆ ಮಾಡುತ್ತಿರಬಹುದು ಎಂದು ಪೊಲೀಸ್​ ಇಲಾಖೆ ಮತ್ತು ನಗರದ ಜನರಲ್ಲಿ ಅನುಮಾನ ಮೂಡಿದೆ.

ಸುದ್ದಿ ಸಂತೆ ನ್ಯೂಸ್ ಗದಗ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಾರ್ಜ್ ಕೊಟ್ಟರು ಕಬಾರ್ಡ್ ಕೀ ಕೊಡದ JE.....HDMC ಯಲ್ಲಿ ಇದೆಂಥಾ ಆಡಳಿತ ವ್ಯವಸ್ಥೆ.....ಸರ್ಕಾರಿ ನೌಕರಿ ಬಿಡುವಂತೆ ಪತ್ನಿಗೆ ಗಂಡನ ಕಿರುಕುಳ.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ.....ಹತ್ತು ವರ್ಷಗಳ ನಂತರ ನಕಲಿ ಜಾಲ ಪತ್ತೆ.....GPT ಶಿಕ್ಷಕರ ಸಂಘಕ್ಕೆ ಹೊಸ ಟೀಮ್..... ರಾಜ್ಯಾಧ್ಯಕ್ಷರಾಗಿ ಮುರಳೀಧರ್ ಆಯ್ಕೆ.....ತಿಂಗಳಾದರು ಪತ್ತೆಯಾಗದ ಸರ್ಕಾರಿ ನೌಕರ.....ಆತಂಕ ಸೃಷ್ಟಿಸಿದ ನಾಪತ್ತೆ ಪ್ರಕರಣ.....ಭಾನುವಾರವಾದರೂ ಶಾಲೆಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಕಡ್ಡಾಯ ಆಚರಣೆ.....ಇಲಾಖೆಯಿಂದ ಆದೇಶ.....ಸರ್ಕಾರಿ ನೌಕರರ ಅಧಿಕಾರಿಗಳ ಮನೆ ಜಾಲಾಡಿದ ಲೋಕಾಯುಕ್ತರು.....12 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ನೌಕರ.....ದಸರಾ ರಜೆ ಮುಂದುವರೆಸಿ.....ರಾಜ್ಯಾಧ್ಯಕ್ಷರಿಗೆ ಪತ್ರ ಬರೆದ ಶಿಕ್ಷಕರು.....BEO ಕಚೇರಿ SDA ನೌಕರ ಅಮಾನತು.....