LIVE TV LocalCrimeNationalInternationalPoliticsEducationTechnologyEntertainmentSportsFeature
State News

ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ.....ಹತ್ತು ವರ್ಷಗಳ ನಂತರ ನಕಲಿ ಜಾಲ ಪತ್ತೆ.....

ಬೆಂಗಳೂರು -

ದಶಕದ ಬಳಿಕ ಬಯಲಾಯ್ತು ಹಗರಣ ನಕಲಿ ಅಂಕಪಟ್ಟಿ ನೀಡಿ ನೌಕರಿ ಗಿಟ್ಟಿಸಿದ್ದ ಆರೋಗ್ಯ ಇಲಾಖೆ 52 ಸಿಬ್ಬಂದಿ ಹೌದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹತ್ತು ವರ್ಷಗಳ ಹಿಂದೆ ಹೈದರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ) ವೃಂದದಡಿ ನೇಮಕಗೊಂಡಿದ್ದ 52 ಗ್ರೂಪ್-ಡಿ ಸಿಬ್ಬಂದಿ ನಕಲಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಗಳನ್ನು ನೀಡಿ ಸರ್ಕಾರಿ ನೌಕರಿ ಗಿಟ್ಟಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

2015ರಲ್ಲಿ ನಡೆದಿದ್ದ ಅಕ್ರಮ 2015ರ ಮಾರ್ಚ್‌ನಲ್ಲಿ ಗ್ರೂಪ್-ಡಿ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿತ್ತು. ಅದೇ ವರ್ಷದ ನವೆಂಬರ್‌ನಲ್ಲಿ ಅಂತಿಮ ಪಟ್ಟಿ ಪ್ರಕಟಗೊಂಡು 2016ರ ಜೂನ್‌ನಲ್ಲಿ ನೇಮಕಾತಿ ಆದೇಶಗಳನ್ನು ನೀಡಲಾಗಿತ್ತು ಈ ಸಿಬ್ಬಂದಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲಾ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿ ದ್ದರು.

2023ರಲ್ಲಿ ಬಂದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ ಈ ಹಗರಣ ಹೊರಬಂದಿದೆ. ಮೂಲಗಳ ಪ್ರಕಾರ, ಕೇವಲ 230 ಅಂಕಗಳನ್ನು ಗಳಿಸಿದ್ದ ಅಭ್ಯರ್ಥಿಗಳು ನಕಲಿ ಅಂಕಪಟ್ಟಿಗಳ ಮೂಲಕ ತಮ್ಮ ಅಂಕಗಳನ್ನು 625ಕ್ಕೆ 560ರಿಂದ 586ರವರೆಗೆ ಏರಿಕೆ ಮಾಡಿಕೊಂಡಿದ್ದರು ಅಷ್ಟೇ ಅಲ್ಲದೆ ಅಂದು ಮಂಡಳಿ ಯಿಂದ ನೀಡಲಾಗಿದೆ ಎನ್ನಲಾದ ದೃಢೀಕರಣ ಪತ್ರಗಳು ಕೂಡ ನಕಲಿ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಾರ್ಜ್ ಕೊಟ್ಟರು ಕಬಾರ್ಡ್ ಕೀ ಕೊಡದ JE.....HDMC ಯಲ್ಲಿ ಇದೆಂಥಾ ಆಡಳಿತ ವ್ಯವಸ್ಥೆ.....ಸರ್ಕಾರಿ ನೌಕರಿ ಬಿಡುವಂತೆ ಪತ್ನಿಗೆ ಗಂಡನ ಕಿರುಕುಳ.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ.....ಹತ್ತು ವರ್ಷಗಳ ನಂತರ ನಕಲಿ ಜಾಲ ಪತ್ತೆ.....GPT ಶಿಕ್ಷಕರ ಸಂಘಕ್ಕೆ ಹೊಸ ಟೀಮ್..... ರಾಜ್ಯಾಧ್ಯಕ್ಷರಾಗಿ ಮುರಳೀಧರ್ ಆಯ್ಕೆ.....ತಿಂಗಳಾದರು ಪತ್ತೆಯಾಗದ ಸರ್ಕಾರಿ ನೌಕರ.....ಆತಂಕ ಸೃಷ್ಟಿಸಿದ ನಾಪತ್ತೆ ಪ್ರಕರಣ.....ಭಾನುವಾರವಾದರೂ ಶಾಲೆಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಕಡ್ಡಾಯ ಆಚರಣೆ.....ಇಲಾಖೆಯಿಂದ ಆದೇಶ.....ಸರ್ಕಾರಿ ನೌಕರರ ಅಧಿಕಾರಿಗಳ ಮನೆ ಜಾಲಾಡಿದ ಲೋಕಾಯುಕ್ತರು.....12 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ನೌಕರ.....ದಸರಾ ರಜೆ ಮುಂದುವರೆಸಿ.....ರಾಜ್ಯಾಧ್ಯಕ್ಷರಿಗೆ ಪತ್ರ ಬರೆದ ಶಿಕ್ಷಕರು.....BEO ಕಚೇರಿ SDA ನೌಕರ ಅಮಾನತು.....