ಬೆಂಗಳೂರು -
ನಾಡ ಹಬ್ಬ ದಸರಾ ಬಳಿಕವೂ 4 ದಿನ ಸಾಲು ಸಾಲು ರಜೆ ಅಕ್ಟೋಬರ್ 23ರಂದು ಸ್ಪೆಷಲ್ ಹಾಲಿಡೇ ಘೋಷಣೆ ಹೌದು ಸಾಲು ಸಾಲು ದಸರಾ ರಜೆ ನಡುವೆ ಸರ್ಕಾರಿ ನೌಕರರಿಗೆ ಮತ್ತೊಂದು ಸ್ಪೆಷಲ್ ರಜೆ ಸಿಕ್ಕಿದೆ ದಸರಾ ರಜೆ ಬಳಿಕವೂ 4 ದಿನ ಸಾಲು ಸಾಲು ರಜೆ ಸಿಗಲಿದೆ.ವಿಧಾನ ಪರಿಷತ್ತಿನ 4 ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಅಕ್ಟೋಬರ್ 23ರಂದು ಮತದಾನ ನಡೆಯಲಿದ್ದು ಅರ್ಹ ಮತದಾರ ನೌಕರರಿಗೆ ಸರ್ಕಾರ ವಿಶೇಷ ರಜೆ ಘೋಷಿಸಿದೆ.
ಇದ್ರಿಂದ ಶುಕ್ರವಾರ ಸ್ಪೆಷಲ್ ಹಾಲಿಡೇ ಜೊತೆಗೆ ಶನಿವಾರ, ಭಾನುವಾರ ಹಾಗೂ ಸೋಮವಾರ ವಾಲ್ಮೀಕಿ ಜಯಂತಿ ರಜೆ ಜೊತೆ ಸತತ 4 ದಿನಗಳ ಸಾಲು ರಜೆ ಸಿಗಲಿದೆ ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆಯ ಹಿನ್ನೆಲೆ ಅರ್ಹ ಮತದಾರರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಅಕ್ಟೋಬರ್ 23 ರ ಶುಕ್ರವಾರದಂದು ವಿಶೇಷ ಸಾಂದರ್ಭಿಕ ರಜೆ ಘೋಷಿಸಿದ್ದು ಈ ರಜೆಯು ಕೇವಲ ಮತದಾರರ ಪಟ್ಟಿಯಲ್ಲಿ ಹೆಸರಿರುವ ನೌಕರರಿಗೆ ಮಾತ್ರ ಪೂರ್ವಾ ನುಮತಿಯೊಂದಿಗೆ ಅನ್ವಯವಾಗುತ್ತದೆ.
ಈ ಕುರಿತು ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರಿ ರಜೆ ಜೊತೆ ವೀಕೆಂಡ್ ಇರೋ ಹಿನ್ನೆಲೆ ಮತದಾರ ನೌಕರರಿಗೆ ಸತತ 4 ದಿನಗಳ ಸಾಲು ರಜೆ ಸಿಕ್ಕಂತಾಗಲಿದೆ.
ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ: ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗದಾವಣಗೆರೆ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ: ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ: ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ
ಬೆಂಗಳೂರು ಶಿಕ್ಷಕರ ಕ್ಷೇತ್ರ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ (ರಾಮನಗರ)ಚುನಾವಣಾ ಆಯೋಗವು ನಿಗದಿ ಪಡಿಸಿರುವಂತೆ, ಈ ಕ್ಷೇತ್ರಗಳಲ್ಲಿ ಮತದಾನದ ಹಕ್ಕು ಹೊಂದಿರುವ ಅರ್ಹ ಪದವೀಧರರು ಹಾಗೂ ಶಿಕ್ಷಕ ಮತದಾರರು ಮತ ಚಲಾಯಿಸಲು ಈ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ
ಅಕ್ಟೋಬರ್ 24 (ಶನಿವಾರ): ವಾರಾಂತ್ಯದ ರಜೆ ಸರ್ಕಾರಿ ನೌಕರರಿಗೆ ರಜೆ.ಅಕ್ಟೋಬರ್ 25 (ಭಾನುವಾರ): ಸಾರ್ವತ್ರಿಕ ವಾರದ ರಜೆ.
ಅಕ್ಟೋಬರ್ 26 (ಸೋಮವಾರ): ಮಹರ್ಷಿ ವಾಲ್ಮೀಕಿ ಜಯಂತಿ ರಜೆ ಊರುಗಳಿಗೆ ಅಥವಾ ಪ್ರವಾಸಕ್ಕೆ ತೆರಳುವವರಿಗೆ ಈ ರಜೆಯಿಂದ ಅನುಕೂಲವಾಗಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....