ಧಾರವಾಡ -
ಹೆಸರಾಂತ ಡೆವಲಪರ್ ಸಂಸ್ಥೆ ಯಾಗಿ ಜನರಿಗೆ ಒಳ್ಳೆಯ ದರದಲ್ಲಿ ಹೈಟೆಕ್ ಆಗಿ ನಿವೇಶನ ನೀಡುತ್ತಾ ಇದರೊಂದಿಗೆ ಸಮಾಜ ಸೇವೆ ಮಾಡುತ್ತಿರುವ ಸಾಯಿ ಚೇತನಾ ಗ್ರೂಪ್ ಗೆ ದಸರಾ ಹಬ್ಬದ ದಿನದಂದು ಹೊಸ ಆಯುಧ ವಾಗಿ ಜೆಸಿಬಿ ಸೇರ್ಪಡೆ ಯಾಗಿದೆ ಹೌದು ದಸರಾ ದಿನದಂದು ವಿರೇಶ ಬ್ಯಾಹಟ್ಟಿ ಅವರು ಹೊಸ JCB ಖರೀದಿ ಯೊಂದಿಗೆ ತಮ್ಮ ಸಂಸ್ಥೆ ಗೆ ಹೊಸ ಆಯುಧ ವನ್ನು ತೆಗೆದುಕೊಂಡಿದ್ದಾರೆ
ಧಾರವಾಡದಲ್ಲಿ ಹೊಸ ಜೆಸಿಬಿ ಖರೀದಿ ಮಾಡಿದ ಸಮಾಜ ಸೇವಕ ಹಾಗೂ ಡೆವಲಪರ್ ವಿರೇಶ ಬ್ಯಾಹಟ್ಟಿ ದಸರಾ ಹಬ್ಬದ ಅಂಗವಾಗಿ ಆಯುಧ ಪೂಜೆಯ ಶುಭ ದಿನದಂದು ಹೆಸರಾಂತ ಸಮಾಜ ಸೇವಕ ಹಾಗೂ ಡೆವಲಪರ್ ವಿರೇಶ ಬ್ಯಾಹಟ್ಟಿ ಅವರು ಹೊಸ JCB ಖರೀದಿಸುವ ಮೂಲಕ ತಮ್ಮ ಸಾಯಿ ಚೇತನ ಗ್ರೂಪ್‌ಗೆ ಮತ್ತೊಂದು ಹೊಸ ಯಂತ್ರ ವನ್ನು ಸೇರ್ಪಡೆಗೊಳಿಸಿದ್ದಾರೆ.
ಆಯುಧ ಪೂಜೆಯ ಪವಿತ್ರ ಸಂದರ್ಭದಲ್ಲಿ ಹೊಸ JCB ಯಂತ್ರಕ್ಕೆ ಪೂಜೆ ಸಲ್ಲಿಸಿ, ಶುಭ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ವಿರೇಶ ಬ್ಯಾಹಟ್ಟಿ ಅವರ ಆಪ್ತರು, ಹಿತೈಷಿಗಳು ಹಾಗೂ ಸ್ನೇಹಿತರು ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಅವರಿಗೆ ಶುಭಾಶಯಗಳನ್ನು ತಿಳಿಸಿ ಅಭಿನಂದನೆ ಸಲ್ಲಿಸಿದರು.
ಸಮಾಜ ಸೇವೆಯ ಜೊತೆಗೆ ಡೆವಲಪರ್ ಆಗಿಯೂ ಗುರುತಿಸಿಕೊಂಡಿರುವ ವಿರೇಶ ಬ್ಯಾಹಟ್ಟಿ ಅವರು, ತಮ್ಮ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಹೊಸ JCB ಖರೀದಿಸಿದ್ದಾರೆ. ಹಬ್ಬದ ಸಂಭ್ರಮದ ನಡುವೆ ನಡೆದ ಈ ಹೊಸ ಯಂತ್ರದ ಸೇರ್ಪಡೆ ಅವರ ಕುಟುಂಬಸ್ಥರು, ಸ್ನೇಹಿತರು ಹಾಗೂ ಹಿತೈಷಿಗಳಲ್ಲಿ ಸಂತಸ ಮೂಡಿಸಿದೆ.
ಆಯುಧ ಪೂಜೆಯ ಶುಭ ದಿನದಂದು ಹೊಸ JCB ಖರೀದಿಸಿರುವ ವಿರೇಶ ಬ್ಯಾಹಟ್ಟಿ ಅವರಿಗೆ ಆಪ್ತರು ಹಾಗೂ ಹಿತೈಷಿಗಳು ಶುಭ ಹಾರೈಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಲಭಿಸಲಿ ಎಂದು ಹಾರೈಸಿದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ.....