ಬೆಂಗಳೂರು -
ಬಿಎಡ್ ಅರ್ಹತೆಯುಳ್ಳ ಪ್ರಾಥಮಿಕ ಶಿಕ್ಷಕರಿಗೆ ಮತ್ತೊಂದು ಅವಕಾಶ ದೊಂದಿಗೆ ಗುಡ್ ನ್ಯೂಸ್ ನೀಡಲಾಗಿದ್ದು ಇಲ್ಲಿದೆ ಮಹತ್ವದ ಸುದ್ದಿ ಹೌದು ಬಿ.ಎಡ್ ಅರ್ಹತೆಯುಳ್ಳ ಪ್ರಾಥಮಿಕ ಶಿಕ್ಷಕರಿಗೆ 6 ತಿಂಗಳ ಅವಧಿಯ ಸರ್ಟಿಫಿಕೇಟ್ ಬ್ರಿಡ್ಜ್ ಕೋರ್ಸ್‌ಗೆ ನೋಂದಣಿ ಮಾಡಿಕೊಳ್ಳಲು ಮತ್ತೊಮ್ಮೆ ಸುವರ್ಣಾ ವಕಾಶ ಕಲ್ಪಿಸಲಾಗಿದೆ.ಈ ಹಿಂದೆ ವಿವಿಧ ಕಾರಣ ಗಳಿಂದ ನೋಂದಣಿ ಮಾಡಿಕೊಳ್ಳಲು ವಿಳಂಬ ಮಾಡಿದ ಅರ್ಹ ಶಿಕ್ಷಕರು ಈಗ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಸರ್ಕಾರಿ ಶಿಕ್ಷಕರು ಸೇರಿದಂತೆ ಹಲವು ಪಾಲುದಾರರು ನೋಂದಣಿ ಪೋರ್ಟಲ್ ಅನ್ನು ಪುನಃ ಆರಂಭಿಸು ವಂತೆ NIOS ಸಂಸ್ಥೆಗೆ ಸತತವಾಗಿ ಮನವಿ ಸಲ್ಲಿಸಿದ್ದರು. ಶಿಕ್ಷಕರ ಈ ಕೋರಿಕೆಯನ್ನು ಗಂಭೀರವಾಗಿ ಪರಿಗಣಿ ಸಿದ ಸಕ್ಷಮ ಪ್ರಾಧಿಕಾರವು, ಪೋರ್ಟಲ್ ತೆರೆಯಲು ಗ್ರೀನ್ ಸಿಗ್ನಲ್ ನೀಡಿದೆ.
ಇದರನ್ವಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 21, 2026 ರಿಂದ ಆರಂಭವಾಗಲಿದ್ದು ಅಕ್ಟೋಬರ್ 28 ರವರೆಗೆ ಮಾತ್ರ ಲಭ್ಯವಿರಲಿದೆನಿಗದಿತ ಗಡುವು ಮುಗಿದ ಬಳಿಕ ಯಾವುದೇ ಕಾರಣಕ್ಕೂ ದಿನಾಂಕ ವನ್ನು ವಿಸ್ತರಿಸುವುದಿಲ್ಲ ಎಂದು NIOS ಸ್ಪಷ್ಟಪಡಿಸಿದೆ. ಹೀಗಾಗಿ ಅರ್ಹ ಪ್ರಾಥಮಿಕ ಶಿಕ್ಷಕರು ಕೊನೆಯ ಕ್ಷಣದವರೆಗೆ ಕಾಯದೆ ಆದಷ್ಟು ಬೇಗ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸ ಲಾಗಿದೆ.
ಆಸಕ್ತ ಹಾಗೂ ಅರ್ಹ ಶಿಕ್ಷಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೆಲವು ಪ್ರಮುಖ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅರ್ಜಿ ನಮೂನೆ ಭರ್ತಿ ಮಾಡುವ ಮುನ್ನ ವೆಬ್‌ಸೈಟ್‌ನಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳುವುದು ಕಡ್ಡಾಯವಾಗಿದೆ.ಮೊದಲಿಗೆ ಅಧಿಕೃತ ವೆಬ್‌ಸೈಟ್ bridge.nios.ac.in ಗೆ ಭೇಟಿ ನೀಡಿ
ಮುಖಪುಟದಲ್ಲಿ ಲಭ್ಯವಿರುವ ಈಗಲೇ ನೋಂದಾ ಯಿಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಸ್ಕ್ರೀನ್ ಮೇಲೆ ಬರುವ ಪ್ರಮುಖ ಸೂಚನೆಗಳನ್ನು ಸಂಪೂರ್ಣವಾಗಿ ಓದಿ ಮುಂದುವರಿಯಿರಿ ನಿಮ್ಮ ಮೂಲಭೂತ ವಿವರ ಗಳ ಜತೆಗೆ ವೈಯಕ್ತಿಕ ಹಾಗೂ ವೃತ್ತಿಪರ ಮಾಹಿತಿ ಯನ್ನು ಯಾವುದೇ ತಪ್ಪುಗಳಿಲ್ಲದೆ ನಿಖರವಾಗಿ ಭರ್ತಿ ಮಾಡಿ ಕೋರ್ಸ್‌ಗೆ ಅಗತ್ಯವಿರುವ ಎಲ್ಲಾ ಸಂಬಂಧಿತ ದಾಖಲೆಗಳನ್ನು ಸರಿಯಾದ ಮಾಪನದಲ್ಲಿ ಅಪ್ ಲೋಡ್ ಮಾಡಿ
ನಿಗದಿತ ಶುಲ್ಕವನ್ನು ಪಾವತಿಸಿ, ಅರ್ಜಿ ನಮೂನೆ ಯನ್ನು ಅಂತಿಮವಾಗಿ ಸಬ್ಮಿಟ್ (Submit) ಮಾಡಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ದೃಢೀಕರಣ ಪುಟವನ್ನು (Confirmation Page) ಡೌನ್‌ಲೋಡ್ ಮಾಡಿಕೊಂಡು, ಮುಂದಿನ ಬಳೆಕೆ ಗಾಗಿ ಪ್ರಿಂಟ್ ತೆಗೆದಿಟ್ಟುಕೊಳ್ಳಿ
NIOS ಬ್ರಿಡ್ಜ್ ಕೋರ್ಸ್‌ಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅಕ್ಟೋಬರ್ 28 ಕೊನೆಯ ದಿನವಾಗಿದೆ. ಈ ಅವಧಿ ಮುಗಿದ ನಂತರ ಯಾವುದೇ ಕಾರಣಕ್ಕೂ ಅರ್ಜಿ ಸ್ವೀಕರಿಸುವುದಿಲ್ಲ ಎಂದು ಸಂಸ್ಥೆ ಕಟ್ಟುನಿಟ್ಟಾಗಿ ತಿಳಿಸಿರುವುದರಿಂದ, ಅರ್ಹ ಶಿಕ್ಷಕರು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....