ಬೆಂಗಳೂರು -
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ ಗಳ ಆರೋಗ್ಯ ಸುಧಾರಣೆ ಹಾಗೂ ಅಪೌಷ್ಟಿಕತೆಯನ್ನ ಹೊಗಲಾಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ ಮಧ್ಯಾಹ್ನದ ಬಿಸಿಯೂಟ, ಬೆಳಗಿನ ರಾಗಿ ಮಾಲ್ಟ್ ಅಥವಾ ಹಾಲಿನ ಜೊತೆಗೆ, ಇನ್ಮುಂದೆ ಸಂಜೆ ಪೌಷ್ಟಿಕ ಲಘು ಉಪಹಾರ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ.ಶಾಲಾ ಅವಧಿ ಮುಗಿದ ಬಳಿಕ ಮಕ್ಕಳು ಆಯಾಸಕ್ಕೆ ಒಳಗಾಗುವುದನ್ನ ತಪ್ಪಿಸುವುದು ಹಾಗೂ ಅವರಿಗೆ ಪೂರಕ ಪೌಷ್ಟಿಕಾಂಶ ವನ್ನ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ ಗಣಿ ಬಾಧಿತ ಪ್ರದೇಶಗಳಲ್ಲಿ ಅಪೌಷ್ಟಿಕತೆ ಎದುರಿಸುತ್ತಿರುವ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.
ಸಂಜೆ ವಿಶೇಷ ತರಗತಿಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿ ಗಳ ಏಕಾಗ್ರತೆ ಹೆಚ್ಚಿಸಲು ಸಹ ಇದು ನೆರವಾಗಲಿದೆ. 1ನೇ ತರಗತಿಯಿಂದ 10ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.ವಾರದಲ್ಲಿ ಆರು ದಿನಗಳ ಕಾಲ ಮಕ್ಕಳಿಗೆ ಪೌಷ್ಟಿಕ ತಿಂಡಿಗಳನ್ನ ವಿತರಿಸಲಾಗುತ್ತದೆ. ಕಡಲೆಕಾಯಿ, ಮೊಳಕೆ ಕಟ್ಟಿದ ಹೆಸರು ಕಾಳು ಹಾಗೂ ಕಡಲೆಕಾಯಿ ಚಿಕ್ಕಿಯಂತಹ ಪೌಷ್ಟಿಕಾಂಶಯುಕ್ತ ಆಹಾರಗಳನ್ನ ನೀಡಲು ತಜ್ಞರು ಶಿಫಾರಸು ಮಾಡಿದ್ದಾರೆ ವಿಶೇಷವಾಗಿ ಶನಿವಾರದಂದು ಮಕ್ಕಳಿಗೆ ಕಿತ್ತಳೆ, ಮೂಸಂಬಿ ಅಥವಾ ಸಪೋಟಾದಂತಹ ತಾಜಾ ಹಣ್ಣುಗಳನ್ನ ನೀಡುವ ಕುರಿತು ನಿರ್ಧರಿ ಸಲಾಗಿದೆ.
ಸದ್ಯ ಪ್ರಾಯೋಗಿಕವಾಗಿ ಈ ಯೋಜನೆಯನ್ನ ಗಣಿಗಾರಿಕೆಯಿಂದ ಬಾಧಿತವಾಗಿರುವ ನಾಲ್ಕು ಜಿಲ್ಲೆ ಗಳಲ್ಲಿ ಮಾತ್ರ ಜಾರಿಗೆ ತರಲು ಉದ್ದೇಶಿಸಲಾಗಿದೆ. ವಿಜಯನಗರ, ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಮೊದಲ ಹಂತವಾಗಿ ಯೋಜನೆ ಆರಂಭವಾಗಲಿದೆ.ಈ ಜಿಲ್ಲೆಗಳಲ್ಲಿನ ಮಕ್ಕಳ ಆರೋಗ್ಯದಲ್ಲಾಗುವ ಸುಧಾರಣೆ ಹಾಗೂ ಯೋಜನೆಯ ಕಾರ್ಯಕ್ಷಮತೆಯನ್ನ ಪರಿಶೀಲಿಸಿದ ಬಳಿಕ ಮುಂದಿನ ದಿನಗಳಲ್ಲಿ ಇಡೀ ರಾಜ್ಯದಾದ್ಯಂತ ಇದನ್ನು ವಿಸ್ತರಿಸುವ ಚಿಂತನೆ ಶಿಕ್ಷಣ ಇಲಾಖೆಯ ಮುಂದಿದೆ.
ಈ ಯೋಜನೆಗಾಗಿ ಕರ್ನಾಟಕ ಗಣಿ ಮತ್ತು ಪರಿಸರ ಪುನಸ್ಥಾಪನೆ ನಿಗಮ ಅನುದಾನವನ್ನ ಒದಗಿಸುತ್ತಿದೆ. ಮುಂದಿನ ಮೂರು ವರ್ಷಗಳ ಅನುಷ್ಠಾನಕ್ಕಾಗಿ ಒಟ್ಟು 31.9 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಪ್ರಸ್ತುತ 10.6 ಕೋಟಿ ರೂಪಾಯಿ ಬಿಡುಗಡೆಗೆ ಅನು ಮೋದನೆ ದೊರೆತಿದೆ.
ಅಡುಗೆದಾರರು ಹಾಗೂ ಸಹಾಯಕರಿಗಾಗಿ ಪ್ರತ್ಯೇಕ ನಿಧಿಯನ್ನ ಸಹ ಒದಗಿಸಲಾಗಿದೆ. ಆದರೆ, ಪ್ರಸ್ತುತ ಶಾಲೆಗಳಲ್ಲಿ SATS ತಂತ್ರಾಂಶದಡಿ ವಿದ್ಯಾರ್ಥಿಗಳ ಮಾಹಿತಿ ಅಪ್‌ಡೇಟ್ ಆಗುವುದು ಬಾಕಿಯಿದ್ದು, ಯೋಜನೆ ಜಾರಿಗೆ ಮುನ್ನ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ ಪಡೆಯುವುದೇ ಸವಾಲಾಗಿದೆ.
ಇದರ ಜೊತೆಗೆ ಈ ಯೋಜನೆಯಿಂದ ತಮಗೆ ಆಡಳಿತಾತ್ಮಕ ಕೆಲಸದ ಹೊರೆ ಹೆಚ್ಚಾಗದಿರಲಿ ಎಂಬ ಆತಂಕವನ್ನು ಶಿಕ್ಷಕರು ವ್ಯಕ್ತಪಡಿಸಿದ್ದಾರೆ ಒಟ್ಟಾರೆ ಯಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ದೈಹಿಕ ಆರೋಗ್ಯವನ್ನೂ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಈ ಸಂಜೆ ಉಪಹಾರ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ಪೋಷಕರಿಂದ ವ್ಯಾಪಕ ಮೆಚ್ಚುಗೆ ಪಡೆದಿದ್ದು ಈಗಾಗಲೇ ಹತ್ತಾರು ಕೆಲಸ ಕಾರ್ಯಗಳ ನಡುವೆ ಬೇಸತ್ತಿರುವ ಶಿಕ್ಷಕರಿಗೆ ಮತ್ತೊಂದು ತಲೆನೋವು ಶುರುವಾಗಲಿದ್ದು ಹೇಗೆ ಇದನ್ನು ನಿಭಾಯಿಸಲಿದ್ದಾರೆ ಎಂಬೊದನ್ನು ಕಾದು ನೋಡಬೇಕಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು......