LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರ ದಿನದಂದೇ ರಾಜ್ಯದ ಶಿಕ್ಷಕರಿಗೆ ಗಿಫ್ಟ್.....

ಬೆಂಗಳೂರು -

ಶಿಕ್ಷಕರ ದಿನದಂದೇ ರಾಜ್ಯದ ಶಿಕ್ಷಕರಿಗೆ ರಾಜ್ಯ ಸರ್ಕಾರವು ವಿಶೇಷವಾದ ಗಿಫ್ಟ್ ನ್ನು ನೀಡಿದ್ದು ಇನ್ಮುಂದೆ ಟೀಚರ್ಸ್‌ ಹೆಸರಿನ ಮುಂದೆ Tr ಬರೆದು ಗೌರವಿಸಬೇಕು ಎಂದು ಸೂಚನೆ ನೀಡಿದೆ ಹೌದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾ ಗುತ್ತದೆ. ಮಕ್ಕಳಿಗೆ ಬಾಲ್ಯದಲ್ಲಿ ಸರಿಯಾದ ಮಾರ್ಗ ದರ್ಶನ ನೀಡುವುದರ ಮೂಲಕ ಅವರನ್ನು ಭವಿಷ್ಯ ದಲ್ಲಿ ಉತ್ತಮ ಗುಣಗಳುಳ್ಳಂತಹ ಒಳ್ಳೆಯ ಪ್ರಜೆ ಯನ್ನಾಗಿ ಮಾಡುವುದು ಮತ್ತು ಒಂದೊಳ್ಳೆಯ ಸಮಾಜದ ನಿರ್ಮಾಣ ಮಾಡುವಲ್ಲಿ ಶಿಕ್ಷಕರು ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸುತ್ತಾರೆ.

ಈ ಹಿನ್ನೆಲೆ ರಾಜ್ಯ ಸರ್ಕಾರ ಶಿಕ್ಷಕರ ದಿನಾಚರಣೆಯ ದಿನದಂದು ಶಿಕ್ಷಕರಿಗೆ ಗಿಫ್ಟ್​ ಕೊಟ್ಟಿದೆ.ಶಿಕ್ಷಕರು ಇನ್ಮುಂದೆ ಡಾಕ್ಟರ್​ಗಳು ಬಳಸುವ Dr. ರೀತಿ ಹೆಸರಿನ ಮೊದಲು "Tr" (Teacher) ಎಂಬ ಶೀರ್ಷಿಕೆ ಬಳಸಲು ಅಧಿಕೃತವಾಗಿ ಅನುಮತಿ ಕೊಟ್ಟಿದೆ. ಶಿಕ್ಷಕರು ತಮ್ಮ ಹೆಸರಿನ ಹಿಂದೆ ಹೆಮ್ಮೆಯಿಂದ "Tr" ಪೂರ್ವಪ್ರತ್ಯಯ ಶೀರ್ಷಿಕೆ ಬಳಸಲು ಅನುಮತಿ ನೀಡಲಾಗಿದೆ. ಸಿಎಂ ಡಿಕೆ ಶಿವಕುಮಾರ್​ ಒಪ್ಪಿಗೆ ನೀಡಿದ್ದು, ಶಾಲಾ ಶಿಕ್ಷಣ & ಸಾಕ್ಷರತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಕೃತ ಆದೇಶ ಪ್ರಕಟಿಸಿದೆ.

ಉತ್ತಮ ಸಮಾಜ ನಿರ್ಮಾಣದಲ್ಲಿ ಮತ್ತು ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿ ಗಳಿಗೆ ಜ್ಞಾನದ ಪ್ರಸಾರ- ಅಕ್ಷರಜ್ಞಾನ, ವೈಜ್ಞಾನಿಕ ಮತ್ತು ಪ್ರಾಯೋಗಿಕ ಮಾಹಿತಿಯನ್ನು ಒದಗಿಸುವ ಮೂಲಕ ಅವರ ಬೌದ್ಧಿಕ ಬೆಳವಣಿಗೆಗೆ ಅಡಿಪಾಯ ಹಾಕುತ್ತಾರೆ. ಸಂಸ್ಕಾರ ಮತ್ತು ಮೌಲ್ಯಗಳ ರೂಢಿ- ಸತ್ಯವರ್ತನೆ, ಶಿಸ್ತು, ಪ್ರಾಮಾಣಿಕತೆ, ಮತ್ತು ಪರಸ್ಪರ ಗೌರವದಂತಹ ಮಾನವೀಯ ಮೌಲ್ಯಗಳನ್ನು ಕಲಿಸಿ ಸಮಾಜಮುಖಿಯಾಗಿ ಬದುಕಲು ಮಾರ್ಗದರ್ಶನ ಮಾಡುತ್ತಾರೆ. ವ್ಯಕ್ತಿತ್ವ ವಿಕಸನ- ಮಕ್ಕಳಲ್ಲಿ ಆತ್ಮವಿಶ್ವಾಸ ವನ್ನು ತುಂಬಿ, ಸವಾಲುಗಳನ್ನು ಹಾಗೂ ವೈಫಲ್ಯ ಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಒದಗಿಸುವುದರಿಂದ ಶಿಸ್ತು, ಸಮಯ ಪ್ರಜ್ಞೆ ಹಾಗೂ ನೈತಿಕ ಮೌಲ್ಯಗಳನ್ನು ಕಲಿಸುತ್ತಾರೆ.

ಮಕ್ಕಳಲ್ಲಿ ಯಾವುದೇ ಭಯವಿಲ್ಲದೇ ಪ್ರಶ್ನಿಸುವ ಆತ್ಮಸ್ಥೈರ್ಯವನ್ನು ತುಂಬುತ್ತಾರೆ. ಅಲ್ಲದೇ, ಸಾಂವಿ ಧಾನಿಕ ಮೌಲ್ಯಗಳನ್ನು ಮಕ್ಕಳಲ್ಲಿ ರೂಢಿಸುತ್ತಾರೆ. ಪ್ರತಿಭೆ ಗುರುತಿಸುವಿಕೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಕೌಶಲ್ಯಗಳನ್ನು ಹೊರತರುತ್ತಾರೆ. ಮಾರ್ಗ ದರ್ಶನ ಸರಿಯಾದ ವೃತ್ತಿಜೀವನ ಆಯ್ಕೆ ಮಾಡಿ ಕೊಳ್ಳಲು ದಾರಿ ದೀಪವಾಗುತ್ತಾರೆ.

ಶಿಕ್ಷಕರು ಸಾಂವಿಧಾನಿಕ ಮೌಲ್ಯಗಳನ್ನು ಒಳಗೊಂಡ ಉತ್ತಮ ನಾಗರಿಕರ ನಿರ್ಮಾಣ ಮಾಡಲು ದೇಶದ ಜವಾಬ್ದಾರಿಯುತ ಪ್ರಜೆಗಳನ್ನು ಸಮಾಜಕ್ಕೆ ಕೊಡುಗೆ ಯಾಗಿ ನೀಡುತ್ತಾರೆ. ಸಮಾಜದಲ್ಲಿನ ಮೂಢನಂಬಿಕೆ ಮತ್ತು ಅಜ್ಞಾನವನ್ನು ತೊಡೆದುಹಾಕಲು ಶ್ರಮಿಸುತ್ತಾರೆ. ದೇಶಕ್ಕೆ ವೈದ್ಯರು, ಇಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ನಾಯಕರನ್ನು ಹಾಗೂ ವೃತ್ತಿಪರರನ್ನು ರೂಪಿಸು ತ್ತಾರೆ. ಜಾತಿ, ಧರ್ಮ ಭೇದವಿಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣ ನೀಡಿ ಸಾಮಾಜಿಕ ಸಾಮರಸ್ಯ ಬೆಳೆಸುತ್ತಾರೆ. ಮುಂದಿನ ಪೀಳಿಗೆಗೆ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ದಾಟಿಸುವುದರ ಮೂಲಕ ಸಂಸ್ಕೃತಿಯ ರಕ್ಷಣೆಯನ್ನು ಮಾಡುತ್ತಾರೆ.

ರಾಷ್ಟ್ರವನ್ನು ನಿರ್ಮಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಒಬ್ಬ ಶಿಕ್ಷಕ ನಿರ್ಮಿಸುತ್ತಾನೆ. ಕರ್ನಾಟಕದಲ್ಲಿ ಸುಮಾರು 4.5 ಲಕ್ಷ ಶಿಕ್ಷಕರು ಸೇರಿದಂತೆ ಭಾರತದ ಒಂದು ಕೋಟಿಗೂ ಹೆಚ್ಚು ಶಿಕ್ಷಕರು ಪ್ರತಿದಿನ ನಮ್ಮ ಮಕ್ಕಳ ಮನಸ್ಸು ಮತ್ತು ಭವಿಷ್ಯವನ್ನು ರೂಪಿಸು ತ್ತಿದ್ದಾರೆ. ಗುಣಪಡಿಸುವ ಪ್ರತಿಯೊಬ್ಬ ವೈದ್ಯರು, ಕಟ್ಟಡ ನಿರ್ಮಿಸುವ ಇಂಜಿನಿಯರ್, ನಮಗೆ ಆಹಾರ ನೀಡುವ ರೈತ, ಸೇವೆ ಸಲ್ಲಿಸುವ ಅಧಿಕಾರಿ, ಉದ್ಯೋಗ ಸೃಷ್ಟಿಸುವ ಉದ್ಯಮಿ ಮತ್ತು ನಮಗೆ ಮಾರ್ಗದರ್ಶನ ನೀಡುವ ನಾಯಕನ ಹಿಂದೆ ಒಬ್ಬ ಶಿಕ್ಷಕ/ಶಿಕ್ಷಕಿ ಇರುತ್ತಾರೆ.

ಅವರು ಮೊದಲು ತಮ್ಮ ಸಾಮರ್ಥ್ಯವನ್ನು ಗುರುತಿಸಿ ಸಾಧ್ಯವಾದದ್ದನ್ನು ಅವರಿಗೆ ತೋರಿಸಿಕೊಟ್ಟವರು. ಈ ಶಿಕ್ಷಕರ ದಿನದಂದು, ಸರ್ಕಾರವು ಈ ಅಮೂಲ್ಯ ಕೊಡುಗೆಯನ್ನು ಗೌರವದ ವಿಶಿಷ್ಟ ಚಿಹ್ನೆಯೊಂದಿಗೆ ಗೌರವಿಸಲು ನಿರ್ಧರಿಸಿದ್ದು, ಇಂದಿನಿಂದ ಕರ್ನಾ ಟಕದ ಶಿಕ್ಷಕರು ತಮ್ಮ ಹೆಸರಿನ ಮೊದಲು "Tr" ಎಂಬ ಪೂರ್ವಪ್ರತ್ಯಯವನ್ನು ಹೆಮ್ಮೆಯಿಂದ ಬಳಸಬ ಹುದಾಗಿದ್ದು, ಇದು ಕೇವಲ ಎರಡು ಅಕ್ಷರಗಳಾ ಗಿರದೇ, ಇದು ಅವರುಗಳ ಜೀವಿತಾವಧಿಯ ಸೇವೆ ಯನ್ನು ಪ್ರತಿನಿಧಿಸುತ್ತದೆ. "Tr," ಎಂಬುದು ಶೀರ್ಷಿಕೆ ಗಿಂತ ಹೆಚ್ಚಿನದಾಗಿದ್ದು, ಇದು ಇತರರ ಜೀವನವನ್ನು ರೂಪಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರಿಗೆ ಸಮಾಜವು ನೀಡುವ ಮನ್ನಣೆಯಾಗಿದೆ ಎಂಬುದನ್ನು ಮನಗಂಡು ಪ್ರತಿಯೊಬ್ಬ ಶಿಕ್ಷಕರಿಗೂ,ಗೌರವ ಸಮರ್ಪಣೆ ಮಾಡುವ ಸಲುವಾಗಿ ದಿನಾಂಕ: 05.09. 2026ರ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರ ಹೆಸರುಗಳ ಪೂರ್ವದಲ್ಲಿ Tr (Teacher-ಶಿಕ್ಷಕ) ಎಂಬ ಶೀರ್ಷಿಕೆಯನ್ನು (Title) ಬಳಸಲು ಸರ್ಕಾರವು ತೀರ್ಮಾನಿಸಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ್ಯಾಯಾಲಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಶಿಕ್ಷಕ.....ರಾಜ್ಯದ ಸಮಸ್ತ ಶಿಕ್ಷಕರಿಗೆ ಸಂದ ಗೆಲುವು ಇಲಾಖೆಗೆ ಮುಖ ಭಂಗ.....ರಾಜ್ಯದ ಸಮಸ್ತ BLO ಶಿಕ್ಷಕರಿಗೆ ಶುಭ ಸುದ್ದಿ.....ಶಿಕ್ಷಕರ ನೇಮಕಾತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ.....ಶೀಘ್ರದಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ OPS ಭಾಗ್ಯ ಮಾಹಿತಿ ಅಧಿಕೃತ ಹಂಚಿಕೊಂಡ DCM..... ಹಳೆಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಎಷ್ಟು ನೌಕರರು ಬರುತ್ತಾರೆ ಯಾರಿಗೆ ಯಾರಿಗೆ ಅನುಕೂಲ ಕಂಪ್ಲೀಟ್ ಮಾಹಿತಿ.....ಶುರುವಾಯಿತು ಲೆಕ್ಕಾಚಾರ.....ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತೊಂದು ಭಾಗ್ಯ ಶಿಕ್ಷಕರಿಗೆ ಮತ್ತೊಂದು ತಲೆನೋವು.....ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ಭರ್ಜರಿ ಗ್ಯಾರಂಟಿ ಯೋಜನೆ.....ಈಡೇರಲಿದೆ ಬಹುದಿನದ ಬೇಡಿಕೆ.....ಶಿಕ್ಷಕರ ದಿನಾಚರಣೆಯಂದು ಇದೆಂಥಾ ಅವಘಡ.....ತಪ್ಪಿತು ದೊಡ್ಡ ದುರಂತ.....ಶಿಕ್ಷಕರ ದಿನಾಚರಣೆ ದಿನದಂದೇ ಹೊಸ ಬೇಡಿಕೆ ಇಟ್ಟ ಶಿಕ್ಷಕರು.....ದೇಶದ ಎಷ್ಟು ಸರ್ಕಾರಿ ಶಾಲೆಗಳಲ್ಲಿ ಎಷ್ಟು ಶಿಕ್ಷಕರಿದ್ದಾರೆ.....ಕರ್ನಾಟಕದಲ್ಲಿ ಶಿಕ್ಷಕರ ಸಂಖ್ಯೆ ಎಷ್ಟಿದೆ ಗೊತ್ತಾ ಒಂದಿಷ್ಟು ಕುತೂಹಲ ಮಾಹಿತಿ ನಿಮಗಾಗಿ.....ಶಿಕ್ಷಕರ ದಿನದಂದೇ ರಾಜ್ಯದ ಶಿಕ್ಷಕರಿಗೆ ಗಿಫ್ಟ್.....