LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರ ದಿನಾಚರಣೆ ದಿನದಂದೇ ಹೊಸ ಬೇಡಿಕೆ ಇಟ್ಟ ಶಿಕ್ಷಕರು.....

ಬೆಂಗಳೂರು -

ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಮತ್ತು ಮಕ್ಕಳ ಬದುಕನ್ನು ತಿದ್ದಿ ತೀಡುವ ಮಹತ್ತರ ಜವಾಬ್ದಾರಿ ಹೊತ್ತಿದ್ದಾರೆ. ಆದರೆ ಎಸ್‌ಐಆರ್, ಬಿಎಲ್‌ಒ ಸೇರಿ ದಂತೆ ಹತ್ತು ಹಲವು ಬೋಧನೇತರ ಕರ್ತವ್ಯಗಳ ಒತ್ತಡದಿಂದಾಗಿ ಮಕ್ಕಳಿಗೆ ಪಾಠ ಮಾಡಲು ಸಾಧ್ಯ ವಾಗುತ್ತಿಲ್ಲ ಹೀಗಾಗಿ ಎಲ್ಲಾ ಚಟುವಟಿಕೆ ಗಳಿಂದ ಮುಕ್ತಿ ನೀಡಿ ಕೇವಲ ಪಾಠ ಬೋಧನೆ ಮಾಡಲು ಅವಕಾಶ ನೀಡಲು ರಾಜ್ಯದ ಶಿಕ್ಷಕರು ಆಗ್ರಹ ಮಾಡಿದ್ದಾರೆ.

ಸಮಾಜದ ಭದ್ರ ಬುನಾದಿ ಪ್ರಾಥಮಿಕ ಶಾಲೆಯಲ್ಲಿದೆ ಎಂಬುದನ್ನು ಅರಿತು, ಸರ್ಕಾರ ಶಿಕ್ಷಕರಿಗೆ ನೆಮ್ಮದಿ ಯಿಂದ ಪಾಠ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ ಒತ್ತಾಯಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರದ ಈಡಿಗರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಸ್ಥಳೀಯ ಶಾಸಕರು ಸಾಗರದ ಹೃದಯಭಾಗದಲ್ಲಿರುವ ಗುರುಭವನದ ಮೇಲ್ಮಹಡಿ ಕಾಮಗಾರಿಗೆ ಸರ್ಕಾರದ ಅನುದಾನ ಒದಗಿಸಿಕೊಡಬೇಕು. ಇದರಿಂದ ಶಿಕ್ಷಕರು ತಮ್ಮ ವೈಯಕ್ತಿಕ ಅಥವಾ ಸಂಘಟನಾ ಕಾರ್ಯಕ್ರಮ ಗಳಿಗೆ ಖಾಸಗಿ ಸಮುದಾಯ ಭವನಗಳಿಗೆ ಸಾವಿ ರಾರು ರೂಪಾಯಿ ಬಾಡಿಗೆ ನೀಡುವುದು ತಪ್ಪುತ್ತದೆ. ಶಿಕ್ಷಕರ ಸಂಘವು ಸದಾ ಶಿಕ್ಷಕರ ಹಿತರಕ್ಷಣೆಗೆ ಬದ್ಧವಾಗಿದ್ದು, ಸ್ವಂತ ಕಟ್ಟಡ ಸೌಲಭ್ಯ ಒದಗಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು

ಶಿಕ್ಷಕರೊಬ್ಬರ ಕುಟುಂಬದ ತುರ್ತು ಚಿಕಿತ್ಸೆಯ ಸಂದರ್ಭವನ್ನು ಉಲ್ಲೇಖಿಸಿದ ಅವರು, ಸಾಗರ ನಗರದಲ್ಲಿ ಉತ್ತಮ ಖಾಸಗಿ ಆಸ್ಪತ್ರೆಗಳು ಸರ್ಕಾರದ 'ಆರೋಗ್ಯ ಸಂಜೀವಿನಿ' ವ್ಯಾಪ್ತಿಗೆ ಒಳಪಡದಿರು ವುದರಿಂದ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕು ತ್ತಿದ್ದಾರೆ. ಹೀಗಾಗಿ ಸ್ಥಳೀಯ ಆಸ್ಪತ್ರೆಗಳನ್ನು ಈ ಯೋಜನೆಯಡಿ ನೋಂದಾಯಿಸುವ ಕ್ರಮವಾಗ ಬೇಕು ಎಂದರು.

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಂಬಂಧಿ ಸಿದಂತೆ ಪ್ರಸ್ತುತ ಶಿಕ್ಷಕರೇ ತಮ್ಮ ಕೈಯಿಂದ ಪ್ರತಿ ಮೊಟ್ಟೆಗೆ ₹1.5 ರಿಂದ ₹2 ವರೆಗೆ ಹೆಚ್ಚುವರಿ ಹಣ ಭರಿಸುತ್ತಿದ್ದಾರೆ. ಸರ್ಕಾರ ಶೀಘ್ರದಲ್ಲೇ ಮೊಟ್ಟೆ ದರ ಹೆಚ್ಚಳ ಮಾಡುವ ನಿರೀಕ್ಷೆಯಿದೆ. ತಾಲೂಕಿನ ಶಿಕ್ಷಕರ ಅವಿರತ ಪರಿಶ್ರಮದಿಂದಾಗಿಯೇ ಎಸ್‌ಎಸ್‌ಎಲ್‌ಸಿ ಹಾಗೂ ಎನ್‌ಎಂಎಂಎಸ್ ಪರೀಕ್ಷೆಗಳಲ್ಲಿ ಸಾಗರ ತಾಲೂಕು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಮುಂಚೂ ಣಿಯಲ್ಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ

ಸುದೀರ್ಘ ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕರು ಮನೆಯಲ್ಲೇ ಸುಮ್ಮನೆ ಕುಳಿತುಕೊಳ್ಳದೆ ಯಾವುದಾದರೂ ಸಮಾಜ ಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ನಿರಂತರ ಕ್ರಿಯಾಶೀಲತೆಯಿಂದ ಮಾತ್ರ ಆಯಸ್ಸು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ಅವರು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಉಪವಿಭಾಗಾಧಿಕಾರಿ ವೀರೇಶ್ ಕುಮಾರ್, ತಹಶೀಲ್ದಾರ್ ಪ್ರತಿಭಾ, ಕ್ಷೇತ್ರ ಶಿಕ್ಷಣಾ ಧಿಕಾರಿ ಸದಾನಂದ ಸ್ವಾಮಿ, ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್.ಎನ್, ಪ್ರಭಾರ ಬಿಇಓ ಓಂಕಾರಪ್ಪ ಸೇರಿದಂತೆ ಪ್ರಮುಖ ಗಣ್ಯರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು......

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ್ಯಾಯಾಲಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಶಿಕ್ಷಕ.....ರಾಜ್ಯದ ಸಮಸ್ತ ಶಿಕ್ಷಕರಿಗೆ ಸಂದ ಗೆಲುವು ಇಲಾಖೆಗೆ ಮುಖ ಭಂಗ.....ರಾಜ್ಯದ ಸಮಸ್ತ BLO ಶಿಕ್ಷಕರಿಗೆ ಶುಭ ಸುದ್ದಿ.....ಶಿಕ್ಷಕರ ನೇಮಕಾತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ.....ಶೀಘ್ರದಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ OPS ಭಾಗ್ಯ ಮಾಹಿತಿ ಅಧಿಕೃತ ಹಂಚಿಕೊಂಡ DCM..... ಹಳೆಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಎಷ್ಟು ನೌಕರರು ಬರುತ್ತಾರೆ ಯಾರಿಗೆ ಯಾರಿಗೆ ಅನುಕೂಲ ಕಂಪ್ಲೀಟ್ ಮಾಹಿತಿ.....ಶುರುವಾಯಿತು ಲೆಕ್ಕಾಚಾರ.....ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತೊಂದು ಭಾಗ್ಯ ಶಿಕ್ಷಕರಿಗೆ ಮತ್ತೊಂದು ತಲೆನೋವು.....ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ಭರ್ಜರಿ ಗ್ಯಾರಂಟಿ ಯೋಜನೆ.....ಈಡೇರಲಿದೆ ಬಹುದಿನದ ಬೇಡಿಕೆ.....ಶಿಕ್ಷಕರ ದಿನಾಚರಣೆಯಂದು ಇದೆಂಥಾ ಅವಘಡ.....ತಪ್ಪಿತು ದೊಡ್ಡ ದುರಂತ.....ಶಿಕ್ಷಕರ ದಿನಾಚರಣೆ ದಿನದಂದೇ ಹೊಸ ಬೇಡಿಕೆ ಇಟ್ಟ ಶಿಕ್ಷಕರು.....ದೇಶದ ಎಷ್ಟು ಸರ್ಕಾರಿ ಶಾಲೆಗಳಲ್ಲಿ ಎಷ್ಟು ಶಿಕ್ಷಕರಿದ್ದಾರೆ.....ಕರ್ನಾಟಕದಲ್ಲಿ ಶಿಕ್ಷಕರ ಸಂಖ್ಯೆ ಎಷ್ಟಿದೆ ಗೊತ್ತಾ ಒಂದಿಷ್ಟು ಕುತೂಹಲ ಮಾಹಿತಿ ನಿಮಗಾಗಿ.....ಶಿಕ್ಷಕರ ದಿನದಂದೇ ರಾಜ್ಯದ ಶಿಕ್ಷಕರಿಗೆ ಗಿಫ್ಟ್.....