ಗದಗ -
ಶಿಕ್ಷಕರ ದಿನಾಚರಣೆ ಸಮಾರಂಭ ಮುಗಿಸಿಕೊಂಡು ಪುನಃ ಮನೆಗೆ ಹೊರಟಿದ್ದ ಸಮಯದಲ್ಲಿ ವಾಹನ ವೊಂದು ಅಪಘಾತ ವಾದ ಘಟನೆ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ನಡೆದಿದೆ ಶಾಲಾ ವಾಹನ ಪಲ್ಟಿಯಾಗಿ ಆರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ವಿಜಯಪುರ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ಜಮಾದಾರ ಪ್ಲಾಟ್ ಬಳಿ) ಸಂಭವಿಸಿದೆ. ಪಟ್ಟಣದ ರೋಟರ‌್ಯಾಕ್ಟ್ ಕನ್ನಡ ಮಾಧ್ಯಮ ಶಾಲೆಯ ಮಹೀಂದ್ರ ಸುಪ್ರೋ ಮ್ಯಾಕ್ಸಿ ಕ್ಯಾಬ್ ವಾಹನ ಪಲ್ಟಿಯಾಗಿದೆ.
ತಾಲೂಕಿನ ಭೈರನಹಟ್ಟಿ ಗ್ರಾಮದ ಅಭಿಲಾಷಗೌಡ ಪಾಟೀಲ, ಪ್ರಜ್ವಲ್‌ಗೌಡ ಪಾಟೀಲ, ಮುತ್ತು ದಂಡಿನ, ಶಿಲ್ಪಾ ಮಣ್ಣೂರಮಠ ಎಂಬುವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೌಮ್ಯ ದಂಡಿನ, ರಂಗನಾಥ ಸಂಗಟಿ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅವರನ್ನು ಪಟ್ಟಣದ ಬಾಬಾ ಸಾಹೇಬ ಭಾವೆ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿಕ್ಷಕರ ದಿನಾಚರಣೆ ಅಂಗವಾಗಿ ನರಗುಂದಕ್ಕೆ ಆಗಮಿಸಿದ್ದ 12 ವಿದ್ಯಾರ್ಥಿಗಳನ್ನು ಸಂಜೆ ಪುನಃ ಭೈರನಹಟ್ಟಿಗೆ ಕರೆದೊಯ್ಯುಲಾಗುತ್ತಿತ್ತು. ಈ ವೇಳೆ ವಾಹನದ ಸ್ಟೇರಿಂಗ್ ರಾಡ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಡಿವೈಡರ್‌ಗೆ ಡಿಕ್ಕಿ ಹೊಡೆದು ವ್ಯಾನ್ ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ವಿದ್ಯಾರ್ಥಿಗಳ ತಲೆ, ಕೈ-ಕಾಲು, ಕಣ್ಣು, ದೇಹದ ವಿವಿಧ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರು.
ಈ ವೇಳೆ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಮಾನವೀ ಯತೆ ಮೆರೆದಿದ್ದಾರೆ. ಶಾಲಾ ವಾಹನದಲ್ಲಿ ಸಿಲುಕಿದ್ದ ಕೆಲವೊಂದು ವಿದ್ಯಾರ್ಥಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಜಿ ಶಾಸಕ ಬಿ.ಆರ್.ಯಾವಗಲ್, ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಜು ಕಲಾಲ, ಸಿಪಿಐ ಎಸ್.ಬಿ. ಮಾಳಗೊಂಡ ಆಸ್ಪತ್ರೆ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುದ್ದಿ ಸಂತೆ ನ್ಯೂಸ್ ಗದಗ......