LIVE TV LocalCrimeNationalInternationalPoliticsEducationTechnologyEntertainmentSportsFeature
State News

ನಾಲ್ಕು ತಿಂಗಳಿನಿಂದ ಸಂಬಳವಿಲ್ಲದ ಬಿಸಿಯೂಟ ಅಡುಗೆ ಸಿಬ್ಬಂದಿ.....

ಹನೂರು -

ಹನೂರು ತಾಲ್ಲೂಕಿನ ಕಿರಿಯ, ಹಿರಿಯ ಪ್ರೌಢಶಾಲೆ ಹಾಗೂ ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿ ಸುತ್ತಿರುವ 392 ಅಡುಗೆ ಸಿಬ್ಬಂದಿಗೆ 4 ತಿಂಗಳಿನಿಂದ ವೇತನ ಬಿಡುಗಡೆಯಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.ಮಕ್ಕಳು ಶಾಲೆಯಿಂದ ಹೊರಗುಳಿಯು ವುದನ್ನು ತಪ್ಪಿಸಲು ದಾಖಲಾತಿ ಮತ್ತು ಹಾಜರಾತಿ ಪ್ರಮಾಣ ಹೆಚ್ಚಿಸಲು, ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಉದ್ದೇಶದಿಂದ 2002-03ರಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ಯೋಜನೆಯನ್ನು ಸರ್ಕಾರ ಆರಂಭಿ ಸಿದ್ದು ಗೌರವ ಧನದ ಆಧಾರದ ಮೇಲೆ ಸ್ಥಳೀಯ ಮಹಿಳೆಯರನ್ನು ಅಡುಗೆ ಸಿಬ್ಬಂದಿಯನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ.

ಪ್ರಸ್ತುತ ಮುಖ್ಯ ಅಡುಗೆ ಸಿಬ್ಬಂದಿಗೆ ₹ 4,700 ಹಾಗೂ ಸಹಾಯಕ ಅಡುಗೆ ಸಿಬ್ಬಂದಿಗೆ ₹4,600 ವೇತನ ನೀಡಲಾಗುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದ ಜೂನ್ ತಿಂಗಳಲ್ಲಿ ವೇತನ ಬಿಡುಗಡೆಯಾಗಿದ್ದು, ಬಿಟ್ಟರೆ ಇದುವರೆಗೂ ವೇತನ ನೀಡಿಲ್ಲ ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ವೇತನ ಬಿಡುಗಡೆ ಬಾಕಿ ಇದ್ದು ಅಡುಗೆ ಸಹಾಯಕಿಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.'ಸರ್ಕಾರ ನೀಡುತ್ತಿರುವುದು ಅತ್ಯಂತ ಕಡಿಮೆ ಗೌರವ ಧನವನ್ನು ಪ್ರತಿ ತಿಂಗಳು ಕೊಡದೆ ಸತಾಯಿಸಲಾಗುತ್ತಿದ್ದು ಜೀವನ ನಿರ್ವಹಣೆ ಕಷ್ಟವಾಗಿದೆ. ಅಕ್ಕಿ, ಹಾಲು, ಬೇಳೆಕಾಳು ಸಹಿತ ಅಗತ್ಯ ವಸ್ತುಗಳ ದರ ಗಗನಕ್ಕೇರಿದ್ದು ಜೀವನ ನಿರ್ವಹಣೆಗೆ ಹಣವಿಲ್ಲದೆ ಪರದಾಡುವಂತಾಗಿದೆ. ಬಾಕಿ ವೇತನ ಬಿಡುಗಡೆಗೆ ಅಧಿಕಾರಿಗಳಿಗೆ ಮನವಿ ಮಾಡಿದರೆ ಸ್ಪಂದಿಸುತ್ತಿಲ್ಲ. ಕೊಡುವು ಬಿಡುಗಾಸು ಹಣವನ್ನೂ ಬಾಕಿ ಉಳಿಸಿಕೊಂಡರೆ ಹೇಗೆ' ಎಂದು ಬಿಸಿಯೂಟ ತಯಾರಿಸುವ ಅಡುಗೆ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾ ಪಂಚಾಯಿತಿಯಲ್ಲಿ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ವರ್ಗಾವಣೆಯಾಗಿದ್ದು ಹೊಸದಾಗಿ ಬಂದಿರುವ ಸಿಇಒ ಅವರಿಗೆ ಡಿಜಿಟಲ್ ಸಹಿ ಲಭಿಸದ ಕಾರಣ ಅಡುಗೆ ಸಿಬ್ಬಂದಿಗೆ ವೇತನ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಒಂದು ಅಥವಾ ಎರಡು ತಿಂಗಳು ವೇತನ ಬಿಡುಗಡೆ ವಿಳಂಬವಾದರೆ ಪರಿಚಿತರ ಬಳಿ ಕೈಸಾಲ ಪಡೆದು ಜೀವನ ನಡೆಸಬ ಹುದು. ಆದರೆ, ನಾಲ್ಕು ತಿಂಗಳು ವೇತನ ಬಾಕಿ ಉಳಿಸಿಕೊಂಡರೆ ಬದುಕುವುದು ಹೇಗೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡರು.

ಮಾಸಿಕ ಲಕ್ಷಾಂತರ ರೂಪಾಯಿ ವೇತನ ಪಡೆಯುವ ಅಧಿಕಾರಿಗಳಿಗೆ ನಾಲ್ಕು ತಿಂಗಳು ವೇತನ ಇಲ್ಲದಿದ್ದರೆ ಜೀವನ ನಿರ್ವಹಣೆ ಮಾಡುತ್ತಾರೆಯೇ ಎಂದು ಪ್ರಶ್ನಿಸುತ್ತಿರುವ ಅಡುಗೆ ಸಿಬ್ಬಂದಿ, ಇಲಾಖೆಯ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.'20 ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿ ಕಾರ್ಯನಿರ್ವ ಹಿಸುತ್ತಿದ್ದೇನೆ. ಸರಿಯಾದ ಸಮಯಕ್ಕೆ ವೇತನ ಬಾರದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಕೂಲಿ ಕೆಲಸಕ್ಕೆ ಹೋದರೆ ಪ್ರತಿದಿನ ₹ 300 ರಿಂದ ₹ 500 ರೂಪಾಯಿ ಸಿಗುತ್ತದೆ. ಕೆಲಸದಲ್ಲಿ ಮುಂದುವರಿ ಯಲೂ ಆಗುತ್ತಿಲ್ಲ, ಬಿಡಲೂ ಆಗುತ್ತಿಲ್ಲ, ತ್ರಿಶಂಕು ಪರಿಸ್ಥಿತಿಯಲ್ಲಿದ್ದೇವೆ' ಎನ್ನುತ್ತಾರೆ ಅಡುಗೆ ಸಿಬ್ಬಂದಿ.

ನಾಲ್ಕು ತಿಂಗಳ ವೇತನ ಬಾಕಿ ಬಿಡುಗಡೆಗೆ ಒತ್ತಾಯಿಸಿ ಅಡುಗೆ ಸಿಬ್ಬಂದಿ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಶಾಲೆಯಲ್ಲಿ ಸಾವಿರಾರು ಮಕ್ಕಳಿಗೆ ಅಡುಗೆ ಮಾಡಿ ಬಡಿಸುವ ಸಿಬ್ಬಂದಿಯ ಶ್ರಮಕ್ಕೆ ಅಧಿಕಾರಿಗಳು ಗೌರವ ಕೊಡದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪ್ರತಿಭಟನೆ ಮಾಡಲು ನಿರ್ಧರಿ ಸಿದ್ದೇವೆ ಎಂದು ನೊಂದ ಸಿಬ್ಬಂದಿ ತಿಳಿಸಿದ್ದಾರೆ.

ಹಿಂದಿದ್ದ ಜಿಲ್ಲಾ ಪಂಚಾಯಿತಿ ಸಿಇಒ ವರ್ಗಾವಣೆ ಯಾಗಿರುವುರಿಂದ ವೇತನ ಬಿಡುಗಡೆಗೆ ತಾಂತ್ರಿಕ ಅಡೆಡೆಗಳು ಉಂಟಾಗಿವೆ. 4 ತಿಂಗಳ ವೇತನ ಬಿಡುಗಡೆಗೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿ ಸಮಸ್ಯೆಯನ್ನು ತಿಳಿಸಲಾಗಿದೆ. ಶೀಘ್ರ ಎರಡು ತಿಂಗಳಿನಂತೆ ಬಾಕಿ ವೇತನ ಹಂತ ಹಂತವಾಗಿ ಪಾವತಿಯಾಗಲಿದೆ ಎಂದು ಹನೂರು ಬಿಇಒ ಪ್ರತಿಭಾ ತಿಳಿಸಿದರು.

ಸುದ್ದಿ ಸಂತೆ ನ್ಯೂಸ್ ಹನೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣ ಸಚಿವರನ್ನು ಭೇಟಿಯಾದ KSPSTA ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ..... ಹಲವು ಸಮಸ್ಯೆ ಗಳ ಕುರಿತು ಚರ್ಚೆ.....ಕನ್ನಡ ಶಾಲೆಗಳ ಖಾಸಗೀಕರಣಕ್ಕೆ ವಿರೋಧ.....ನಾಲ್ಕು ತಿಂಗಳಿನಿಂದ ಸಂಬಳವಿಲ್ಲದ ಬಿಸಿಯೂಟ ಅಡುಗೆ ಸಿಬ್ಬಂದಿ.....ನಾಳೆಯಿಂದ ರಾಜ್ಯಾದ್ಯಂತ ಶಾಲೆಗಳಲ್ಲಿ ಬಿಸಿಯೂಟ ಬಂದ್.....ಸರ್ಕಾರದ ವಿರುದ್ಧ ನಡೆಯಲಿದೆ ಪ್ರತಿಭಟನೆ.....ಹೆಸ್ಕಾಂ ಸದಸ್ಯರಾಗಿ ಈಶ್ವರ ಶಿವಳ್ಳಿ ನೇಮಕ..... ಪುತ್ರಿಯ ವಿವಾಹಕ್ಕೆ ಶಿಕ್ಷಣ ಸಚಿವರಿಗೆ ಆಮಂತ್ರಣ ಪತ್ರ ನೀಡಿದ ಶಾಸಕ ಕೋನರೆಡ್ಡಿ ದಂಪತಿ.....ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದ ಮಗನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ಕೊಟ್ಟ ತಂದೆ.....ಕಪ್ಪು ಪಟ್ಟಿಗೆ L & T ಮಹತ್ವದ ನಿರ್ಧಾರ ಕೈಗೊಂಡ ಸಚಿವರು.....ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ.....13 ಸಾವಿರ ರೂಪಾಯಿ ಗೆ ಲಾಕ್.....ಶಿಕ್ಷಣ ಕ್ಷೇತ್ರದಲ್ಲಿ ತಲೆತಗ್ಗಿಸುವ ಘಟನೆ..... ಶಿಕ್ಷಕ ಮಾಡಿದ ಕೆಲಸ ನೋಡಿ.....