ಬೆಂಗಳೂರು -
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪುತ್ರಿ ವಿವಾಹದ ಆಮಂತ್ರಣ ನೀಡಿದ ಶಾಸಕ ಎನ್.ಕೆ. ಕೋನರೆಡ್ಡಿ ಹೌದು ಡಿಸೆಂಬರ್ 9ರಂದು ನಡೆಯ ಲಿರುವ ಪುತ್ರಿ ನಿವೇದಿತಾ ವಿವಾಹ ಸಮಾರಂಭಕ್ಕೆ ಕುಟುಂಬ ಸಮೇತ ಆಗಮಿಸುವಂತೆ ಆತ್ಮೀಯ ಆಹ್ವಾನವನ್ನು ನೀಡಲಾಯಿತು ಶಾಸಕ ಎನ್.ಕೆ. ಕೋನರೆಡ್ಡಿ ಅವರು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ತಮ್ಮ ಪುತ್ರಿ ಕುಮಾರಿ ನಿವೇದಿತಾ ಅವರ ವಿವಾಹ ಸಮಾರಂಭಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.
ಬರುವ ಡಿಸೆಂಬರ್ 9ರಂದು ಪುತ್ರಿ ಕುಮಾರಿ ನಿವೇದಿತಾ ಅವರ ವಿವಾಹ ಸಮಾರಂಭವನ್ನು ಆಯೋಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿದ ಶಾಸಕ ಎನ್.ಕೆ. ಕೋನರೆಡ್ಡಿ ಅವರು ವಿವಾಹ ಆಮಂತ್ರಣ ಪತ್ರಿಕೆಯನ್ನು ನೀಡಿ ಆಹ್ವಾನಿಸಿದರು.ಈ ಸಂದರ್ಭ ದಲ್ಲಿ ತಮ್ಮ ಕುಟುಂಬದೊಂದಿಗೆ ವಿವಾಹ ಸಮಾರಂ ಭಕ್ಕೆ ಆಗಮಿಸಿ ನವಜೋಡಿಗೆ ಆಶೀರ್ವದಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಈ ವೇಳೆ ಶಾಸಕ ಎನ್.ಕೆ. ಕೋನರೆಡ್ಡಿ ಅವರ ಪತ್ನಿ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಸಚಿವರ ಭೇಟಿಯ ಸಂದರ್ಭದಲ್ಲಿ ಆತ್ಮೀಯ ಮಾತುಕತೆ ನಡೆಯಿತು.ಪುತ್ರಿಯ ವಿವಾಹದ ಸಂಭ್ರಮಕ್ಕೆ ಗಣ್ಯರನ್ನು ಆಹ್ವಾನಿಸುವ ಕಾರ್ಯದಲ್ಲಿ ಶಾಸಕ ಎನ್.ಕೆ. ಕೋನರೆಡ್ಡಿ ಅವರು ತೊಡಗಿಸಿ ಕೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....