ರಾಮನಗರ -
ವಂಶವೃಕ್ಷ ಪ್ರಮಾಣಪತ್ರಕ್ಕೆ ಸಹಿ ಹಾಕುವುದಕ್ಕಾಗಿ ಅರ್ಜಿದಾರರಿಂದ ₹13 ಸಾವಿರ ಲಂಚ ಪಡೆಯುತ್ತಿದ್ದ ತಾಲ್ಲೂಕಿನ ಕೂಟಗಲ್ ಹೋಬಳಿಯ ಉಪ ತಹಶೀಲ್ದಾರ್ ಸೋಮೇಶ್ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಹೋಬಳಿಯ ಹೊಂಬೇಗೌಡನದೊಡ್ಡಿಯ ರಾಕೇಶ್ ಎಂಬುವರು ವಂಶವೃಕ್ಷ ಪ್ರಮಾಣಪತ್ರಕ್ಕಾಗಿ ಒಂದು ವಾರದ ಹಿಂದೆ ಅರ್ಜಿ ಹಾಕಿದ್ದರು.ಗ್ರಾಮ ಲೆಕ್ಕಾಧಿಕಾರಿ ಅವರಿಂದ ಅರ್ಜಿಯು ಪರಿಶೀಲನೆಗೆ ಒಳಗಾಗಿ ಅಂತಿಮ ಸಹಿಗಾಗಿ ಉಪ ತಹಶೀಲ್ದಾರ್ ಸೋಮೇಶ್ ಅವರ ಬಳಿಗೆ ಬಂದಿತ್ತು
ಅರ್ಜಿಗೆ ಸಹಿ ಹಾಕಬೇಕಾದರೆ ₹15 ಸಾವಿರ ಗೆ ಬೇಡಿಕೆ ಇಟ್ಟಿದ್ದು . ರಾಕೇಶ್ ಅವರು ಎರಡ್ಮೂರು ಸಲ ಕಚೇರಿಗೆ ಹೋಗಿ ಮನವಿ ಮಾಡಿದರೂ ಸೋಮೇಶ್ ಸಹಿ ಹಾಕಿರಲಿಲ್ಲ. ಹಣ ತಂದರೆ ಮಾತ್ರ ಪ್ರಮಾಣಪತ್ರ ಸಿಗಲಿದೆ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ಹೇಳಿದರು.ಅಧಿಕಾರಿಯ ಲಂಚದ ಬೇಡಿಕೆ ಕುರಿತು ರಾಕೇಶ್ ಅವರು ಲೋಕಾಯಕ್ತಕ್ಕೆ ದೂರು ಕೊಟ್ಟಿದ್ದರು ನಂತರ ಸೋಮೇಶ್ ಅವರನ್ನು ಮತ್ತೆ ಭೇಟಿಯಾದಾಗ ಅಂತಿಮವಾಗಿ ₹13 ಸಾವಿರ ತಂದು ಕೊಡುವಂತೆ ಹೇಳಿದ್ದರುಅದರಂತೆ ಹಣ ಕೊಟ್ಟರೆ ಪ್ರಮಾಣಪತ್ರಕ್ಕೆ ಸಹಿ ಹಾಕಿ ಕೊಡುವುದಾಗಿ ಹೇಳಿದ್ದರು
ಅದರಂತೆ ರಾಕೇಶ್ ಅವರು ಬೆಳಿಗ್ಗೆ 11.50ಸುಮಾರಿಗೆ ಉಪ ತಹಶೀಲ್ದಾರ್ ಕಚೇರಿಗೆ ಹೋಗಿದ್ದರು. ಈ ವೇಳೆ ಕಾದು ಕುಳಿತಿದ್ದ ಸೋಮೇಶ್ ₹13 ಸಾವಿರ ಲಂಚದ ಹಣವನ್ನು ಪಡೆಯುವಾಗ ಇನ್‌ಸ್ಪೆಕ್ಟರ್ ಕುಮಾರ್ ನೇತೃತ್ವದಲ್ಲಿ ಹಣದ ಸಮೇತ ಸೋಮೇಶ್ ಅವರನ್ನು ಬಂಧಿಸಲಾಯಿತು. ಆರೋಪಿ ಬಂಧನದ ಬಳಿಕ ವಿವಿಧ ಪ್ರಕ್ರಿಯೆಗಳನ್ನು ಮುಗಿಸಿ ಕೋರ್ಟ್ ಎದುರು ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಪಿ.ವಿ. ಸ್ನೇಹ ಅವರ ಮಾರ್ಗದರ್ಶನ ಹಾಗೂ ಡಿವೈಎಸ್ಪಿ ರಾಜೇಶ್ ಕೋಟ್ಯಾನ್ ಮೇಲ್ವಿಚಾರಣೆಯಲ್ಲಿ ಇನ್‌ಸ್ಪೆಕ್ಟರ್ ವಿಜಯಕುಮಾರ್, ಸಿಬ್ಬಂದಿ ಎಂ.ಇ. ಶಿವಕುಮಾರ್ , ಶಿವಲಿಂಗೇಶ್, ರಮ್ಯ, ವಸಂತ, ಭಾಗ್ಯಮ್ಮ, ವೆಂಕಟೇಶ, ಶಂಕರ್, ಶಿವಕುಮಾರ್, ಮೆಹಬೂಬ್ ಹಾಗೂ ದೀಕ್ಷಿತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸುದ್ದಿ ಸಂತೆ ನ್ಯೂಸ್ ರಾಮನಗರ.....