ಬೆಂಗಳೂರು -
ಸುಟ್ಟ ಸ್ಥಿತಿಯಲ್ಲಿ ಕೆಎಸ್‌ಆರ್ಪಿ ಕಾನ್ಸ್ಟೇಬಲ್ ರೊಬ್ಬರ ಶವ ಪತ್ತೆಯಾಗಿದೆ. ಬೆಂಗಳೂರಿನ ಹೊಸಕೋಟೆಯ ಡಿ ಶೆಟ್ಟಹಳ್ಳಿ ಈ ಒಂದು ಘಟನೆ ನಡೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಚಿಂತಾಮಣಿ ಹೈವೇ ಸಮೀಪ ಡಿ. ಶೆಟ್ಟಹಳ್ಳಿ ಗೇಟ್ ಬಳಿ ಶವ ಪತ್ತೆಯಾಗಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ನವೀನ್ ಕುಮಾರ್ (35) ಮೃತ ಸಿಬ್ಬಂದಿ ಎಂದು ತಿಳಿದು ಬಂದಿದೆ. ಬೈಕ್ ನಲ್ಲಿ ನವೀನ್ ಡಿ. ಶೆಟ್ಟಹಳ್ಳಿಗೆ ಬಂದಿದ್ದು, ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿ ಕೊಂಡಿರುವ ಶಂಕೆ ವ್ಯಕ್ತವಾಗಿದೆ.ಬೆಳಿಗ್ಗೆ ಶವ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ನಂದಗುಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....