LIVE TV LocalCrimeNationalInternationalPoliticsEducationTechnologyEntertainmentSportsFeature
State News

16 ಜಿಲ್ಲೆಗಳ DDPI, BEO ವಿರುದ್ಧ ಆರಂಭಗೊಂಡ ತನಿಖೆ.....ಅಧಿಕಾರಿಗಳಲ್ಲಿ ಶುರುವಾಯಿತು ಢವಢವ.....

ಬೆಂಗಳೂರು -

ರಾಜ್ಯದ ಸರ್ಕಾರಿ ಶಾಲೆಯ ಒಂದರಿಂದ 10ನೇ ತರಗತಿ ಮಕ್ಕಳಿಗೆ 2026- 27 ನೇ ಸಾಲಿನಲ್ಲಿ ವಿತರಿಸಿದ ಶೂ ಮತ್ತು ಸಾಕ್ಸ್ ಗಳ ಗುಣಮಟ್ಟದ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಈ ಒಂದು ಬೆನ್ನಲ್ಲೇ ತನಿಖೆ ಆರಂಭಗೊಂಡಿದೆ

ಸರ್ಕಾರಿ ಶಾಲೆಗಳ ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಿದ ಶೂ ಮತ್ತು ಸಾಕ್ಸ್ ಗಳು ಒಂದು ವಾರದಲ್ಲಿಯೇ ಕಿತ್ತುಕೊಂಡು ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ದೂರುಗಳು ಸಲ್ಲಿಕೆಯಾಗಿದ್ದವು. ಭ್ರಷ್ಟಾಚಾರ ಆರೋಪ ಕೂಡ ಕೇಳಿ ಬಂದಿದ್ದ ಹಿನ್ನೆಲೆ ಯಲ್ಲಿ ಲೋಕಾಯುಕ್ತರು ವರದಿ ಕೇಳಿದ್ದರು ಸಧ್ಯ ತನಿಖೆ ತೀವ್ರಗೊಂಡಿದ್ದು ಅಧಿಕಾರಿಗಳಲ್ಲಿ ಢವ ಢವ ಶುರುವಾಗಿದೆ

ಉಪ ಲೋಕಾಯುಕ್ತರ ಸೂಚನೆ ಬೆನ್ನಲ್ಲೇ ಉಪ ಲೋಕಾಯುಕ್ತ-2ರ ವ್ಯಾಪ್ತಿಯ 16 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಉಪ ನಿರ್ದೇಶಕರು ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ದೂರು ದಾಖಲಿಸಿದೆ. ಆಯಾ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ಸಂಬಂಧಿತ ದಾಖಲೆಗಳ ಜೊತೆಗೆ ಎರಡು ವಾರ ದೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳಿಗೂ ಈ ಕುರಿತಂತೆ ಸೂಕ್ತ ನಿರ್ದೇಶನ ನೀಡಲು ಸೂಚಿಸ ಲಾಗಿದೆ. ಮಕ್ಕಳಿಗೆ ವಿತರಿಸಲಾದ ಶೂ ಮತ್ತು ಸಾಕ್ಸ್ ಗಳು ಕಳಪೆ ಗುಣಮಟ್ಟದಿಂದ ಕೂಡಿದ ಬಗ್ಗೆ ದೂರು ಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಶಿಕ್ಷಣ ಇಲಾಖೆ ಕೂಡ ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವ ದಲ್ಲಿ ತನಿಖೆಗೆ ಆದೇಶಿಸಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುಟ್ಟ ಸ್ಥಿತಿಯಲ್ಲಿ ಕಾನ್ಸ್ಟೇಬಲ್ ಶವ ಪತ್ತೆ.....ತನಿಖೆ ಕೈಗೊಂಡ ಪೊಲೀಸರು.....ಶಿಕ್ಷಣ ವಲಯದಲ್ಲಿ ಕಾವು ಹೆಚ್ಚಿಸಿದ 'ನೋಟಿಸ್'.....ಇಲಾಖೆಗೆ ತಂದಿಟ್ಟಿದೆ ದೊಡ್ಡ ಪ್ರಮಾಣದ ತಲೆನೋವು.....ದಸರಾ ವಿಭಾಗ ಮಟ್ಟಕ್ಕೆ ಆಯ್ಕೆಯಾದ ದೇವಸೂಗೂರು ಮಹಿಳಾ ಕಬಡ್ಡಿ ತಂಡ.....ದೇವಸೂಗೂರು ಗ್ರಾಮದ ಕ್ರೀಡಾ ಸ್ಪೂರ್ತಿ ಹೆಚ್ಚಿಸಿದ ಕ್ರೀಡಾ ಪ್ರತಿಭೆಗಳು.....ಶಿಕ್ಷಕರಿಗೆ ಮೂರು ದಿನಗಳ ಗಡುವು.....ದೊಡ್ಡ ಸಂಚಲನ ಸೃಷ್ಟಿಸಿದ ನೊಟೀಸ್‌ ವಿಚಾರ.....16 ಜಿಲ್ಲೆಗಳ DDPI, BEO ವಿರುದ್ಧ ಆರಂಭಗೊಂಡ ತನಿಖೆ.....ಅಧಿಕಾರಿಗಳಲ್ಲಿ ಶುರುವಾಯಿತು ಢವಢವ.....ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ.....ಬೆಳ್ಳಂ ಬೆಳಿಗ್ಗೆ ಸರ್ಕಾರಿ ಅಧಿಕಾರಿ ಮೇಲೆ CM ಗರಂ ಅಮಾನತು ಮಾಡಲು ಸೂಚನೆ.....ಸರ್ಕಾರಿ ಅಧಿಕಾರಿ ವಿರುದ್ಧ CM ಆಕ್ರೋಶ..... ಶೈಕ್ಷಣಿಕ ಪ್ರವಾಸದಲ್ಲಿ ನೋ ಸೆಲ್ಫಿ,ನೋ ರೀಲ್ಸ್‌ ಸಂಪೂರ್ಣವಾಗಿ ಬ್ಯಾನ್.....ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ..... 71 ಶಾಲೆಗಳ 182 ಜನ ಶಿಕ್ಷಕರಿಗೆ ನೊಟೀಸ್ .....ಶಾಸಕರ ನಡೆಗೆ ಅಸಮಾಧಾನ ಬೇಸರ.....ರಾಜ್ಯದ ಸಮಸ್ತ ಶಿಕ್ಷಕ ಬಂಧುಗಳಿಗೆ KSPSTA ಮಹತ್ವದ ಸಂದೇಶ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರಿಂದ ಮಹತ್ವದ Message.....ಈಗಲೇ ಈ ಕೆಲಸ ಮಾಡಿ.....