ಹಾವೇರಿ -
ಪದವೀಧರರ ಪಶ್ಚಿಮ ಮತಕ್ಷೇತ್ರ ಚುನಾವಣೆಯ ಹಿನ್ನೆಲೆಯಲ್ಲಿ ಅ. 23ರಂದು ಮತದಾನ ಜರುಗಲಿದೆ. ಜಿಲ್ಲೆಯ 8 ತಾಲ್ಲೂಕುಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸ ಲಾಗಿದೆ ಈ ಮತಗಟ್ಟೆ ಇರುವ ಶಾಲೆ-ಕಾಲೇಜುಗಳಿಗೆ ಅ. 22 ಹಾಗೂ ಅ. 23ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ
ಬ್ಯಾಡಗಿ ತಾಲ್ಲೂಕು ಕಚೇರಿ, ಕಾಗಿನೆಲೆ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಹಾನಗಲ್ ತಾಲೂಕು ಕಚೇರಿ, ತಿಳವಳ್ಳಿ ಗ್ರಾಮ ಪಂಚಾಯಿತಿ ಕಚೇರಿ, ಅಕ್ಕಿ ಆಲೂರು ಗ್ರಾಮ ಪಂಚಾಯಿತಿ ಕಚೇರಿ, ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ, ಹಾವೇರಿ ತಹಶೀಲ್ದಾರ್ ಕಚೇರಿ, ಹಾವೇರಿ ಎಸಿ ಕಚೇರಿ, ನಗರಸಭೆ ಕಚೇರಿ, ಗುತ್ತಲ ನಾಡಕಚೇರಿ, ಕರ್ಜಗಿ ಗ್ರಾಮ ಪಂಚಾಯಿತಿ ಕಚೇರಿ, ಹoಸಬಾವಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಹಿರೇಕೆರೂರು ತಾಲ್ಲೂಕು ಕಚೇರಿ, ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿ, ಹೊಸ ಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆ,
ಸವಣೂರು ತಾಲ್ಲೂಕು ಕಚೇರಿ, ಹತ್ತಿಮತ್ತೂರ ಗ್ರಾಮ ಪಂಚಾಯಿತಿ ಕಚೇರಿ, ಶಿಗ್ಗಾವಿ ತಾಲ್ಲೂಕು ಕಚೇರಿ, ದುಂಡಶಿ ಗ್ರಾಮ ಪಂಚಾಯಿತಿ ಕಚೇರಿ, ಬಂಕಾಪೂರ ಟಿಎಂಸಿ ಕಚೇರಿ, ರಾಣೆಬೆನ್ನೂರು ಹೊಸಮನಿ ಸಿದ್ದಪ್ಪ ಪಿಯು ಕಾಲೇಜ್, ರಾಣೆಬೆನ್ನೂರು ಶಂಕರ ಮಾದರಿ ಸ್ಕೂಲ್, ರಾಣೆಬೆನ್ನೂರು ತಾಲ್ಲೂಕು ಪಂಚಾಯಿತಿ ಕಚೇರಿ, ರಾಣೆಬೆನ್ನೂರು ತಹಶೀಲ್ದಾರ್ ಕಚೇರಿ, ರಾಣೆಬೆನ್ನೂರು ಮುನ್ಸಿಪಲ್ ಹೈಸ್ಕೂಲ್, ಮೆಡ್ಲೇರಿ ಗ್ರಾಮ ಪಂಚಾಯಿತಿ ಕಚೇರಿ, ಹಲಗೇರಿ ಮಾದರಿ ಸೆಂಟ್ರಲ್ ಸ್ಕೂಲ್, ಕೊಡಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಗಳಲ್ಲಿ ಮತದಾನ ಜರುಗಲಿದ್ದು ಹೀಗಾಗಿ ರಜೆ ಘೋಷಣೆ ಮಾಡಿ ಆದೇಶ ಮಾಡಿದ್ದಾರೆ ಜಿಲ್ಲಾಧಿಕಾರಿ.
ಸುದ್ದಿ ಸಂತೆ ನ್ಯೂಸ್ ಹಾವೇರಿ......