LIVE TV LocalCrimeNationalInternationalPoliticsEducationTechnologyEntertainmentSportsFeature
State News

ಕನ್ನಡ ಬಾರದ ಸರ್ಕಾರಿ ನೌಕರರಿಗೆ ಮನೆಪಾಠ - ಪರೀಕ್ಷೆಯಲ್ಲೂ ವಿನಾಯಿತಿ.....

ಬೆಂಗಳೂರು -

ಕರ್ನಾಟಕದಲ್ಲಿ ಕನ್ನಡ ಬಾರದ ಸರ್ಕಾರಿ ನೌಕರರು ಹಾಗೂ ಬ್ಯಾಂಕ್ ಸಿಬ್ಬಂದಿಗಾಗಿ ರಾಜ್ಯ ಸರ್ಕಾರ ಮತ್ತು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ವತಿ ಯಿಂದ 12 ತಿಂಗಳ 'ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ'ಯನ್ನು ಹಮ್ಮಿಕೊಳ್ಳಲಾಗಿದೆ.ಮನೆಯಲ್ಲೇ ಕುಳಿತು ಉಚಿತವಾಗಿ ಕನ್ನಡ ಕಲಿಯಲು ಇದೊಂದು ಸುವರ್ಣಾವಕಾಶವಾಗಿದ್ದು, ಆಸಕ್ತರು ಡಿಸೆಂಬರ್ 31ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.ರಾಜ್ಯದ ನಗರ ಸಭೆಗಳು, ಕೆಎಸ್‌ಆರ್‌ಟಿಸಿ, ವಿದ್ಯುತ್ ಇಲಾಖೆ, ವಿಶ್ವವಿದ್ಯಾಲಯಗಳು, ಶಾಲಾ-ಕಾಲೇಜುಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಕನ್ನಡ ಬಾರದ ನೌಕರರು ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಈ ತರಬೇತಿಗೆ ಯಾವುದೇ ಶುಲ್ಕವಿರುವುದಿಲ್ಲ. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರ ಬೇಕು ಮತ್ತು 18 ರಿಂದ 50 ವರ್ಷ ವಯೋಮಿತಿಯ ಒಳಗಿರಬೇಕು.

ಅರ್ಜಿ ಪಡೆಯಲು ಐದು ರೂಪಾಯಿಯ ಅಂಚೆ ಚೀಟಿ ಹಚ್ಚಿದ ಸ್ವ-ವಿಳಾಸದ ಲಕೋಟೆಯನ್ನು 'ಪ್ರಭಾರಿ ಅಧಿಕಾರಿ, ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷಾ ಸಂಸ್ಥಾನ, ಮಾನಸಗಂಗೋತ್ರಿ, ಮೈಸೂರು-570006' ವಿಳಾಸಕ್ಕೆ ಕಳುಹಿಸಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ 250 ರೂ. ಡಿಡಿ ಲಗತ್ತಿಸಿ ಡಿಸೆಂಬರ್ 31, 2026 ರೊಳಗೆ ತಲುಪಿಸುವಂತೆ ಸೂಚಿಸಲಾಗಿದೆ.

ಈ ಯೋಜನೆಯಡಿ ಒಟ್ಟು 20 ಪಾಠಗಳನ್ನು ಅಂಚೆ ಮೂಲಕ ಕಳುಹಿಸಿಕೊಡಲಾಗಲಿದ್ದು, 2027ರ ಜನವರಿಯಿಂದ ತರಬೇತಿ ಆರಂಭವಾಗಲಿದೆ. ತರಬೇತಿಯ ಕೊನೆಯಲ್ಲಿ ಸಂಪರ್ಕ ಶಿಬಿರ ಹಾಗೂ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ನೌಕರರಿಗೆ ಕರ್ನಾಟಕ ಲೋಕಸೇವಾ ಆಯೋಗದ ಕಡ್ಡಾಯ ಕನ್ನಡ ಪರೀಕ್ಷೆಯಿಂದ ವಿನಾಯಿತಿ ಸಿಗಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವರಿಗೆ ಮನವಿ ನೀಡಿದ ಸರ್ಕಾರಿ ನೌಕರರ ನಿಯೋಗ.....ಕನ್ನಡ ಬಾರದ ಸರ್ಕಾರಿ ನೌಕರರಿಗೆ ಮನೆಪಾಠ - ಪರೀಕ್ಷೆಯಲ್ಲೂ ವಿನಾಯಿತಿ.....ಶಿಕ್ಷಕರ ವೃತ್ತಿ ಗೌರವಕ್ಕೆ ಧಕ್ಕೆ ಕ್ಷಮೆಯಾಚನೆಗೆ ಆಗ್ರಹ.....ಸರ್ಕಾರಿ ಶಾಲಾ ಮಕ್ಕಳ ಪ್ರತಿಜ್ಞೆ..... ಶಿಕ್ಷಕರ ಎದುರು ಪ್ರತಿಜ್ಞೆ ಮಾಡಿದ ಸರ್ಕಾರಿ ಶಾಲಾ ಮಕ್ಕಳು.....ಶಿಕ್ಷಕಿ ಅನ್ನಪೂರ್ಣ ದೇವಿಗೆ ವಿದ್ಯಾರ್ಥಿಗಳಿಂದ ಕಣ್ಣೀರಿನ ವಿದಾಯ.....ಶಿಕ್ಷಕರ ವಲಯದಲ್ಲಿ ಭಾರಿ ಆಕ್ರೋಶ.....ಶಿಕ್ಷಕರಿಂದ ವಿರೋಧ.....ಬೈಕ್ ಡಿಕ್ಕಿ ಶಿಕ್ಷಕ ಶಿವಕುಮಾರ್ ಸಾವು.....IAS ಅಧಿಕಾರಿಗಳ ವರ್ಗಾವಣೆ..... ಆಡಳಿತ ಯಂತ್ರಕ್ಕೆ ಸರ್ಜರಿ.....ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ ನೀಡಿದ ಶಿಕ್ಷಣ ಇಲಾಖೆ......45 ಸಾವಿರ ಸರ್ಕಾರಿ ಶಾಲೆ ಮುಚ್ಚಲು ಸರ್ಕಾರ ಸಂಚು.....ಶಿಕ್ಷಣ ಸಂಘಟನೆಗಳು ಕಿಡಿ.....