ಬೆಂಗಳೂರು -
ಶಿಕ್ಷಕರ ವರ್ಗಾವಣೆ ನಿಯಮ ಬದಲಾಗಲಿ ಕೆ ಪಿಎಸ್ & ಕ್ರಿಟಿಕಲ್ ಶಾಲೆಗಳ ಬಲವರ್ಧನೆಯ ಹೆಸರಿನಲ್ಲಿ ಶಿಕ್ಷಕರನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ತಂದಿರುವ ಕಾಯ್ದೆಯೇ ಈ ವರ್ಗಾವಣೆ ತಿದ್ದುಪಡಿ ಕಾಯ್ದೆಯಾಗಿದೆ ಈ ಹಿಂದೆ ಜಾರಿ ಇದ್ದ ವರ್ಗಾವಣೆ ಕಾಯ್ದೆಯು ಉತ್ತಮವಾಗಿದ್ದು ಅದನ್ನು ಸುಧಾರಿಸುವ ನಿಟ್ಟಿನಲ್ಲಿ ನಡೆ ಇರಬೇಕೆ ಹೊರತು ಮತ್ತಷ್ಟು ಷರತ್ತು ಗಳನ್ನು ಹಾಕಿ ಶಿಕ್ಷಕರನ್ನು ಕಟ್ಟಿ ಹಾಕುವ ಪ್ರಯತ್ನ ವಾಗಬಾರದು.
ನಿಯಮ 8 ಕ್ಕೆ ಸಂಬಂಧಿಸಿದಂತೆ ಹುದ್ದೆಗಳ ಹೆಚ್ಚು ವರಿಗೆ ಸಂಬಂಧಿಸಿದಂತೆ ಈಗಾಗಲೇ ಕಳೆದ ವರ್ಷವೇ ಹೆಚ್ಚುವರಿ ಪ್ರಕ್ರಿಯೆ ನಡೆದಿರುವುದರಿಂದ ಈ ವರ್ಷ ಮತ್ತೆ ಹೆಚ್ಚುವರಿ ಪ್ರಕ್ರಿಯೆ ನಡೆಸಬಾರದು ವರ್ಗಾವಣೆ ಕಾಯ್ದೆಯಂತೆ ಮುಂದಿನ ವರ್ಷ ಹೆಚ್ಚು ವರಿ ವರ್ಗಾವಣೆ ನಡೆಸಲಿ ನಮ್ಮ ವಿರೋಧವಿಲ್ಲ ಆದರೆ ಹೆಚ್ಚುವರಿ ಪ್ರಕ್ರಿಯೆ ಈ ಸಾಲಿನಲ್ಲಿ ನಡೆಸ ಬಾರದು ನಿರಂತರ ಸೇರಿದಂತೆ ಅನೇಕ ಗೊಂದಲ ಗಳು ಇನ್ನೂ ಬಗೆಹರಿದಿಲ್ಲ
ನಿಯಮ 5ರ ತಿದ್ದುಪಡಿಗೆ ಸಂಬಂಧಿಸಿದಂತೆ ವರ್ಗಾ ವಣೆ ಪರಿಮಿತಿಯನ್ನು ಆಯಾ ವೃಂದದ ಭರ್ತಿ ಮಾಡಲಾದ ಹುದ್ದೆಗಳ ಸಂಖ್ಯೆಗೆ ಬದಲಾಗಿ ಎಲ್ಲ ವೃಂದಗಳ ಬಲ ಪರಿಗಣಿಸುವಂತಾಗಬೇಕು &
ನಿರ್ಣಾಯಕ ಹುದ್ದೆಗಳಲ್ಲಿನ ಕನಿಷ್ಠ ಸೇವಾವಧಿ 9ವರ್ಷ ಎಂಬ ಷರತ್ತು ತೆಗೆದುಹಾಕುವದು
ನಿಯಮ 10ಕ್ಕೆ ಸಂಬಂಧಿಸಿದಂತೆ: ಪದೇ ಪದೇ ಪರಿಶೀಲನೆ ನೆಪದಲ್ಲಿ ತೊಂದರೆ ಕೊಡುವ ಬದಲಾಗಿ ಹಾಲಿ ಇರುವ UDID ಕಾರ್ಡ್ ಗಳನ್ನೇ ದಾಖಲೆಯಾಗಿ ಪರಿಗಣಿಸತಕ್ಕದ್ದು ನೈಜತೆ& ವಾಸ್ತವಿಕತೆ ಪರಿಶೀಲನೆ ನಡೆಸಲಿ ನಿಯಮ 10 ರ 5ನೇ ಉಪನಿಯಮಕ್ಕೆ ಸಂಬಂಧಿಸಿದಂತೆ ನಿರ್ಣಾಯಕ ಖಾಲಿ ಹುದ್ದೆ ಅಂದರೆ KPS ,ADARSHA PMSHREE ,,more than 250 ಮಕ್ಕಳ ಶಾಲೆಯಾಗಿರುವುದರಿಂದ ಈ ಶಾಲೆಗಳು ನಗರ ಪ್ರದೇಶದಲ್ಲಿ ಹೆಚ್ಚು ಇರುವುದಿಲ್ಲ ಆದ್ದರಿಂದ ಇದನ್ನು ಬದಲಾಯಿಸತಕ್ಕದ್ದು ಇದು ಶಿಕ್ಷಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಕಾಯ್ದೆಯಾಗುತ್ತದೆ
5. ನಿಯಮ 13ಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಗೊಂಡಲ್ಲಿ& ಸ್ಥಳಾಂತರ ಗೊಳಿಸಿದ್ದಲ್ಲಿ ಯಾವುದೇ ವಿನಾಯತಿಗೆ ಅರ್ಹನಲ್ಲ ಎಂದು ತಿಳಿಸಿದ್ದು ಹುದ್ದೆ ಅಗತ್ಯವಿಲ್ಲವೆಂದು ನಿರ್ಧರಿಸುವ ವಿಧಾನದ ಬಗ್ಗೆ ತಿಳಿಸಿರುವುದಿಲ್ಲ
ಆದ್ದರಿಂದ ಈ ಮೇಲ್ಕಂಡವುಗಳು ಮೇಲ್ನೋಟಕ್ಕೆ ಕಂಡು ಬಂದ ಶಿಕ್ಷಕರಿಗೆ ತೊಂದರೆಯಾಗಬಲ್ಲ ನಿಯಮಗಳು ಆದ್ದರಿಂದ ಕೆಪಿಎಸ್ ಶಾಲೆಗಳ ಉಳಿವಿಗಾಗಿ ಶಿಕ್ಷಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಳಸಲು ಈ ತಿದ್ದುಪಡಿಗಳು ಬಳಕೆಯಾಗುವ ಸಾಧ್ಯತೆ ಇದೆ ಆದ್ದರಿಂದ ಈ ನಿಯಮಗಳನ್ನು ತಾವು ಖುದ್ದಾಗಿ ಪರಿಶೀಲಿಸಿ, ಒಂದು ತಜ್ಞ ಸಮಿತಿ ಮಾಡಿ,, ಎಲ್ಲ ಶಿಕ್ಷಕರಿಗೂ ಅನುಕೂಲವಾಗುವಂತಾ ನಿಯಮ ಗಳನ್ನು ಜಾರಿ ಮಾಡಿಸಲು ಕೋರಿದೆ ಆಯಾ ಜಿಲ್ಲಾ ಮಟ್ಟದಲ್ಲಿ ಕೌನ್ಸಿಲಿಂಗ್ ನಡೆದು ತಮಗೆ ಇಷ್ಟವಾದ ಖಾಲಿಹುದ್ದೆಗಳನ್ನು ಪಡೆದುಕೊಳ್ಳಲು ಅವಕಾಶ ನೀಡುವಂತಾಗಬೇಕು ಇದರೆಡೆಗೆ ನಿಮ್ಮ ಗಮನವಿರಲಿ ಶಿಕ್ಷಕಸ್ನೇಹಿ ನಿಯಮಗಳನ್ನು ತೆಗೆದುಹಾಕಿಸಲು ವಿನಂತಿ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....