LIVE TV LocalCrimeNationalInternationalPoliticsEducationTechnologyEntertainmentSportsFeature
State News

180 ಶಿಕ್ಷಕರಿಗೆ ನೋಟಿಸ್..... ಶಿಕ್ಷಣ ಇಲಾಖೆಯಲ್ಲಿ ಇದೆಂಥಾ ವ್ಯವಸ್ಥೆ. ...‌

ಬೆಂಗಳೂರು -

 

180 ಶಿಕ್ಷಕರಿಗೆ ಕಾರಣ ಕೇಳಿ ನೊಟೀಸ್ ನೀಡಿದ ಘಟನೆ ಚಿಕ್ಕಬಳ್ಳಾಪುರ ದಲ್ಲಿ ನಡೆದಿದೆ ಹೌದು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿದ ವೇಳೆ, ವಿದ್ಯಾರ್ಥಿಗಳಿಗೆ 'ಅ, ಆ, ಇ, ಈ' ಅಕ್ಷರಗಳು ಹಾಗೂ ಕನಿಷ್ಠ ಮೂಲಭೂತ ಗಣಿತದ ಲೆಕ್ಕಗಳೂ ಬಾರದಿರುವುದು ಕಂಡುಬಂದಿದ್ದು, ಅವರ ಶೈಕ್ಷಣಿಕ ಹಿನ್ನಡೆಯನ್ನು ಕಂಡು ಶಾಸಕರು ಬೇಸರ ವ್ಯಕ್ತಪಡಿಸಿ ದ್ದಾರೆ

ಹೀಗಾಗಿ 180 ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಮಕ್ಕಳ ಈ ಶೈಕ್ಷಣಿಕ ನಿರ್ಲಕ್ಷ್ಯ ಹಾಗೂ ಶಿಕ್ಷಕರ ಬೇಜವಾಬ್ದಾರಿಗೆ ತೀವ್ರ ಅಸಮಾ ಧಾನ ವ್ಯಕ್ತಪಡಿಸಿದ ಶಾಸಕ ಪ್ರದೀಪ್ ಈಶ್ವರ್, ಕೂಡಲೇ ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 1 ರಿಂದ 6ನೇ ತರಗತಿ ವರೆಗೆ ಈ ಮಕ್ಕಳಿಗೆ ಬೋಧನೆ ಮಾಡಿರುವ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಒಟ್ಟು 180 ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಮೂಲಕ ಕಾರಣ ಕೇಳಿ ನೋಟಿಸ್ ಜಾರಿ ಮಾಡಿಸಲಾಗಿದೆ. ಸೂಕ್ತ ಶಿಕ್ಷಣ ನೀಡದ ಶಿಕ್ಷಕರನ್ನು ಅಮಾನತುಗೊಳಿಸುವಂತೆಯೂ ಶಾಸಕರು ಎಚ್ಚರಿಕೆ ನೀಡಿದ್ದಾರೆ.2026-27ನೇ ಸಾಲಿನ ಶೈಕ್ಷಣಿಕ ಪ್ರಗತಿ ಪರಿಶೀಲನೆ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವ ನಿಟ್ಟಿನಲ್ಲಿ, ಪ್ರಸಕ್ತ 2026-27ನೇ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿ ರುವ ವಿದ್ಯಾರ್ಥಿಗಳ ಪ್ರಗತಿ ಮತ್ತು ಕಲಿಕಾ ಮಟ್ಟವನ್ನು ಗಂಭೀರವಾಗಿ ಪರಿಶೀಲಿಸಲಾಗಿದೆ.

ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದ ಇಲ್ಲಿಯವರೆಗೆ ಬೋಧನೆ ಮಾಡಿರುವ ಶಿಕ್ಷಕರ ಕಾರ್ಯವೈಖರಿಯ ಬಗ್ಗೆಯೂ ಮೌಲ್ಯಮಾಪನ ಕೈಗೊಳ್ಳಲಾಗಿದೆ. ಶಿಸ್ತು ಕ್ರಮಕ್ಕೆ ಸೂಚನೆ ಮತ್ತು ವರದಿ ಸಲ್ಲಿಕೆ ಹೌದು ಶಿಕ್ಷಕರಿಗೆ ನೀಡಿರುವ ನೋಟಿಸ್‌ಗೆ ಸಮರ್ಪಕವಾದ ಸಮಜಾ ಯಿಷಿಯನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ.

ಮಕ್ಕಳ ವಿದ್ಯಾಭ್ಯಾಸದಲ್ಲಿ ಲೋಪವೆಸಗಿರುವುದು ಸಾಬೀತಾದಲ್ಲಿ ನಿಯಮಾನುಸಾರ ಕಠಿಣ ಶಿಸ್ತು ಕ್ರಮ ಜರುಗಿಸಿ, ಆ ಕುರಿತಾದ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಈ ದಿಢೀರ್ ಬೆಳವಣಿ ಗೆಯು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಸುಧಾರಣೆಗೆ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುಟ್ಟ ಸ್ಥಿತಿಯಲ್ಲಿ ಕಾನ್ಸ್ಟೇಬಲ್ ಶವ ಪತ್ತೆ.....ತನಿಖೆ ಕೈಗೊಂಡ ಪೊಲೀಸರು.....ಶಿಕ್ಷಣ ವಲಯದಲ್ಲಿ ಕಾವು ಹೆಚ್ಚಿಸಿದ 'ನೋಟಿಸ್'.....ಇಲಾಖೆಗೆ ತಂದಿಟ್ಟಿದೆ ದೊಡ್ಡ ಪ್ರಮಾಣದ ತಲೆನೋವು.....ದಸರಾ ವಿಭಾಗ ಮಟ್ಟಕ್ಕೆ ಆಯ್ಕೆಯಾದ ದೇವಸೂಗೂರು ಮಹಿಳಾ ಕಬಡ್ಡಿ ತಂಡ.....ದೇವಸೂಗೂರು ಗ್ರಾಮದ ಕ್ರೀಡಾ ಸ್ಪೂರ್ತಿ ಹೆಚ್ಚಿಸಿದ ಕ್ರೀಡಾ ಪ್ರತಿಭೆಗಳು.....ಶಿಕ್ಷಕರಿಗೆ ಮೂರು ದಿನಗಳ ಗಡುವು.....ದೊಡ್ಡ ಸಂಚಲನ ಸೃಷ್ಟಿಸಿದ ನೊಟೀಸ್‌ ವಿಚಾರ.....16 ಜಿಲ್ಲೆಗಳ DDPI, BEO ವಿರುದ್ಧ ಆರಂಭಗೊಂಡ ತನಿಖೆ.....ಅಧಿಕಾರಿಗಳಲ್ಲಿ ಶುರುವಾಯಿತು ಢವಢವ.....ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ.....ಬೆಳ್ಳಂ ಬೆಳಿಗ್ಗೆ ಸರ್ಕಾರಿ ಅಧಿಕಾರಿ ಮೇಲೆ CM ಗರಂ ಅಮಾನತು ಮಾಡಲು ಸೂಚನೆ.....ಸರ್ಕಾರಿ ಅಧಿಕಾರಿ ವಿರುದ್ಧ CM ಆಕ್ರೋಶ..... ಶೈಕ್ಷಣಿಕ ಪ್ರವಾಸದಲ್ಲಿ ನೋ ಸೆಲ್ಫಿ,ನೋ ರೀಲ್ಸ್‌ ಸಂಪೂರ್ಣವಾಗಿ ಬ್ಯಾನ್.....ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ..... 71 ಶಾಲೆಗಳ 182 ಜನ ಶಿಕ್ಷಕರಿಗೆ ನೊಟೀಸ್ .....ಶಾಸಕರ ನಡೆಗೆ ಅಸಮಾಧಾನ ಬೇಸರ.....ರಾಜ್ಯದ ಸಮಸ್ತ ಶಿಕ್ಷಕ ಬಂಧುಗಳಿಗೆ KSPSTA ಮಹತ್ವದ ಸಂದೇಶ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರಿಂದ ಮಹತ್ವದ Message.....ಈಗಲೇ ಈ ಕೆಲಸ ಮಾಡಿ.....