LIVE TV LocalCrimeNationalInternationalPoliticsEducationTechnologyEntertainmentSportsFeature
State News

ಒಬ್ಬ ಶಿಕ್ಷಕ ಎರಡು ಕಡೆ ಸಂಬಳ.....ತನಿಖೆಗೆ ಆದೇಶ.....

ಯಾದಗಿರಿ -

ಹೌದು ಇಂತಹ ದೊಂದು ಪ್ರಕರಣ ಯಾದಗಿರಿ ಯಲ್ಲಿ ಬೆಳಕಿಗೆ ಬಂದಿದ್ದು 2025-26ನೇ ಶೈಕ್ಷಣಿಕ ಸಾಲಿನಲ್ಲಿ ಏಕಕಾಲದಲ್ಲಿ ಎರಡು ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೆಲಸ ಮಾಡಿ ಎರಡು ಶಾಲೆಗಳಿಂದ ವೇತನ ಪಡೆದಿ ದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅತಿಥಿ ಶಿಕ್ಷಕ ರೋರ್ವರ ವಿರುದ್ಧ ತನಿಖೆ ಆರಂಭವಾಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಜಿಲ್ಲೆಯ ಹುಣಸಗಿ ತಾಲ್ಲೂಕಿನ ಬಚಿಮಟ್ಟಿ ಮತ್ತು ವಜ್ಜಲ್ ಸರ್ಕಾರಿ ಪ್ರೌಢಶಾಲೆಗಳಲ್ಲಿ ರಮೇಶ್ ರಾಥೋಡ್ ಏಕಕಾಲದಲ್ಲಿ ಕಾರ್ಯನಿರ್ವಹಿಸು ತ್ತಿದ್ದರು ಎನ್ನಲಾಗಿದೆ.ಈ ಸಂಬಂಧ ಸುರಪುರ ಬ್ಲಾಕ್ ಶಿಕ್ಷಣಾಧಿಕಾರಿ ಹಾಗೂ ಯಾದಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತನಿಖಾ ತಂಡ ರಚಿಸಿದ್ದು ರಾಥೋಡ್ ಹಾಗೂ ಅವರಿಗೆ ಸಹಕರಿಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾ ಗಿದ್ದಾರೆ.

ದಾಖಲೆಗಳ ಪ್ರಕಾರ, ಪರಸ್ಪರ 12 ಕಿ.ಮೀ. ಅಂತರ ದಲ್ಲಿರುವ ಬಚಿಮಟ್ಟಿ ಮತ್ತು ವಜ್ಜಲ್ ಸರ್ಕಾರಿ ಪ್ರೌಢ ಶಾಲೆಗಳಿಂದ ರಾಥೋಡ್ ಅವರು ಕಕ್ಕೇರಾದ ಒಂದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯ ಮೂಲಕ ವೇತನ ಪಡೆದಿದ್ದಾರೆ. 2025ರ ಜುಲೈ ತಿಂಗಳ ಎರಡೂ ಶಾಲೆಗಳ ಹಾಜರಾತಿ ಪುಸ್ತಕ ಗಳಲ್ಲೂ ಅವರ ಹೆಸರು ದಾಖಲಾಗಿದೆ.

DDO ಕೋಡ್ 303460 ಹೊಂದಿರುವ ರಾಥೋಡ್ ಅವರು ಬಚಿಮಟ್ಟಿ ಶಾಲೆಯಲ್ಲಿ ಮೂರು ವರ್ಷಗಳ ಕಾಲ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಬಳಿಕ 2025-26ನೇ ಶೈಕ್ಷಣಿಕ ಸಾಲಿಗೆ DDO ಕೋಡ್ 303820 ಹೊಂದಿರುವ ವಜ್ಜಲ್ ಶಾಲೆಯಲ್ಲೂ ಅವರನ್ನು ನೇಮಕ ಮಾಡಲಾಗಿತ್ತು.

ವಜ್ಜಲ್ ಶಾಲೆಯಿಂದ ಅವರ ವೇತನವನ್ನು K-2 ಬಿಲ್ ಟೋಕನ್ ಸಂಖ್ಯೆ 2515442080 ಮೂಲಕ ಪಾವತಿ ಸಲಾಗಿದ್ದರೆ, ಬಚಿಮಟ್ಟಿ ಶಾಲೆಯಿಂದ ಟೋಕನ್ ಸಂಖ್ಯೆ 2516812864 ಮೂಲಕ ಹಣ ಜಮೆಯಾಗಿತ್ತು ಅತಿಥಿ ಶಿಕ್ಷಕರು ಒಂದು ಶಾಲೆಯಲ್ಲಿ ಪೂರ್ಣಾವಧಿ ಕಾರ್ಯನಿರ್ವಹಿಸಬೇಕಿರುವುದರಿಂದ ಈ ವ್ಯವಸ್ಥೆ ಹೇಗೆ ಮುಂದುವರಿಯಿತು ಹಾಗೂ ಈ ಬಗ್ಗೆ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮಾಹಿತಿ ಇತ್ತೇ ಎಂಬ ಪ್ರಶ್ನೆಗಳು ಎದ್ದಿವೆ. ಬಚಿಮಟ್ಟಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾನಗೌಡ ಬಿರಾದಾರ್ ಅವರು ಈ ಬಗ್ಗೆ ಪ್ರತಿಕ್ರಿಯಿ ಸಿದ್ದು, ರಾಥೋಡ್ ಮೂರು ವರ್ಷಗಳ ಕಾಲ ಶಾಲೆ ಯಲ್ಲಿ ಕೆಲಸ ಮಾಡಿದ್ದರು ಮತ್ತು ಅನಾರೋಗ್ಯದ ಕಾರಣ ಆಗಾಗ್ಗೆ ಗೈರುಹಾಜರಾಗುತ್ತಿದ್ದರು ಎಂದು ತಿಳಿಸಿದ್ದಾರೆ.

ಹಿಂದಿ ಶಿಕ್ಷಕರ ಕೊರತೆಯಿದ್ದ ಕಾರಣ ರಾಥೋಡ್ ಅವರನ್ನು ನೇಮಕ ಮಾಡಲಾಗಿತ್ತು ಹಾಗೂ ಅವರಿಗೆ ಎಂಟು ತಿಂಗಳ ವೇತನ ಪಾವತಿಸಲಾಗಿತ್ತು ಎಂದು ವಜ್ಜಲ್ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗುರುಬಸಪ್ಪ ಅಪ್ಪಗೋಳ ತಿಳಿಸಿದ್ದಾರೆ. ಅವರು ಮತ್ತೊಂದು ಶಾಲೆಯಲ್ಲೂ ಕೆಲಸ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದ ಬಳಿಕ ರಾಥೋಡ್ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಬಳಿಕ ರಾಥೋಡ್ ಅವರು ಲಿಖಿತ ಮುಚ್ಚಳಿಕೆ ಸಲ್ಲಿಸಿದ ನಂತರ ಮತ್ತೆ ವಜ್ಜಲ್ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಯಾದಗಿರಿ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣ ಸಚಿವರ ಮನೆಯ ಮುಂದೆ ಶಿಕ್ಷಕರು.....ಪ್ರಭಾರಿ ಮುಖ್ಯಶಿಕ್ಷಕ ಅಮಾನತು..... ಅಮಾನತು ಮಾಡಿ ಆದೇಶ.....ವರ್ಗಾವಣೆಗಾಗಿ ಬೆಂಗಳೂರಿಗೆ ಬಂದ ಶಿಕ್ಷಕರು.....ಶಿಕ್ಷಣ ಸಚಿವರನ್ನು ಭೇಟಿಯಾಗಲಿರುವ ಶಿಕ್ಷಕರ ನಿಯೋಗ.....ದಸರಾ ರಜೆ ಉಲ್ಲಂಘಿಸಿದ ಶಾಲೆಗಳ ಮೇಲೆ ಕ್ರಮಕ್ಕೆ ಆಗ್ರಹ.....ಅಕ್ಟೋಬರ್ 26 ಸಾರ್ವತ್ರಿಕ ರಜೆ ಘೋಷಣೆ..... ರಜೆ ಮಾರ್ಪಾಡು ಮಾಡಿದ ರಾಜ್ಯ ಸರ್ಕಾರ.....ದಸರಾ ರಜೆಯಲ್ಲೂ ಶಾಲೆಗಳ ಕಳ್ಳಾಟ... ಸಿಡಿದೆದ್ದ ಸಂಘಟನೆಗಳು.....ಮೂರು ದಿನಗಳ ಸರಣಿ ರಜೆ.....ಮೂರು ದಿನಗಳ ಲಾಂಗ್ ವೀಕೆಂಡ್ ರಜೆಗಳ ಕುರಿತು ಮಾಹಿತಿ.....ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್.....ಶಿಕ್ಷಣ ಇಲಾಖೆಯಲ್ಲೇ ಗೋಲ್ ಮಾಲ್.....ಗೊತ್ತಿದ್ದು ಸುಮ್ಮನಿದ್ರಾ ಅಧಿಕಾರಿಗಳು.....ನಕಲಿ ಅಂಕಪಟ್ಟಿ ನೀಡಿದ್ದ 52 ಸರ್ಕಾರಿ ನೌಕರರು ಅಮಾನತು..... ಸಾಮೂಹಿಕ ವಾಗಿ ಅಮಾನತು ಆದೇಶ.....