ಕಲಬುರಗಿ -
ಮೂರು ಸಾವಿರ ಹಣವನ್ನು ತಗೆದು ಕೊಳ್ಳುವಾಗ ಪೊಲೀಸ್ ಪೇದೆ ಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿ ಯಲ್ಲಿ ನಡೆದಿದೆ ನ್ಯಾಯಾಲಯವು ಪ್ರತಿ ತಿಂಗಳು ಠಾಣಾಧಿಕಾರಿ ಮುಂದೆ ಬೇಲ್ ನೀಡಿ ಹಾಜರಾಗುವಂತೆ ಸೂಚಿಸಿ ದ್ದನ್ನು ಸುಲೇಪೇಟ್ ಠಾಣೆಯ ರೈಟರ್ ಅನಿಲ ಕುಮಾರ ಹಾಜರಾತಿ ನಮೂದಿಸಿಕೊಳ್ಳಲು ಸತಾಯಿಸಿ ಹಣ ಪಡೆದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಿಂಚೋಳಿ ತಾಲೂಕಿನ ಗಡಿಕೇಶ್ವಾರದ ಚಂದ್ರಶೇಖರ ರಂಗನೂರ ಎನ್ನುವರು ದೂರು ನೀಡಿದ್ದರು ದೂರಿನ ಆಧಾರದ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ ನ್ಯಾಯಾಲಯವು ಪ್ರತಿ ತಿಂಗಳು ಹಾಜರಾಗುವಂತೆ ಸೂಚಿಸಿದ್ದರೂ ಪೊಲೀಸ್ ಪೇದೆ ಅನಿಲಕುಮಾರ ಠಾಣೆಗೆ ಬಂದು ಹಾಜರಾಗುವಂತೆ ಸತಾಯಿಸುತ್ತಿರುವುದು
ನೀನು ಬಾರದಿದ್ದರೆ ನಿನ್ನ ಬೇಲ್ ಕ್ಯಾನ್ಸಲ್ ಮಾಡಿ ಒಳಗೆ ಹಾಕುತ್ತೇನೆ ಎಂದು ಬೆದರಿಸಿ, ಮಧ್ಯವರ್ತಿ ಕೃಷ್ಣ ಎನ್ನುವರಿಗೆ ಲಂಚದ ಹಣ ಮೂರು ಸಾವಿರ ರೂ. ಫೋನ್ ಪೇ ಮುಖಾಂತರ ವರ್ಗಾವಣೆ ಮಾಡಿಸಿ ಕೊಂಡಿದ್ದರು.ಇದನ್ನು ಆಧರಿಸಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಇನ್ಸ್ ಪೆಕ್ಟರ್ ರವಿಕುಮಾರ ದಾಳಿ ನಡೆಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕಲಬುರಗಿ.....