ಬಾಲಘಾಟ್ –
ಮಕ್ಕಳಿಗೆ ಕಲಿಸುವ ಶಿಕ್ಷಕರಿಗೆ ಗಣಿತದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕಿ ಯೊಬ್ಬರನ್ನು ಕರ್ತವ್ಯ ದಿಂದ ತಗೆದುಹಾಕಿರುವ ಘಟನೆ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರಲ್ಲಿ ನಡೆದಿದ್ದು ಇದು ಶಾಲೆಯ ಮುಖ್ಯೋ ಪಾಧ್ಯಾಯರ ಸ್ಥಿತಿಯಾಗಿದೆ.ಜಿಲ್ಲಾಧಿಕಾರಿ ಇಲ್ಲಿಗೆ ದಿಢೀರ್ ಪರಿಶೀಲನೆ ನಡೆಸಿದಾಗ 441ಅನ್ನು 4ರಿಂದ ಭಾಗಿಸಲು ಮುಖ್ಯಶಿಕ್ಷಕರಿಗೆ ಆಗಲಿಲ್ಲ ಅದರ ನಂತರ ಅಸಮಾಧಾನ ಗೊಂಡು ಇಲಾಖೆಯ ಅಧಿಕಾರಿ ಗಳಿಗೆ ವರದಿ ತೆಗೆದು ಹಾಕಲು ಸೂಚನೆ ನೀಡಲಾಯಿತು
ಮಧ್ಯಪ್ರದೇಶ ಬಾಲಘಾಟ್ ಜಿಲ್ಲೆಯ ಪ್ರಾಥಮಿಕ ಶಾಲೆ ಯಲ್ಲಿ ಈ ಒಂದು ಚಿತ್ರಣ ಕಂಡು ಬಂದಿತು.ಜಿಲ್ಲಾಧಿಕಾರಿ ಡಾ.ಗಿರೀಶ್ ಕುಮಾರ್ ಮಿಶ್ರಾ ಅವರು ಪರಿಶೀಲನೆಗೆ ಶಾಲೆಗೆ ತೆರಳಿದ್ದರು.ಶಾಲೆಯಲ್ಲಿ ಮಕ್ಕಳು ಏನು ಕಲಿಯು ತ್ತಿದ್ದಾರೆ ಮತ್ತು ಶಿಕ್ಷಕರು ಹೇಗೆ ಕಲಿಸುತ್ತಿದ್ದಾರೆ ಎಂದು ತಿಳಿಯಲು ತರಗತಿಯಲ್ಲಿ ಕುಳಿತುಕೊಂಡರು.ಮೊದಲಿಗೆ ಕಪ್ಪು ಹಲಗೆಯ ಮೆಲೆಯೇ 441 ಸಂಖ್ಯೆಯನ್ನು 4 ರಿಂದ ಭಾಗಿಸಲು ಮಕ್ಕಳನ್ನು ಕೇಳಿದರು.ಈ ಗಣಿತ ಸಮಸ್ಯೆ ಯನ್ನು ಪರಿಹರಿಸಲು ವಿದ್ಯಾರ್ಥಿಗೆ ಅವಕಾಶ ನೀಡಲಾ ಯಿತು.ಅವರು ಸಂಖ್ಯೆಗಳನ್ನು ಮಾತ್ರ ಬರೆಯಬಲ್ಲ ರಾಗಿ ದ್ದರು.ಆದರೆ ಅವರಿಂದ ಭಾಗಿಸಲಾಗಲಿಲ್ಲ ಈ ವೇಳೆ ಶಾಲೆಯ ಶಿಕ್ಷಕಿ ಸೋನಾ ಧುರ್ವೆ ಕೂಡ ಉಪಸ್ಥಿತರಿದ್ದರು. ಲಾಕ್‌ಡೌನ್‌ನಿಂದಾಗಿ ಅನೇಕ ಮಕ್ಕಳು ಗುಣಾಕಾರವನ್ನು ಮರೆತಿದ್ದಾರೆ ಅವರು ಇನ್ನೂ ಅವರಿಗೆ ಕಲಿಸುತ್ತಿದ್ದಾರೆ ಎಂದು ಶಿಕ್ಷಕಿ ಹೇಳಿದರು ಅಲ್ಲದೇ 441 ಸಂಖ್ಯೆಯನ್ನು 4 ರಿಂದ ಭಾಗಿಸಲು ಸಾಧ್ಯವಾಗಲಿಲ್ಲ ಶಿಕ್ಷಕಿಗೆ.

ಆಗ ಮೇಡಂ, ದಯವಿಟ್ಟು ಈ ಗಣಿತದ ಸಮಸ್ಯೆಯನ್ನು ಪರಿಹರಿಸಿ ಮಕ್ಕಳಿಗೆ ತಿಳಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು ಬಹಳ ಉತ್ಸಾಹದಿಂದ ಮೇಡಂ ಜೋರು ಧ್ವನಿಯಲ್ಲಿ ಓದತೊಡಗಿದರು.441 ಸಂಖ್ಯೆಯನ್ನು 4 ರಿಂದ ಭಾಗಿಸಿದ ನಂತರ ಮೇಡಂ ಅವರ ಉತ್ತರ 1.2 ಆಗಿತ್ತು. ಇದನ್ನು ನೋಡಿದ ಜಿಲ್ಲಾಧಿಕಾರಿ ತಲೆ ಅಲ್ಲಾಡಿಸಿದರು. ಅವರು ಮತ್ತೆ ಪ್ರಶ್ನೆಯನ್ನು ಪರಿಹರಿಸಲು ಕೇಳಿದಾಗ ಅವರ ಉತ್ತರ 11.2 ಕ್ಕೆ ಬಂತು.

ಸಾಮಾನ್ಯ ಗಣಿತಶಾಸ್ತ್ರದ ಮುಖ್ಯೋಪಾಧ್ಯಾಯರಾದ ಸೋನಾ ಧುರ್ವೆ ಅವರಿಂದ ‘ಭಾಗ’ ಆಗದಿದ್ದಕ್ಕಾಗಿ ಜಿಲ್ಲಾ ಧಿಕಾರಿ ಕೋಪಗೊಂಡರು.ಅವರು ಹೇಳಿದರು ಮೇಡಂ, ಸಾಮಾನ್ಯ ಗಣಿತ ನಿಮ್ಮಿಂದ ಭಾಗಿಸಲು ಆಗುತ್ತಿಲ್ಲ.ಹೀಗಿ ರುವಾಗ ಅದನ್ನು ಮಕ್ಕಳು ಹೇಗೆ ಮಾಡುತ್ತಾರೆ? ಲಾಕ್ ಡೌನ್‌ನಿಂದ ಮಕ್ಕಳು ಭಾಗವಹಿಸಲು ಮರೆತಿದ್ದಾರೆ ಎಂದು ಪದೇ ಪದೇ ಹೇಳುತ್ತೀರಿ.ನಿಮ್ಮಿಂದಾಗದು ಮಕ್ಕಳು ಹೇಗೆ ಮಾಡುತ್ತಾರೆ ಎಂದು ತರಾಟೆ ತೆಗೆದುಕೊಂಡರು.ಕೂಡಲೇ ಮೇಡಂ ಅವರ ವೇತನ ಹೆಚ್ಚಳವನ್ನು ನಿಲ್ಲಿಸುವಂತೆ ಜಿಲ್ಲಾ ಧಿಕಾರಿ ಸೂಚನೆ ನೀಡಿದರು.ಮುಖ್ಯೋಪಾಧ್ಯಾಯರ ಹುದ್ದೆಯಿಂದಲೂ ಅವರನ್ನು ತೆಗೆದುಹಾಕಲಾಯಿತು.
ನಗರದಿಂದ ಹಳ್ಳಿಗೆ ಎಲ್ಲರೂ ಓದಬೇಕು ಎಲ್ಲರೂ ಬೆಳೆ ಯಬೇಕು ಎಂಬುದು ಸರ್ಕಾರದ ಘೋಷವಾಕ್ಯ. ಸರ್ವ ಶಿಕ್ಷಾ ಅಭಿಯಾನ ಸೇರಿದಂತೆ ಶಿಕ್ಷಕರ ದಕ್ಷತೆಗಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.ಗಣಿತದ ಸಮಸ್ಯೆ ಗಳನ್ನು ಸ್ವತಃ ಪರಿಹರಿಸಲು ಸಾಧ್ಯವಾಗದ ಅಂತಹ ಶಿಕ್ಷಕರಿಗೆ ವಾರ್ಷಿಕವಾಗಿ ಲಕ್ಷ ರೂ.ವೇತನವಿದೆ.ಇವರಿಂದ ಮಕ್ಕಳ ಭವಿಷ್ಯ ಎಷ್ಟು ಉಜ್ವಲವಾಗಿದೆ ಎನ್ನುವುದನ್ನು ಬಾಲಘಾಟ್‌ದಂತಹ ಶಾಲೆಗಳ ಚಿತ್ರಣ ಹೇಳುತ್ತಿದೆ. ಮಕ್ಕಳು ಎಷ್ಟರ ಮಟ್ಟಿಗೆ ಪ್ರಗತಿ ಹೊಂದುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ.