This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಶೂ ಬದಲಿದೆ ಸರ್ಕಾರಿ ಶಾಲೆಗಳಲ್ಲಿ ಸಿಗಲಿಗೆ ಈ ಭಾಗ್ಯ – ಸರ್ಕಾರದ ಧ್ವಂದ ನಿಲುವಿನ ಆದೇಶದಿಂದ ಬೇಸರಗೊಂಡಿದ್ದಾರೆ ಪೋಷಕರು,ವಿದ್ಯಾರ್ಥಿಗಳು…..

WhatsApp Group Join Now
Telegram Group Join Now

ಬೆಂಗಳೂರು

ಶೂ ಬದಲಿದೆ ಸರ್ಕಾರಿ ಶಾಲೆಗಳಲ್ಲಿ ಸಿಗಲಿಗೆ ಈ ಭಾಗ್ಯ – ಸರ್ಕಾರದ ಧ್ವಂದ ನಿಲುವಿನ ಆದೇಶ ದಿಂದ ಬೇಸರಗೊಂಡಿದ್ದಾರೆ ಪೋಷಕರು, ವಿದ್ಯಾರ್ಥಿಗಳು ಹೌದು ಈವರೆಗೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿದ್ದ ಶೂ ಬದಲಿಗೆ ಚಪ್ಪಲಿಯನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.ರಾಜ್ಯದ ಶಾಲೆಗಳಿಗೆ ಶೂ, ಸಾಕ್ಸ್ ಬದಲಾಗಿ ಚಪ್ಪಲಿ ಭಾಗ್ಯವನ್ನು ಕಲ್ಪಿಸಿ ಆದೇಶ ವನ್ನು ಮಾಡಲಾಗಿದೆ.

ಸರ್ಕಾರಗಳು ಬದಲಾದಂತೆ ಸರ್ಕಾರದ ಯೋಜ ನೆಗಳು ಬದಲಾಗುತ್ತವೆ ಎಂಬೊದಕ್ಕೆ ಈ ಒಂದು ಯೋಜನೆಯೇ ಸಾಕ್ಷಿಯಾಗಿದ್ದು ಹೀಗಾಗಿ ಸರ್ಕಾರದ ಯೋಜನೆಗಳು ನಾನಾ ಸ್ವರೂಪ ಪಡೆದುಕೊಳ್ಳುತ್ತಿದ್ದು ಸಧ್ಯ ಮಕ್ಕಳಿಗೆ ಶೂ ಬದಲು ಚಪ್ಪಲಿ ನೀಡಲು ಆದೇಶವನ್ನು ಮಾಡಲಾಗಿದೆ. ಸರ್ಕಾರದ ದ್ವಂದ್ವ ನಿಲುವಿನ ಆದೇಶದಿಂದ ಮಕ್ಕಳು ಹಾಗೂ ಪಾಲಕರು ಬೇಸರಗೊಂಡಿ ದ್ದಾರೆ.

ಶಾಲಾ ಮಕ್ಕಳ ಶೂ, ಸಾಕ್ಸ್ ಖರೀದಿಗಾಗಿ ರಾಜ್ಯ ಸರ್ಕಾರ ಸಾಕಷ್ಟು ಅನುದಾನವನ್ನು ನೀಡುತ್ತಿದ್ದು ಆದರೆ ಕೂಡಾ ಈ ಬಾರಿ ಶಾಲೆಗಳಿಗೆ ಶೂ, ಸಾಕ್ಸ್ ಬದಲಾಗಿ ಚಪ್ಪಲಿ ಭಾಗ್ಯ ಕಲ್ಪಿಸಲಾಗಿದೆ.ಇನ್ನೂ ಒಂದೇ ಮನೆಯಿಂದ ಬೇರೆ ಬೇರೆ ಶಾಲೆಗೆ ಹೋಗುವ ಮಕ್ಕಳಲ್ಲಿ, ಶೂ, ಚಪ್ಪಲಿ ವಿಷಯ ವಾಗಿ ಗಲಾಟೆಗಳು ನಡೆದಿರುವ ಕುರಿತಂತೆ ವರದಿ ಯಾಗಿವೆ ಹೀಗಾಗಿ ಸರ್ಕಾರ ಶೂ, ಸಾಕ್ಸ್ ವಿಷಯ ದಲ್ಲಿ ಮಕ್ಕಳಲ್ಲಿ ದ್ವಂದ್ವ ನೀತಿ ಮೂಡಿಸಿದೆ.

ಶಿಕ್ಷಣ ಇಲಾಖೆ ಆದೇಶದಿಂದ ಮಕ್ಕಳಿಗೆ ಒಂದು‌ ಕಣ್ಣಿಗೆ ಸುಣ್ಣ,ಒಂದು‌ ಕಣ್ಣಿಗೆ ಬಣ್ಣ ಹಚ್ಚುತ್ತಿದೆ ಎಂಬ ಆರೋಪ ಪಾಲಕದ್ದಾಗಿದೆ.ರಾಜ್ಯದಲ್ಲಿ ಆಯಾ ಭಾಗದ ಪರಿಸರಕ್ಕೆ ಹೊಂದಿಕೆ ಆಗುವಂ ತಹ ಶೂ ಅಥವಾ ಚಪ್ಪಲಿ ಖರೀದಿಸಬಹುದು ಎಂದು ಆದೇಶ ಹೊರಡಿಸಿದೆ.ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಹೆಚ್ಚಾಗುತ್ತಿದ್ದು, ಅಲ್ಲಿ ಶೂ ಒಳ್ಳೆಯದು. ಇನ್ನು ಉತ್ತರ ಕರ್ನಾಟಕ ಭಾಗ ದಲ್ಲಿ ಉಷ್ಣಾಂಶ ಹೆಚ್ಚಿರುವ ಹಿನ್ನಲೆ, ಬೆವರಿನಿಂದ ಶೂ ವಾಸನೆ ಬರುತ್ತವೆ. ಹೀಗಾಗಿ ಚಪ್ಪಲಿ ಖರೀದಿ ಸಬಹುದು ಎಂದು ಆದೇಶಿಸಲಾಗಿದೆ.

ಹೀಗಾಗಿ ಶಾಲೆಗಳಲ್ಲಿ ಶೂ ಭಾಗ್ಯ ಬದಲು ಚಪ್ಪಲಿ ಭಾಗ್ಯ ಕಲ್ಪಿಸಲಾಗಿದೆ.ಉತ್ತಮ ಗುಣ ಮಟ್ಟದ ಶೂ ಅಥವಾ ಪಾದರಕ್ಷೆಗಳನ್ನು ಖರೀದಿಸಿ, ವಿತರಣೆ ಮಾಡುವ ಜವಾಬ್ದಾರಿ ಆಯಾ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗೆ ವಹಿಸಲಾಗಿದೆ. ಆಯಾ ಭಾಗದಲ್ಲಿ ವಾತಾವ ರಣಕ್ಕೆ ಹೊಂದಿಕೊಳ್ಳುವ ಶೂಕ್ಕಿಂತ ಚಪ್ಪಲಿ ಒಳ್ಳೆ ಯದೆಂದು ಖರೀದಿಸಲಾಗಿದೆಯಂತೆ.

ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್ ನೀಡ ಲಾಗುತ್ತೆ. ಶೂ ಅಥವಾ ಚಪ್ಪಲಿ ಖರೀದಿ ನಿರ್ಧಾರ ಎಸ್.ಡಿ.ಎಂ.ಸಿ ತೆಗೆದುಕೊಳ್ಳುತ್ತೆ. ಈ ಹಣ ರಾಜ್ಯ ಕಚೇರಿಯಿಂದ ಬಿಇಒ ಕಚೇರಿಗೆ ನೇರವಾಗಿ ಬಿಡು ಗಡೆ ಆಗುತ್ತೆ ಎಂದು ಸಾರ್ವಜನಿಕ ಶಿಕ್ಷಣ ಇಲಾ ಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಒಟ್ಟಾರೆ ಒಂದು ಕಡೆಗೆ ಶೂ ಭಾಗ್ಯ ಮತ್ತೊಂದು ಕಡೆಗೆ ಚಪ್ಪಲಿ ಭಾಗ್ಯ ಗೊಂದಲದಲ್ಲಿ ಪೋಷಕರು ವಿದ್ಯಾರ್ಥಿಗಳಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk