ಹುಬ್ಬಳ್ಳಿ –
ಜೆಡಿಎಸ್ ಪಕ್ಷವನ್ನು ತೊರೆದು ನಾಳೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತೆನೆ ಎಂದು ರಾಜಣ್ಣ ಕೊರವಿ ಹೇಳಿದರು. ಹುಬ್ಬಳ್ಳಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷದ ಕಾರ್ಯಕರ್ತರ ನೋವನ್ನು ಆಲಿಸುವಲ್ಲಿ ಜೆಡಿಎಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ ಹೀಗಾಗಿ ಬಿಜೆಪಿ ಪಕ್ಷಕ್ಕೆ ಸೇರುತ್ತಿದ್ದೇನೆ ಎಂದರು.

ರಾಜಣ್ಣ ಕೊರವಿ ಜೆಡಿಎಸ್ ನಿಂದ ಕಳೆದ ಎರಡು ಬಾರಿ ಹು-ಧಾ ಮಹಾನಗರ ಪಾಲಿಕೆಗೆ ಆಯ್ಕೆಯಾಗಿ ದ್ದರು.ಅಲ್ಲದೇ ಜಗದೀಶ ಶೆಟ್ಟರ್ ವಿರುದ್ಧ ಸೆಂಟ್ರಲ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದಿರು ರಾಜಣ್ಣ ಕೊರವಿ ಈಗ ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದಾರೆ.

ಜೆಡಿಎಸ್ ಪಕ್ಷದ ನಾಯಕರು ಸರಿಯಾಗಿ ಸ್ಪಂದಿಸದ ಹಿನ್ನಲೆಯಲ್ಲಿ ಮತ್ತು ನೋವಿಗೆ ಸ್ಪಂದಿಸದ ಹಿನ್ನೆಲೆ ಯಲ್ಲಿ ನಾಳೆ ನಾನು ನನ್ನ ಕಾರ್ಯಕರ್ತ ರೊಂದಿಗೆ ಬಿಜೆಪಿ ಪಕ್ಷ ಸೇರಲಿದ್ದೇನೆ ಎಂದು ರಾಜಣ್ಣ ಕೊರವಿ ಹೇಳಿದರು ಇದೇ ವೇಳೆ ಜೆಡಿಎಸ್ ಪಕ್ಷದ ನಡೆ ಬಗ್ಗೆ ನೋವನ್ನು ತೋಡಿಕೊಂಡರು ರಾಜಣ್ಣ ಕೊರವಿ.
ಜೆಡಿಎಸ್ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ 30 ವರ್ಷಗಳಿಂದ ಶ್ರಮಿಸಿದ್ದೇನೆ ಆದರೆ ಈವರೆಗೂ ನನಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಜವಾಬ್ದಾರಿ, ಸ್ಥಾನಮಾನ ನೀಡಿಲ್ಲ ಜೆಡಿಎಸ್ ಪಕ್ಷದಲ್ಲಿ ಉಸಿರು ಗಟ್ಟುವ ವಾತಾವರಣ ನಿರ್ಮಾಣವಾಗಿದೆ ಜೆಡಿಎಸ್ ಪಕ್ಷದಿಂದ ನನಗೆ ಅನ್ಯಾಯವಾಗಿದೆ ಪಕ್ಷದ ನಾಯಕರಿಂದ ನನಗೆ ಸರಿಯಾದ ಸ್ಪಂದನೆ ಸಿಗಲಿಲ್ಲ ಎನ್ನುತ್ತಾ ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದರು ರಾಜಣ್ಣ ಕೊರವಿ.