This is the title of the web page
This is the title of the web page

Live Stream

June 2023
T F S S M T W
1234567
891011121314
15161718192021
22232425262728
2930  

| Latest Version 8.0.1 |

Sports News

ಮುಂಬೈಗೆ ಕ್ರಿಕೆಟಿಗೆ ರಿಷಭ್ ಪಂತ್ ಶಿಪ್ಟ್ – ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಕ್ರಿಕೆಟಿಗನನ್ನು ಅಂಬಾನಿ ಆಸ್ಪತ್ರೆಗೆ ಶಿಪ್ಟ್


ಡೆಹ್ರಾಡೂನ್

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಯುವ ಉತ್ಸಾಹಿ ಕ್ರಿಕೆಟಿಗೆ ರಿಷಭ್ ಪಂತ್ ಗುಣ ಮುಖರಾಗುತ್ತಿದ್ದು ಇದರ ನಡುವೆ ಮತ್ತೊಂದು ಪ್ರಮುಖ ಆಪರೇಶನ್ ಹಿನ್ನಲೆಯಲ್ಲಿ ಡೆಹ್ರಾ ಡೂನ್ ನಿಂದ ಮುಂಬೈ ಗೆ ಶಿಪ್ಟ್ ಮಾಡಲಾಗಿದೆ. ದೆಹಲಿಯಲ್ಲಿನ ಭೀಕರ ಅಪಘಾತದಲ್ಲಿ ಬದುಕು ಳಿದಿರುವ ಕ್ರಿಕೆಟಿಗ ರಿಷಭ್‌ ಪಂತ್‌ರನ್ನು ಡೆಹ್ರಾ ಡೂನಿನ ಮ್ಯಾಕ್ಸ್‌ ಆಸ್ಪತ್ರೆಯಿಂದ ಏರ್‌ ಆಯಂ ಬುಲೆನ್ಸ್‌ ಮೂಲಕ ಮುಂಬೈಗೆ ಸ್ಥಳಾಂತರಿಸ ಲಾಗಿದೆ.

ಕೋಕಿಲಾಬೆನ್‌ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಪ್ರಸಿದ್ಧ ಮೂಳೆ ಶಾಸ್ತ್ರಜ್ಞ ಡಾ.ದಿನ್ಶಾ ಪರ್ದಿವಾಲ ಅಸ್ಥಿರಜ್ಜುವಿನ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಿದ್ದಾರೆ.ರಿಷಭ್‌ ಪಂತ್‌ ಬಿಸಿಸಿಐನ ಕೇಂದ್ರೀಯ ಗುತ್ತಿಗೆಗೆ ಸೇರಿರು ವುದರಿಂದ ಅವರ ಚಿಕಿತ್ಸೆಯ ಪೂರ್ಣಜವಾಬ್ದಾರಿ ಸಧ್ಯ ಬಿಸಿಸಿಐಗೆ ಸೇರಿದ್ದು ಹೀಗಾಗಿ ವೈಧ್ಯ ದಿನ್ಶಾ ಕ್ರೀಡಾಪಟುಗಳಿಗೆ ಸಂಬಂಧಿಸಿದ ಚಿಕಿತ್ಸೆಯಲ್ಲಿ ವಿಶೇಷ ತಜ್ಞತೆ ಹೊಂದಿದ್ದಾರೆ.

ಅದಾದ ಮೇಲೆ ರಿಷಭ್‌ ಪಂತ್‌ರನ್ನು ಬೆಂಗಳೂ ರಿನ ನ್ಯಾಶನಲ್‌ ಕ್ರಿಕೆಟ್‌ ಅಕಾಡೆಮಿಗೆ ಕರೆ ತರ ಲಾಗುತ್ತದೆ.ಅಲ್ಲಿ ಅವರಿಗೆ ತರಬೇತಿ ಇನ್ನಿತರ ಸಂಗತಿಗಳನ್ನು ಗಮನಿಸಲಾಗುತ್ತದೆ.ಸದ್ಯ ಅವರ ತಲೆ,ಬೆನ್ನಿಗೆ ಆಗಿರುವ ಗಾಯ ತೀರಾ ಗಂಭೀರ ವಲ್ಲ ಮಂಡಿ ಅಸ್ಥಿರಜ್ಜು ಹಾಗೂ ಹಿಮ್ಮಡಿಗೆ ಆಗಿರುವ ಗಾಯ ಗಂಭೀರವಾಗಿವೆ ಸದ್ಯ ಊತ ವಿರುವುದರಿಂದ ಮಂಡಿಯಲ್ಲಿ ಮೂಳೆಗಳನ್ನು ಕೂಡಿಸಿರುವ ಸ್ನಾಯುವಿನ ಹರಿತದ ತೀವ್ರತೆ ಯೇನು ಎಂದು ಖಚಿತವಾಗಿ ಗೊತ್ತಾಗಿಲ್ಲ.

ಇದರಿಂದ ಅವರು ಅನಿರ್ದಿಷ್ಟಾವಧಿವರೆಗೆ ಕ್ರಿಕೆಟ್‌ನಿಂದ ದೂರವಿರಬೇಕಾಗುತ್ತದೆ ಡಿಸೆಂಬರ್ 30ರಂದು ಬೆಳಗ್ಗೆ ಐದು ಗಂಟೆಗೆ ರಿಷಭ್‌ ಪಂತ್‌ ದೆಹಲಿಯಿಂದ ಉತ್ತರಾಖಂಡದಲ್ಲಿರುವ ರೂರ್ಕಿಗೆ ತಾವೇ ಮರ್ಸಿಡೆಸ್‌ ಕಾರು ಓಡಿಸಿ ಕೊಂಡು ಹೋಗುತ್ತಿದ್ದರು ತಾಯಿಗೆ ಹೊಸ ವರ್ಷದ ಅಚ್ಚರಿಯನ್ನು ನೀಡುವುದು ಅವರ ಉದ್ದೇಶವಾಗಿತ್ತು

ಆದರೆ ರಾಷ್ಟ್ರೀಯ ಹೆದ್ದಾರಿ 58 ರಲ್ಲಿ ಚಲಿಸುತ್ತಿ ದ್ದಾಗ ಅವರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಉರಿದಿದ್ದು ರಿಷಭ್‌ ಕಿಟಕಿಯನ್ನು ಒಡೆದು ಪಾರಾಗಿದ್ದು ಅದೇ ವೇಳೆ ಬಸ್‌ ಚಾಲಕರೊಬ್ಬರು ಅವರನ್ನು ಹೊರಕ್ಕೆ ಳೆದುಕೊಂಡರು ಅವರು ಬದುಕಿ ಉಳಿದಿದ್ದೇ ಒಂದು ಪವಾಡವಾಗಿದ್ದು ಸಧ್ಯ ಗುಣಮುಖರಾ ಗುತ್ತಿದ್ದಾರೆ.

ಸುದ್ದಿ ಸಂತೆ ಡೆಹ್ರಾಡೂನ್…..


Google News Join The Telegram Join The WhatsApp

 

 

Suddi Sante Desk

Leave a Reply