ಕಾಡ್ಲೂರು (ಶಕ್ತಿನಗರ) –
ಹೌದು ಕಾಡ್ಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಾಲಕರ ಸಭೆಯಲ್ಲಿ ನೂತನ ಎಸ್‌ಡಿಎಂಸಿ ಸಮಿತಿಯನ್ನು ರಚನೆ ಮಾಡಲಾಯಿತು.
ಎಸ್‌ಡಿಎಂಸಿ ಸಮಿತಿಯ ನೂತನ ಅಧ್ಯಕ್ಷರಾಗಿ ವಿರೇಶ್ ಸಾಹುಕಾರ,ಉಪಾಧ್ಯಕ್ಷರಾಗಿ ತಸ್ಲೀಂ ಜಂಷೀರಅಲಿ ಅವರನ್ನು ಆಯ್ಕೆ ಮಾಡಲಾಯಿತು.18 ಜನ ಪಾಲಕರು ಸಮಿತಿಯ ಸದಸ್ಯರಾಗಿದ್ದು ಹಾಗೂ 6 ಜನ ನಾಮ ನಿರ್ದೇಶನ ಮತ್ತು ಪದ ನಿಮ್ಮಿತ್ಯ ಸದಸ್ಯರಾಗಿ ಆಯ್ಕೆ ಯನ್ನು ಮಾಡಲಾಯಿತು.

ಕಾಡ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಂ.ಡಿ. ಸಾಧಿಕ್,ಸದಸ್ಯರಾದ ಜಂಷೀರಅಲಿ,ವಲಯ ಸಂಪನ್ಮೂಲ ವ್ಯಕ್ತಿ ಶಿವಾನಂದ ಮತ್ತು ಮಹಿಬೂಬ್,ಮುಖ್ಯ ಶಿಕ್ಷಕಿ ಶ್ರೀದೇವಿ,ಶಿಕ್ಷಕರಾದ ರಹೇಮಾನ್,ಮಹಾದೇವ ಉಪಸ್ಥಿ ತರಿದ್ದರು.ಇದೇ ವೇಳೆ ನೂತನ ಶಾಲಾಭಿವೃದ್ದಿ ಸಮಿತಿಗೆ ಶಾಲೆಯ ಶಿಕ್ಷಕ ಬಂಧುಗಳು ಶುಭಾಶಯಗಳನ್ನು ಕೋರಿದರು.