ಬೆಳಗಾವಿ –
ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕವಾದ ಈ ಒಂದು ಶಿಕ್ಷಕರ ವರ್ಗಾವಣೆಯ ನೀತಿಯಿಂದಾಗಿ ರಾಜ್ಯದ ಅದೇಷ್ಟೋ ಶಿಕ್ಷಕರು ಅಸಮಾಧಾನಗೊಂಡಿದ್ದು ತಂದೆ ತಾಯಿ ಹೆಂಡತಿ ಮಕ್ಕಳು ಊರು ಹೀಗೆ ಒಬ್ಬೊ ಬ್ಬರು ದಿಕ್ಕಾಪಾಲಾಗಿರುವ ಶಿಕ್ಷಕರು ಎಲ್ಲರ ಹಾಗೆ ನಮಗೂ ಕೂಡಾ ಸ್ವಂತ ಜಿಲ್ಲೆಗೆ ವರ್ಗಾವಣೆ ಸಿಗುತ್ತದೆ ನಾವು ಕೂಡಾ ಸ್ವಂತ ಜಿಲ್ಲೆಗೆ ಹೋಗುತ್ತವೆ ಎಂದುಕೊಂಡು ಕಾಯುತ್ತಿರುವ ಶಿಕ್ಷಕರಿಗೆ ಬೇಡಿಕೆ ಈಡೇರುತ್ತಿಲ್ಲ ಈಗಾಗಲೇ ಈ ಒಂದು ಬೇಡಿಕೆಗಳ ಕುರಿತಂತೆ ಈ ಹಿಂದೆ ಎರಡು ಬಾರಿ ಮಹೇಶ್ ಮಡ್ಡಿ ಮತ್ತು ಪವಾಡೆಪ್ಪ ಅವರ ನೇತ್ರತ್ವದಲ್ಲಿ ಬೆಂಗಳೂರು ಚಲೋ ವನ್ನು ಮಾಡಲಾಗಿದ್ದು ಭರವಸೆಗಳು ಮಾತ್ರ ಸಿಕ್ಕಿ ದ್ದನ್ನು ಬಿಟ್ಟರೆ ಈವರೆಗೆ ಯಾರಿಂದಲೂ ಸ್ಪಂದನೆ ಸಿಗುತ್ತಿಲ್ಲ ಹೀಗಾಗಿ ಬೇಸತ್ತ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಅವರು ನಮ್ಮನ್ನು ಸ್ವಂತ ಜಿಲ್ಲೆಗೆ ಒಮ್ಮೆ ವರ್ಗಾವಣೆ ಮಾಡಿಸಿ ಎಂದು ಅಥಣಿ ಶಾಸಕ ಮಹೇಶ ಕಮಟಳ್ಳಿ ಅವರಿಗೆ ಮನವಿಯನ್ನು ನೀಡಿದರು.
ಬೆಂಗಳೂರಿಗೆ ಹೊರಟಿದ್ದ ಶಾಸಕರಿಗೆ ರಾಜ್ಯಾಧ್ಯಕ್ಷರ ನೇತ್ರತ್ವದಲ್ಲಿನ ನಿಯೋಗ ಮನವಿಯನ್ನು ನೀಡಿ ಬೇಡಿಕೆ ಗಳ ಈಡೇರಿಕೆಗೆ ಒತ್ತಾಯವನ್ನು ಮಾಡಿದರು,ಶಾಸಕರನ್ನು ಭೇಟಿಯಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವ ರಿಗೆ ತಮ್ಮ ಪತ್ರವನ್ನು ನೇರವಾಗಿ ಮುಟ್ಟಿಸಿ ಮಾತುಕತೆ ಮಾಡುವಂತೆ ಒತ್ತಾಯವನ್ನು ಮಾಡಿದರು.ಇದೇ ವೇಳೆ ನಿಮ್ಮ ಬೇಡಿಕೆಗಳ ಕುರಿತಂತೆ ನಾನು ಮಾತನಾಡಲು ಸಿದ್ಧ ವಾಗಿದ್ದು ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡಲು ನಾನು ಚರ್ಚಿಸುವುದಾಗಿ ಶಿಕ್ಷಕರಿಗೆ ಹೇಳಿದರು ಇನ್ನೂ ಮನವಿಗೆ ಸ್ಪಂದಿಸಿದ ಶಾಸಕರಿಗೆ OTS ಶಿಕ್ಷಕರ ಬಳಗದಿಂದ ತುಂಬು ಹೃದಯದ ಧನ್ಯವಾದಗಳನ್ನು ರಾಜ್ಯದ ಶಿಕ್ಷಕರು ಶಾಸಕರಿಗೆ ಹೇಳಿದ್ದಾರೆ.