This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಬೆಣ್ಣೆ ಹಳ್ಳ ಒತ್ತುವರಿ ತೆರವು ಮಾಡಿ ಸುರೇಶ್ ಗೋಕಾಕ್ ಒತ್ತಾಯ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೇದಿಕೆ ಯಿಂದ ಜಿಲ್ಲಾಧಿಕಾರಿಗೆ ಮನವಿ…..

WhatsApp Group Join Now
Telegram Group Join Now

ಧಾರವಾಡ –

ಧಾರವಾಡ ಜಿಲ್ಲೆಯಾದ್ಯಂತ ಅತಿ ಹೆಚ್ಚು ಮಳೆಯಿಂದ ಅತಿವೃಷ್ಟಿಯಾಗಿ ಬೆಣ್ಣೆ ಹಳ್ಳ ಹಾಗೂ ಇನ್ನಿತರೆ ಹಳ್ಳಗಳು ವ್ಯಾಪ್ತಿ ಮೀರಿ ಹರಿಯುತ್ತಿದ್ದು ಜೀವ ಹಾನಿ ಹಾಗೂ ಅಪಾರ ಆಸ್ತಿಪಾಸ್ತಿ ಬೆಳೆ ನಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್ ಗೋಕಾಕ್ ಅವರು ಮಾತನಾಡಿ ಬೆಣ್ಣೆ ಹಳ್ಳ 2006 ರಿಂದ 2022ವರೆಗೂ ಈ 10 ರಿಂದ 15 ವರ್ಷಗಳಲ್ಲಿ ಅತಿವೃಷ್ಟಿ ಅದಾಗೆಲ್ಲ ಬೆಣ್ಣೆ ಹಳ್ಳ ತನ್ನ ವ್ಯಾಪ್ತಿ ಮೀರಿ ಅಕ್ಕ ಪಕ್ಕದ ರೈತರ ಬೆಳೆಗಳಿಗೆ ಹಾಗೂ ಗ್ರಾಮಗಳಿಗೆ ಹಾನಿಯನ್ನುಂಟು ಮಾಡುತ್ತಾ ಬಂದಿದೆ.ಜನಪ್ರತಿನಿದಿಗಳು ಪ್ರವಾಹ ಉಂಟಾದಾಗ ಮಾತ್ರ ಜನರಿಗೆ ಸಾಂತ್ವನ ಹೇಳಲಿಕ್ಕೆ ಬರುತ್ತಾರೆ ಯಾವೊಬ್ಬ ಶಾಸಕರು ಸಂಸದರು ಶಾಶ್ವತ ಪರಿಹಾರ ಒದಗಿಸಿಲ್ಲ ಈವರೆಗೂ ಬೆಣ್ಣಿ ಹಳ್ಳ ಅಗಲೀಕರಣಕ್ಕೆ ಅಭಿವೃದ್ಧಿಗೆ ಸಾವಿರಾರು ಕೋಟಿ ಖರ್ಚು ಮಾಡಿದ್ದಾರೆ.

ಈವರೆಗೂ ಬೆಣ್ಣೆ ಹಳ್ಳ ಅಗಲೀಕರಣ ಆಗಿಲ್ಲ ಹಳ್ಳ ಹೊಳೆತ್ತದ ಕಾರಣ ನೀರು ಅಕ್ಕ ಪಕ್ಕದ ರೈತರ ಜಮೀನು ಗಳಿಗೆ ಹಾಗೂ ಗ್ರಾಮಗಳಿಗೆ ಪ್ರವಾಹ ಭೀತಿ ತಪ್ಪಿದ್ದಲ್ಲ ಬೆಣ್ಣೆ ಹಳ್ಳ ಅಭಿವೃದ್ಧಿ ಗೆ ಅಗಲೀಕರಣಕ್ಕೆ ಯಾರು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ.ಜನರ ಸಂಕಷ್ಟದ ಸಂದರ್ಭದಲ್ಲಿ ನೆಪ ಮಾತ್ರಕ್ಕೆ ಭೇಟಿ ಕೊಡುವದನ್ನ 10 ವರ್ಷ 15 ವರ್ಷದಿಂದ ನಾವು ನೋಡುತ್ತಾ ಬಂದಿದೇವೆ ಘಟನೆ ಆದಾಗ ಸಾಂತ್ವನ ಬದಲು ಮುಂಜಾಗ್ರತೆ ಯಾರು ವಿಚಾರ ಮಾಡಿಲ್ಲ..

ಬೆಣ್ಣೆ ಹಳ್ಳ ಹರಿಯುವ ವ್ಯಾಪ್ತಿಯ ಅಕ್ಕ ಪಕ್ಕದ ಗ್ರಾಮ ಗಳಲ್ಲಿ ದೇಶ ಕಾಯುವ ಪವಿತ್ರ ಕೆಲಸಕ್ಕೆ ರೈತರು ತಮ್ಮ ಮಕ್ಕಳನ್ನು ಕಳುಹಿಸಿದ್ದಾರೆ. ದೇಶ ಕಾಯೋ ಪವಿತ್ರ ಕೆಲಸಕ್ಕೆ ತಮ್ಮ ಕುಟುಂಬವನ್ನು ಬಿಟ್ಟು ಗಡಿಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ನಮ್ಮನ್ನು ಕಾಯುತ್ತಿದ್ದಾರೆ. ಆದರೆ ನಮ್ಮನ್ನು ಆಳುವ ಸರ್ಕಾರಗಳು ಅಂತಹ ಯೋಧರ ಕುಟುಂಬವನ್ನು ಬೆಣ್ಣೆ ಹಳ್ಳದ ಅತಿವೃಷ್ಟಿಯಿಂದ ಆಗುವ ತೊಂದರೆಯಿಂದ ಮುಕ್ತಿ ಕೊಡಿಸಲು ಆಗುತ್ತಿಲ್ಲ ಎಂದರೆ ಇದಕ್ಕಿಂತ ನಾಚಿಗೇಡಿನ ಸಂಗತಿ ಮತ್ತೊಂದಿಲ್ಲ ಎನಿಸುತ್ತಿದೆ.

ಬೆಣ್ಣೆ ಹಳ್ಳ ಹಾಗೂ ಇನ್ನಿತರೆ ಹಳ್ಳಗಳಿಂದ ಅತಿವೃಷ್ಟಿ ಆದಾಗಾ ನಮ್ಮ ರೈತರ ಬದುಕು ಅಕ್ಷರಸ ನರಕಮಯ ವಾಗಿ ಬದಲಾಗಿರುತ್ತದೆ.ಸರ್ಕಾರ ಜನಪ್ರತಿನಿಧಿಗಳು ಎಚ್ಚೆತ್ತು ಬೆಣ್ಣೆ ಹಳ್ಳ ಹಾಗೂ ಇನ್ನಿತರೆ ಹಳ್ಳಗಳನ್ನು ಒತ್ತೂರಿ ತೆರವು ಗೊಳಿಸಿ ಊಳೆತ್ತಿ ಅಲ್ಲಲ್ಲಿ ಚೆಕ್ ಡ್ಯಾಮಗಳನ್ನು ನಿರ್ಮಿಸಿ, ಎಷ್ಟೇ ಅತಿವೃಷ್ಟಿ ಆದರೂ ರೈತರ ಜಮೀನು ಗಳಿಗೆ ಹಾಗೂ ಗ್ರಾಮಗಳಿಗೆ ನೀರು ನುಗ್ಗದ ಹಾಗೆ ವೈಜ್ಞಾ ನಿಕವಾಗಿ ಕಾಮಗಾರಿಯನ್ನು ಆದಷ್ಟು ಬೇಗ ಮಾಡಿ ರೈತರಿಗೆ ಆಗುತ್ತಿರುವ ತೊಂದರೆಯಿಂದ ಮುಕ್ತಿ ನೀಡಬೇಕು.

ಬೆಣ್ಣೆ ಹಳ್ಳ ಹಾಗೂ ಇತರೆ ಹಳ್ಳಗಳಿಂದ ಅತಿವೃಷ್ಟಿಯಿಂದ ವ್ಯಾಪ್ತಿ ಮೀರಿ ಹಳ್ಳಿಗಳಿಗೆ ನೀರು ನುಗ್ಗಿ ಬಹಳಷ್ಟು ಮನೆ ಗಳು ಹಾನಿ ಗಿಡಾಗಿದ್ದಾವೆ, ಜೀವಗಳು ಹೋಗಿದ್ದಾವೆ, ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆಗಳು ನಷ್ಟವಾಗಿದ್ದಾವೆ.

ಬೆಣ್ಣಿ ಹಳ್ಳದ ಪ್ರವಾಹದಲ್ಲಿ ತೀರಿಕೊಂಡ ವ್ಯಕ್ತಿಗಳ ಕುಟುಂಬಕ್ಕೆ ಶಾಶ್ವತ ಪರಿಹಾರವನ್ನು ತ್ವರಿತವಾಗಿ ನೀಡಿ ಹಾನಿಯಾದ ಬೆಳೆಗಳಿಗೆ ಹಾಗೂ ಮನೆಗಳಿಗೆ ತ್ವರಿತವಾಗಿ ಪರಿಹಾರವನ್ನು ಸರ್ಕಾರ ಒದಗಿಸಬೇಕೆಂದು ವಿನಂತಿಸು ತ್ತೇವೆ.

ಒಂದು ವೇಳೆ ಬೆಣ್ಣೆ ಹಳ್ಳ ಹಾಗೂ ಇನ್ನಿತರ ಹಳ್ಳಗಳನ್ನು ಶೀಘ್ರವಾಗಿ ಒತ್ತೂವರಿ ತೆರವೂ ಹಾಗೂ ಹೂಳೆತ್ತಿ ಅಗಲೀಕರಣ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ದಿಂದ ಉಗ್ರ ಪ್ರತಿಭಟನೆಯನ್ನು ಸರ್ಕಾರ ಎದುರಿಸಬೇಕಾ ಗುತ್ತದೆ ಎಂದು ವಿನಂತಿ ಪೂರ್ವಕವಾಗಿ ಆಗ್ರಹಿಸುತ್ತದೆ.

ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಅಭಿಮಾನಿ ಬಳಗದ ಸದಸ್ಯರಾದ ಪ್ರವೀಣ್ ಗೋಕಾವಿ,ಸಚಿನ್ ಗಾಣಿಗೇರ್ ವಿನಾಯಕ್ ಗುಡ್ಡದ್ಕೇರಿ,ಸೋಹನ್ ಮುಶಣ್ಣ ನವರ್,ವಿನಯ ಹುಲಿಹಳ್ಳಿ,ಸುರೇಶ್ ಎಲಿಗಾರ್, ರಾಮ ಚಂದ್ರ ದಳವಿ, ಚಿದಾನಂದ,ಧ್ರುವಚಂದ್ರ,ಅಭಿ ಹಾಗೂ ಇನ್ನೂ ಅನೇಕ ಅಭಿಮಾನಿಗಳಾದ ಸದಸ್ಯರು ಉಪಸ್ಥಿತರಿ ದ್ದರು.


Google News

 

 

WhatsApp Group Join Now
Telegram Group Join Now
Suddi Sante Desk