ಬೆಂಗಳೂರು –
ಸಿಬಿಎಸ್ಇ ಮಂಡಳಿಯು ಮಕ್ಕಳಲ್ಲಿರುವ ಕಲಿಕಾ ಗುಣಮಟ್ಟ ಪರಿಶೀಲನೆಗಾಗಿ ನವೆಂಬರ್.12 ರಿಂದ ನ್ಯಾಷನಲ್ ಅಚೀವ್ ಮೆಂಟ್ ಸರ್ವೆ(ಎನ್ಎಎಸ್) ನಡೆಸುತ್ತಿದೆ.ಈ ಸಮೀಕ್ಷೆ ಇಡೀ ದೇಶಾದ್ಯಂತ ನಡೆಯಲಿ ದ್ದು, ಇದಕ್ಕಾಗಿಯೇ ಪ್ರತ್ಯೇಕ ಪ್ರಶ್ನೋತ್ತರ ಪತ್ರಿಕೆ ರೂಪಿಸ ಲಾಗಿದೆ.ವಿದ್ಯಾರ್ಥಿಗಳಲ್ಲಿರುವ ಕಲಿಕಾ ಗುಣಮಟ್ಟ ಮೌಲ್ಯಾಂಕನಕ್ಕಾಗಿ ಈ ಸಮೀಕ್ಷೆ ನಡೆಸುತ್ತಿದೆ.3, 5, 8 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಕಲಿತಿರುವ ವಿಷಯದ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ
2017ರಲ್ಲಿ ಕೊನೆ ಬಾರಿಗೆ ಸಮೀಕ್ಷೆ ನಡೆದಿತ್ತು.NCERTU ಸಮೀಕ್ಷೆಯ ಪ್ರಶ್ನೆಗಳನ್ನು ರೂಪಿಸಿಕೊಟ್ಟಿದೆ. ಎಲ್ಲ ವರ್ಗದ ಶಾಲೆಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಒಟ್ಟಾರೆ 733 ಜಿಲ್ಲೆಗಳು, 36 ರಾಜ್ಯಗಳು, 1.23 ಲಕ್ಷ ಶಾಲೆ, 38 ಲಕ್ಷ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸುತ್ತಿದೆ. ಪರೀಕ್ಷೆ ಯನ್ನು 22 ಮಾಧ್ಯಮಗಳಲ್ಲಿ ನಡೆಸಲಿದೆ. ಇದರಲ್ಲಿ ಕನ್ನಡ ಭಾಷೆಯೂ ಸೇರಿದೆ.
ರಾಜ್ಯ ಸರ್ಕಾರದ ಅಧೀನದಲ್ಲಿರುವ ವಸತಿ ಶಾಲೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಜವಾಹರ್ ನವೋದಯ ವಿದ್ಯಾಲಯ ನಿರ್ವಹಣಾ ಸಮಿತಿ ಮಾದರಿ ಯಲ್ಲಿ ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ವಸತಿ ಶಾಲೆ ನಿರ್ವಹ ಣೆಗೆ ಸಮಾಜ ಕಲ್ಯಾಣ ಇಲಾಖೆ ಪ್ರತ್ಯೇಕ ಸಮಿತಿ ರಚನೆ ಮಾಡಿದೆ.
ಸಮಿತಿಯಲ್ಲಿ ಯಾರಿದ್ದಾರೆ….. ಜಿಲ್ಲಾಧಿಕಾರಿ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯತ ಸಿಇಒ ಉಪಾಧ್ಯಕ್ಷರಾಗಿರುತ್ತಾರೆ.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು,ಜಿಲ್ಲಾ ಆರೋಗ್ಯಾಧಿಕಾರಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರು,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ,ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕರು ಸದಸ್ಯರಾಗಿರುತ್ತಾರೆ.ಇವರೊಂದಿಗೆ ಪೋಷಕ ವರ್ಗದಿಂದ ಇಬ್ಬರು ಪ್ರತಿನಿಧಿಗಳು (ಒಬ್ಬ ಪುರುಷ,ಒಬ್ಬ ಮಹಿಳೆ)ಇಬ್ಬರು ಹಿರಿಯ ಅನುಭವಿ ಪ್ರಾಂಶುಪಾಲರು ಸದಸ್ಯರಾಗಿರುತ್ತಾರೆ.ಸಮಿತಿಗೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಅಥವಾ ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.ಒಟ್ಟು 13 ಜನರಿಗೆ ಸಮಿತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸಮಿತಿ ಅಧಿಕಾರ,ಕರ್ತವ್ಯಗಳು ಸಮಿತಿಯ ಅಧಿಕಾರವಧಿ 3 ವರ್ಷಗಳದ್ದಾಗಿರುತ್ತದೆ. ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರದಡಿ ಹಿರಿಯ ಅಧಿಕಾರಿ ಗಳನ್ನು ನಾಮನಿರ್ದೇಶನ ಮಾಡುವುದು ಸಮಿತಿಯು ವರ್ಷಕ್ಕೆ ಕನಿಷ್ಠ 3 ಬಾರಿ ಸಭೆ ನಡೆಸತಕ್ಕದ್ದು ಅನುದಾನದ ಸಮರ್ಪಕ ಬಳಕೆ ಹಾಗೂ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವುದು.ಮುಂದಿನ ವರ್ಷಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸುವುದು.ವಸತಿ ಶಾಲೆಯ ಸುಗಮ ನಿರ್ವಹಣೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯ ಮಟ್ಟದಲ್ಲಿ ಸಹಕಾರದೊಂದಿಗೆ ಸಮನ್ವಯ ಸಾಧಿಸುವುದು.