This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

State News

ನಕಲಿ ಪೊಲೀಸಪ್ಪನನ್ನು ಬಂಧನ ಮಾಡಿದ ಪೊಲೀಸರು – ಇವನು ಮಾಡುತ್ತಿರುವ ಕೆಲಸವನ್ನು ಒಮ್ಮೆ ನೋಡಿ…..

ನಕಲಿ ಪೊಲೀಸಪ್ಪನನ್ನು ಬಂಧನ ಮಾಡಿದ ಪೊಲೀಸರು – ಇವನು ಮಾಡುತ್ತಿರುವ ಕೆಲಸವನ್ನು ಒಮ್ಮೆ ನೋಡಿ…..
WhatsApp Group Join Now
Telegram Group Join Now

ನಕಲಿ ಪೊಲೀಸಪ್ಪನನ್ನು ಬಂಧನ ಮಾಡಿದ ಪೊಲೀಸರು – ಇವನು ಮಾಡುತ್ತಿರುವ ಕೆಲಸ ವನ್ನು ಒಮ್ಮೆ ನೋಡಿ ಹೌದು ಪೊಲೀಸ್ ಸೋಗಿ ನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ವ್ಯಕ್ತಿಯೊ ರ್ವನನ್ನು ಬಂಧನ ಮಾಡಿದ ಘಟನೆ ಬೆಂಗಳೂರಿ ನಲ್ಲಿ ನಡೆದಿದೆ.ಪೊಲೀಸ್​ ಸೋಗಿನಲ್ಲಿ ಸಾರ್ವಜ ನಿಕರನ್ನು ಪರಿಚಯಿಸಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್​ ಸೋಗಿನಲ್ಲಿ ಸಾರ್ವಜನಿಕರನ್ನು ಪರಿಚಯಿಸಿಕೊಂಡು ನಗರದ ವಿವಿಧೆಡೆ ಪೊಲೀಸರು ಸೀಜ್ ಮಾಡಿರುವ ವಾಹನಗಳನ್ನ ಕಡಿಮೆ ಬೆಲೆಗೆ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನ ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.ಕೆ. ಲೂರ್ದನಾಥನ್ (53)ಬಂಧಿತ ಆರೋಪಿಯಾಗಿದ್ದಾನೆ.

ಈ ಹಿಂದೆ ಗೃಹರಕ್ಷಕದಳದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಸದ್ಯ ಯಾವುದೇ ಕೆಲಸ ಮಾಡುತ್ತಿರ ಲಿಲ್ಲ.ಆದರೆ ಪೊಲೀಸ್ ಸಮವಸ್ತ್ರ ಧರಿಸಿ ತಾನೊಬ್ಬ ಪೊಲೀಸ್ ಎಂದು ಹೇಳಿಕೊಂಡು ಸಾರ್ವಜನಿಕರನ್ನು ಪರಿಚಯಿಸಿಕೊಳ್ಳುತ್ತಿದ್ದನು ನಗರದ ಬೇರೆ ಬೇರೆ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸರು ಜಪ್ತಿ ಮಾಡಿರುವ ವಾಹನಗಳನ್ನು ಹರಾಜಿನಲ್ಲಿ ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸುತ್ತಿದ್ದ.

ಇದಕ್ಕೆ ಪ್ರತಿಯಾಗಿ ಅವರಿಂದ ಹಣವನ್ನು ಕೂಡಾ ಪಡೆದುಕೊಂಡು ನಂತರ ವಂಚಿಸುತ್ತಿದ್ದನು. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿ ವ್ಯಕ್ತಿಯೊಬ್ಬರಿಗೆ ವಂಚಿಸಿದ್ದ ಪ್ರಕರಣ ಸಂಬಂಧ ಆರೋಪಿಯನ್ನ ಬಂಧಿಸಲಾಗಿದೆ. ಆರೋಪಿ ಯಿಂದ 50 ಸಾವಿರ ರೂ. ನಗದು ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಯು ಇದೇ ರೀತಿ ಚಿಕ್ಕಜಾಲ, ಬೆಳ್ಳಂ ದೂರು ಹಾಗೂ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿ ಯಲ್ಲಿಯೂ ವಂಚಿಸಿರುವುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದ್ದು ಸಧ್ಯ ಈ ಕುರಿ ತಂತೆ ಪೊಲೀಸರು ತನಿಖೆಯನ್ನು ಮಾಡ್ತಾ ಇದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk