This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Sports News

ಸಂವಿಧಾನ ಬದಲಾವಣೆ ಮಾಡಲು ಹೊರಟವರಿಗೆ ಶಿಕ್ಷಕರ ವರ್ಗಾವಣೆ ಕಾಯ್ದೆ ದೊಡ್ಡ ಸವಾಲು – ಗಟ್ಟಿಯಾಗಿ ಯಾರು ಕೇಳುತ್ತಿಲ್ಲ ಹೋರಾಟ ಮಾಡುತ್ತಿಲ್ಲ ಶಿಕ್ಷಕರ ಕೂಗಿಗೆ ಬೆಲೆ ಕೊಡದ ಸರ್ಕಾರ…..

Join The Telegram Join The WhatsApp

 


ಬೆಂಗಳೂರು –

ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕವಾದ ವರ್ಗಾವಣೆ ಶಿಕ್ಷಣ ಇಲಾಖೆಗೆ ಇದೆ.ಅದರಲ್ಲೂ ಇಲಾಖೆ ಯಲ್ಲಿ ಶಿಕ್ಷಕರಿಗೆ ಇಧ್ದಿದ್ದು ಹೀಗಾಗಿ ನರಕಯಾತನೆಯನ್ನು ಅನುಭವಿಸುತ್ತಾ ನಾಡಿನ ಶಿಕ್ಷಕರು ವರ್ಗಾವಣೆ ಸಿಗದೇ ಕಷ್ಟದಲ್ಲಿದ್ದುಕೊಂಡು ಕರ್ತವ್ಯವನ್ನು ಮಾಡುತ್ತಿದ್ದಾರೆ.ತಾವು ಆಯಿತು ತಮ್ಮ ಕೆಲಸ ಆಯಿತು ಎಂದುಕೊಂಡು ಮನೆ ಶಾಲೆ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡುತ್ತಾ ಕಾಯಕವೇ ಕೈಲಾಸ ಎಂದುಕೊಂಡು ಸೇವೆಗೆ ಸೇರಿಕೊಂಡು 10,15,20 ವರ್ಷಗಳಾದರೂ ಕೂಡಾ ನೂರಾರು ಕಿಲೋ ಮೀಟರ ದೂರದ ಊರಲ್ಲಿದ್ದುಕೊಂಡು ಕರ್ತವ್ಯವನ್ನು ಮಾಡುತ್ತಿ ದ್ದಾರೆ.

ಸರ್ಕಾರದ ಏನೇ ಕೆಲಸ ಕಾರ್ಯಗಳಿಗೆ ಅದರಲ್ಲೂ ಪ್ರತಿ ಯೊಂದಕ್ಕೂ ಕೂಡಾ ಸರ್ಕಾರಕ್ಕೆ ಶಿಕ್ಷಕರೇ ಅತ್ಯವಶ್ಯಕವಾಗಿ ರುವಾಗ ಇವರಿಂದಲೇ ಪ್ರತಿಯೊಂದು ಕೆಲಸಗಳು ನಡೆಯು ತ್ತಿರುವಾಗ ಜೊತೆಗೆ ಇವರು ಕೂಡಾ ರಾಜ್ಯ ಸರ್ಕಾರದ ನೌಕರರಾಗಿದ್ದರೂ ಕೂಡಾ ಎಲ್ಲಾ ಸರ್ಕಾರಿ ನೌಕರರಿಗೆ ಒಂದು ವರ್ಗಾವಣೆಯ ಕಾನೂನು ವಾದರೆ ಇನ್ನೂ ಇವರಿ ಗೊಂದು ಕಾನೂನುವಾಗಿರೊದು ದುರಂತವಾಗಿದೆ.

ಯಾವುದೇ ವ್ಯಕ್ತಿ ತಂದೆ ತಾಯಿ ಹೆಂಡತಿ ಮಕ್ಕಳನ್ನು ಬಿಟ್ಟು ಇರಲಾರದ ಬಾಂಧವ್ಯದ ಮನಸ್ಥಿತಿಯ ನಡುವೆ ಶಿಕ್ಷಕರು ಮಾತ್ರ ತಂದೆ ತಾಯಿ ಊರು ಸಂಬಂಧಿಕರು ಮಕ್ಕಳು ಹೆಂಡತಿ ಹೀಗೆ ದಿಕ್ಕಿಗೊಬ್ಬರನ್ನು ಬಿಟ್ಟು ಕರ್ತವ್ಯವನ್ನು ಮಾಡುತ್ತಿದ್ದು ಎಲ್ಲರ ಹಾಗೆ ನಮಗೂ ಕೂಡಾ ಒಮ್ಮೆಯಾ ದರೂ ಸ್ವಂತ ಜಿಲ್ಲೆಗೆ ಹೋಗಲು ಅವಕಾಶವನ್ನು ಕೊಡಿ ಕೊಡಿ ಎಂದು ಕೇಳುತ್ತಿದ್ದಾರೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಈ ಒಂದು ವಿಚಾರ ಕುರಿತಂತೆ ಈಗಾಗಲೇ ಹಲವಾರು ಬಾರಿ ಹೋರಾಟವನ್ನು ಮಾಡಿದ್ದಾರೆ ಸಾಲದಂತೆ ರಾಜ್ಯದ ಎಲ್ಲಾ ಪಕ್ಷಗಳ ಶಾಸಕರ ಸಚಿವರ ಪತ್ರಗಳನ್ನು ತಗೆದು ಕೊಂಡಿದ್ದಾರೆ ಆದರೂ ಕೂಡಾ ಸ್ವಂತ ಜಿಲ್ಲೆಗೆ ವರ್ಗಾವಣೆ ವಿಚಾರ ಕುರಿತಂತೆ ಕಾಯ್ದೆ ಬದಲಾವಣೆ ಮಾಡುತ್ತಿಲ್ಲ ಒಪ್ಪುತ್ತಿಲ್ಲ ಸಂಘಟನೆಯ ನಾಯಕರಿಂದ ಹಿಡಿದುಕೊಂಡು ಪ್ರತಿಯೊಬ್ಬರು ಶಿಕ್ಷಕರಿಗೆ ಈ ಒಂದು ವಿಚಾರದಲ್ಲಿ ಸ್ಬಂದನೆ ಮಾಡುತ್ತಿಲ್ಲ

ಹೀಗಾಗಿ ನಕರಯಾತನೆಯ ನಡುವೆ ಕರ್ತವ್ಯವನ್ನು ಮಾಡುತ್ತಾ ಅನಿವಾರ್ಯವಾಗಿ ಇದ್ದಾರೆ.ದುರಂತದ ವಿಚಾರವೆಂದರೆ ರಾಜ್ಯದ ಹಲವು ಕಡೆಗಳಲ್ಲಿ ಗಂಡ ಒಂದು ಕಡೆಯಾದರೆ ಇನ್ನೂ ಹೆಂಡತಿ ಮತ್ತೊಂದು ಕಡೆಗೆ ನೌಕರಿ ಮಾಡುತ್ತಿದ್ದು ವಿಚ್ಛೇದನ ಕೂಡಾ ಆಗಿರುವ ಉದಾಹರಣೆಗ ಳಿದ್ದು ಸಾಕಷ್ಟು ದುರಂತದ ಘಟನೆಗಳು ನಡೆದಿದ್ದರೂ ಕೂಡಾ ಏನೇಲ್ಲಾ ಬದಲಾವಣೆ ಮಾಡುವ ಸರ್ಕಾರಗಳಿಗೆ ಶಿಕ್ಷಕರ ವರ್ಗಾವಣೆ ವಿಚಾರ ದೊಡ್ಡ ಸವಾಲಾಯಿತೆ ಎಂಬ ಪ್ರಶ್ನೆ ಕಾಡುತ್ತಿದೆ. ಸಮಾಜವನ್ನು ರೂಪಿಸುವ ಶಿಕ್ಷಕರಿಗೆ ಇತ್ತೀಚಿಗೆ ಹೈಕೊರ್ಟ್ ಯಾವುದೇ ಕಾರಣಕ್ಕೂ ಅವರಿಗೆ ಸೌಲಭ್ಯಗಳ ವಿಚಾರದಲ್ಲಿ ವಿಳಂಭ ಮಾಡದಂತೆ ತಾಕೀತು ಮಾಡಿದೆ ಆದರೂ ಕೂಡಾ ಈ ಒಂದು ವಿಚಾರದಲ್ಲಿ ಸರ್ಕಾರ ಸಚಿವರು ಇಲಾಖೆ ಕಣ್ತೇರೆದು ನೋಡುತ್ತಿಲ್ಲ

ಇತ್ತೀಚಿಗೆ ಶೀಘ್ರದಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ 7ನೇ ವೇತನ ಆಯೋಗ ರಚನೆ ಅಂತಾ ತಲೆಬರಹ ದಲ್ಲಿ ಸುದ್ದಿಯೊಂದವನ್ನು ಸುದ್ದಿ ಸಂತೆ ಪ್ರಸಾರ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಪೊಸ್ಟ್ ಮಾಡಿತ್ತು ಈ ಒಂದು ಸುದ್ದಿಗೆ ಶಿಕ್ಷಕರೊಬ್ಬರು ದಯಮಾಡಿ ಇದೇಲ್ಲಾ ನಮಗೆ ಬೇಡ ಜೀವನದಲ್ಲಿ ನಾವು ನೊಂದುಕೊಂಡಿದ್ದೇವೆ ಮೊದಲು ನಮಗೆ OTS ಮಾಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದ ನೊವಿನ ಸಂದೇಶವನ್ನು ಹಾಕಿದ್ದರು ಇದನ್ನು ನೋಡಿದರೆ ನಮ್ಮ ಶಿಕ್ಷಕರಿಗೆ ಹಣ ವೇತನ ಭಡ್ತಿ ಯಾವುದು ಮುಖ್ಯ ವಲ್ಲ ಇದರ ಬದಲಾಗಿ ಸ್ವಂತ ಜಿಲ್ಲೆಗೆ ವರ್ಗಾವಣೆಯಾದರೆ ನೆಮ್ಮದಿ ಯಿಂದ ಮತ್ತಷ್ಟು ಉತ್ಸಾಹದಿಂದ ಕರ್ತವ್ಯವನ್ನು ಮಾಡಬಹುದು ಎಂಬ ಸಂದೇಶ ನೀಡಿದ್ದಾರೆ.

ಒಟ್ಟಾರೆ ಮನಸ್ಸು ಮಾಡಿದರೆ ಏನೇಲ್ಲಾ ಮಾಡಬಹುದು ಎಂಬೊದನ್ನು ಇಂದು ಸರ್ಕಾರ ಜನಪ್ರತಿನಿಧಿಗಳು ತೊರಿಸಿ ಕೊಟ್ಟಿದ್ದು ಬೇರೆ ಇಲಾಖೆಯವರಿಗೆ ಸಿಗುವ ವರ್ಗಾವಣೆ ನಮ್ಮ ಶಿಕ್ಷಕರಿಗೆ ಏಕೆ ಇಲ್ಲ ಪ್ರತಿಯೊಂದು ಕೆಲಸಕ್ಕೆ ಶಿಕ್ಷಕರು ಬೇಕು ನಮ್ಮ ಶಿಕ್ಷಕರನ್ನು ಕಸದಂತೆ ಕಾಣಬೇಡಿ ನಿಮಗೆ ಎಂದು ಒಳ್ಳೆಯದಾಗುವುದಿಲ್ಲ ಎಂಬ ನೋವಿನ ಮಾತನ್ನು ಶಿಕ್ಷಕರು ಹೇಳುತ್ತಿದ್ದು ಇನ್ನಾದರೂ ಮುಖ್ಯಮಂತ್ರಿಯವರೇ ಶಿಕ್ಷಣ ಸಚಿವರೇ ಒಮ್ಮೆ ನೋಡಿ ಸ್ಪಂದಿಸಿ ಇಲ್ಲವಾದರೆ ಇವರ ಶಾಪ ತಟ್ಟದೇ ಇರೊದಿಲ್ಲ………..


Join The Telegram Join The WhatsApp

Suddi Sante Desk

Leave a Reply