This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

National News

ತುಟ್ಟಿ ಭತ್ಯೆ ಹೆಚ್ಚಳ ಯಾವಾಗ ನೌಕರರ ಕಾತುರದ ಪ್ರಶ್ನೆ ಗೆ ಉತ್ತರ ಜುಲೈ ತಿಂಗಳ ಅಂತ್ಯದಲ್ಲಿ ಸಿಗಲಿದೆ ತುಟ್ಟಿಭತ್ಯೆ…..

WhatsApp Group Join Now
Telegram Group Join Now

ದೆಹಲಿ –

ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವ ಸುದ್ದಿ ಕೆಲ ಸಮಯದಿಂದ ಚಾಲ್ತಿಯಲ್ಲಿದೆ.ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಪಿಂಚಣಿದಾರರಿಗೆ ಜುಲೈ ತಿಂಗಳ ಅಂತ್ಯದಲ್ಲೇ ತುಟ್ಟಿಭತ್ಯೆ ಅಥವಾ ಡಿಎ ಮತ್ತು ತುಟ್ಟಿಭತ್ಯೆ ಪರಿಹಾರ (ಡಿಆರ್) ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿ ಬಂದಿದೆ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಕೇಂದ್ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು ಈ ಸುದ್ದಿಗೆ ಇನ್ನಷ್ಟು ಪುಷ್ಟಿ ನೀಡಿದೆ.

ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ 18 ತಿಂಗಳ ತುಟ್ಟಿಭತ್ಯೆ ಬಾಕಿಯ ಬಗ್ಗೆ ಮೋದಿ ಸರ್ಕಾರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ.ತುಟ್ಟಿಭತ್ಯೆ ಪ್ರಸ್ತುತ ಶೇಕಡಾ 31 ರಷ್ಟಿದೆ. ಈ ವರ್ಷ ಜುಲೈ ಮೊದಲು ಇದು 17 ಪ್ರತಿಶತದಷ್ಟಿತ್ತು ತುಟ್ಟಿಭತ್ಯೆ ಪರಿಹಾರ(ಡಿಆರ್) ಕೂಡಾ ಶೇ 3ರಷ್ಟಿದೆ.ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಪ್ರಕಾರ ದೇಶದಲ್ಲಿ ಒಟ್ಟು 48 ಲಕ್ಷ ಕೇಂದ್ರ ನೌಕರರು ಮತ್ತು ಸುಮಾರು 68.62 ಲಕ್ಷ ಪಿಂಚಣಿದಾರರಿದ್ದಾರೆ.

ವರ್ಷಕ್ಕೆ ಎರಡು ಬಾರಿ ಡಿಎ ಘೋಷಣೆ ಮಾಡಲಾಗುತ್ತದೆ. ಈ ವರ್ಷದಲ್ಲಿ ಜನವರಿಯಲ್ಲಿ ಕೇಂದ್ರ ಸರ್ಕಾರವು ಡಿಎ ಹೆಚ್ಚಳವನ್ನು ಘೋಷಣೆ ಮಾಡಿದೆ. ವರದಿಗಳ ಪ್ರಕಾರವ ಮೇ ತಿಂಗಳಿನಲ್ಲಿ ಶೇಕಡ 7.4ರಷ್ಟಿರುವ ಹಣದುಬ್ಬರವನ್ನು ಕೇಂದ್ರ ಸರ್ಕಾರವು ಪರಿಗಣನೆಗೆ ತೆಗೆದುಕೊಳ್ಳಬಹುದು. ಸರಿ ಸುಮಾರು ಶೇ 4 ರಿಂದ 6 ರಷ್ಟು ಡಿಎ ಹೆಚ್ಚಳದ ನಿರೀಕ್ಷೆಯಂತೂ ಇದ್ದೆ ಇದೆ.By Mahesh Malnad
ಎಷ್ಟು ಪ್ರಮಾಣದಲ್ಲಿ ಏರಿಕೆ ಸಾಧ್ಯತೆ?

ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಉದ್ಭವಿಸಿದ ಅಸಾಧಾರಣ ಪರಿಸ್ಥಿತಿಯಿಂದಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಹೆಚ್ಚುವರಿ ಕಂತುಗಳ ತುಟ್ಟಿ ಭತ್ಯೆ [ಡಿಎ]ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು ಸ್ಥಗಿತಗೊಳಿಸಲಾಗಿತ್ತು.ಜನವರಿ 1 (4%), ಜುಲೈ 1 2020 (3%) ಹಾಗೂ ಜನವರಿ 1,2021 (4%) ಗೆ ಮೂರು ಬಾರಿ ಏರಿಕೆಯಾಗಿ ಶೇ 25ಕ್ಕೇರಿತ್ತು.ಜುಲೈ 1, 2021ಕ್ಕೆ ಪರಿಷ್ಕರ ಣೆಗೊಳ್ಳಲಿದ್ದು ಶೇ 31ಕ್ಕೇರಿದೆ.ನಂತರ ಶೇ 3ರಂತೆ ಡಿಎ ಏರಿಕೆ ಕ್ರಮ ಅನುಸರಿಸಲಾಗಿದೆ. ಸದ್ಯ ಡಿಎ ಶೇ 34ರಷ್ಟಿದೆ.
ಈ ಬಾರಿ ಅಧಿಕ ಪ್ರಮಾಣದಲ್ಲಿ(ಶೇ 4 ರಿಂದ 6ರಷ್ಟು) ಏರಿಕೆ ಕಾಣುವ ಸಾಧ್ಯತೆಯಿದ್ದು ಶೇ 40ರಷ್ಟಾಗುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ

AICPI ಸೂಚ್ಯಂಕದ ಆಧಾರದ ಮೇಲೆ ಹೇಳುವುದಾದರೆ ಶೇ 4ರಷ್ಟು ಡಿಎ ಹೆಚ್ಚಳ ನಿರೀಕ್ಷಿಸಬಹುದು.ಏಪ್ರಿಲ್‌ನಲ್ಲಿ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ(ಎಐಸಿಪಿಐ) 127.7 ಪಾಯಿಂಟ್‌ಗಳಿಗೆ ಏರಿದೆ.ಇನ್ನೂ ಮೇ,ಜೂನ್ ಅಂಕಿ ಅಂಶವನ್ನು ಕೂಡಾ ಪರಿಶೀಲನೆ ಮಾಡಿದರೆ,ಡಿಎ ಮತ್ತೆ ಶೇಕಡ 5 ರಿಂದ 6ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಶೇ 5ರಷ್ಟು ಏರಿಕೆ ಕಂಡರೆ ತಿಂಗಳಿಗೆ ಮೂಲ ವೇತನಕ್ಕೆ ಅನುಸಾರವಾಗಿ 3,400 ರು ಅಥವಾ ವಾರ್ಷಿಕ 40,000 ರು ತನಕ ಸಂಬಳದಲ್ಲಿ ಏರಿಕೆ ಕಾಣಬಹುದು.

ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರಿ ನೌಕರರ ಬ್ಯಾಂಕ್ ಬ್ಯಾಲೆನ್ಸ್ ಏರಿಕೆಯಾಗಲಿದ್ದು ಜುಲೈ 31ರಂದು ಡಿಎ ಹೆಚ್ಚಳ ಬಗ್ಗೆ ಸೂಚನೆ ಸಿಗಲಿದೆ ಎಂಬ ವರದಿಗಳು ಬಂದಿವೆ ಆದರೆ ಆಗಸ್ಟ್ 3ರಂದು ಕೇಂದ್ರ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು ಅಂದೇ ಹೊಸ ಡಿಎ ಪ್ರಮಾಣ ಹಾಗೂ ಡಿಆರ್ ಬಗ್ಗೆ ಅಧಿಕೃತ ವರದಿ ಪ್ರಕಟವಾಗಲಿದೆ.ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಹೊರ ಬಂದಿಲ್ಲ.

ನಿಯಮಗಳ ಪ್ರಕಾರ,ಡಿಎ ಘೋಷಣೆಯನ್ನು ಮೊದಲು ಮಾರ್ಚ್ ಮತ್ತು ಸೆಪ್ಟೆಂಬರ್‌ನಲ್ಲಿ ಮಾಡಲಾಗುತ್ತಿತ್ತು. ಕೋವಿಡ್ ಕಾರಣದಿಂದಾಗಿ ಸುಮಾರು 1.5 ವರ್ಷಗಳ ಕಾಲ ಡಿಎ ಹೆಚ್ಚಳವನ್ನು ಮಾಡಿಲ್ಲ.ನಂತರ ಜುಲೈ 2021 ರಲ್ಲಿ ಡಿಎ ಹೆಚ್ಚಳ ಮತ್ತೆ ಆರಂಭ ಮಾಡಲಾಗಿದೆ.7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಮತ್ತು ಪಿಂಚಣಿದಾರರಿಗೆ ಡಿಆರ್ ಅನ್ನು ಜುಲೈ 2021 ರಲ್ಲಿ ಹೆಚ್ಚಿಸಲಾಯಿತು.ಜನವರಿ 1 2022 ರಲ್ಲಿ ಶೇ 3ರಷ್ಟು ಡಿಎ ಹೆಚ್ಚಳವಾಗಿದ್ದು ಸದ್ಯ ಡಿಎ ಶೇಕಡ 34ರಷ್ಟು ಡಿಎ ರಷ್ಟಿದೆ.

ತುಟ್ಟಿ ಭತ್ಯೆ ಭಾರತದಲ್ಲಿ ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ.ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾ ಗುತ್ತದೆ. ನಂತರ ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ.


Google News

 

 

WhatsApp Group Join Now
Telegram Group Join Now
Suddi Sante Desk