This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಶಾಲೆಗೆ ಹೋಗಿ ಬಂದ ಬಾಲಕನಿಗೆ ಮನೆಯಲ್ಲಿ ಸಿಕ್ಕತು ವಿಶೇಷ ಸ್ವಾಗತ – ಪೂಜೆ ಮಾಡಿ ತೆಂಗಿನಕಾಯಿ ಒಡೆದು ಮನೆಗೆ ಬರಮಾಡಿಕೊಂಡ ಪೋಷಕರು…..

WhatsApp Group Join Now
Telegram Group Join Now

ಬೆಳಗಾವಿ –

ಸಾಮಾನ್ಯವಾಗಿ ಮನೆಗೆ ಯಾರಾದರೂ ಬಂದರೆ ಅದದಲ್ಲೂ ಗೃಹ ಪ್ರವೇಶ ಸಮಯದಲ್ಲಿ ಇಲ್ಲವೇ ತವರು ಮನೆಗೆ ಮಗಳು ಬಂದರೆ ವಿಶೇಷವಾಗಿ ಸ್ವಾಗತ ಮಾಡಿಕೊಳ್ಳೊದನ್ನು ನೋಡಿದ್ದೇವೆ ಕೇಳಿದ್ದೆವೆ ಆದರೆ ಇಲ್ಲೊಬ್ಬ ಬಾಲಕ ಇಂದು ಶಾಲೆಗೆ ಹೋಗಿ ಬಂದ ನಂತರ ಮನೆಯಲ್ಲಿ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು

ಹೌದು ಬೆಳಗಾವಿ ಯಲ್ಲಿ ಇಂತಹ ದೊಂದು ವಿಶೇಷ ದೃಶ್ಯ ವೊಂದು ಕಂಡು ಬಂದಿದೆ. ಅತ್ತೆ ಇಂದು ಆರಂಭಗೊಂಡ ಮತ್ತೊಂದು ಹಂತದಲ್ಲಿನ ಪ್ರಾಥಮಿಕ ಶಾಲೆಗೆ ಹೋಗಿ ನಂತರ ಮನೆಗೆ ಬಂದಿದ್ದಾನೆ ವಿದ್ಯಾರ್ಥಿಗೆ ಶಾಲೆಗೆ ಹೋಗಿ ಬಂದಿದ್ದಕ್ಕೂ ಮನೆಯಲ್ಲಿ ವಿಶೇಷ ಸ್ವಾಗತಿಸಿದರು ಈ ಒಂದು ಗೌರವ ಸಿಕ್ಕಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮೂರನೇ ತರಗತಿ ವಿದ್ಯಾರ್ಥಿ ತಮೀಮ್ ಕುಡಚೆ ಎಂಬಾತನಿಗೆ ಈ ಒಂದು ವಿಶೇಷವಾದ ಗೌರವ ಮನೆಯವರಿಂದ ಇಂದು ಮನೆಯಲ್ಲಿ ಸಿಕ್ಕಿದೆ

ಇಲ್ಲಿನ ಮುಲ್ಲಾ ಪ್ಲಾಟ್ ನಿವಾಸಿಯಾಗಿರುವ ಈ ವಿದ್ಯಾರ್ಥಿ ಯ ತಂದೆ ಸಲೀಮ್ ಕುಡಚೆ ಹಾಗೂ ತಾಯಿ,ಮಗ ಶಾಲೆ ಯಿಂದ ಮನೆಗೆ ಮರಳುತ್ತಿದ್ದಂತೆ ಮನೆಯ ಬಾಗಿಲಲ್ಲಿ ನಿಲ್ಲಿಸಿ ನೆದರು ತಗೆದು ನಂತರ ತೆಂಗಿನಕಾಯಿ ಒಡೆದು ಮಾಲೆಯೊಂದನ್ನು ಕೊರಳಿಗೆ ವಿಶೇಷವಾಗಿ ಹಾರ ಹಾಕಿ ಸ್ವಾಗತಿಸಿದ್ದಾರೆ.

ಮಹಾಮಾರಿ ಕರೊನಾ ಮೂರನೇಯ ಅಲೆಯ ಆತಂಕದ ನಡುವೆಯೂ ಕೂಡಾ ಸಾಂಕ್ರಾಮಿಕ ಪಿಡುಗಿನಿಂದಾಗಿ ಶಾಲೆಯ ಭೌತಿಕ ತರಗತಿಗಳು ಸ್ಥಗಿತಗೊಂಡು ಮತ್ತೆ ಆರಂಭಗೊಂಡಿದೆ ಎರಡು ವರ್ಷದ ಬಳಿಕ ಮತ್ತೆ ಶಾಲೆಗೆ ಹೋಗಿ ಬಂದಿರುವ ಖುಷಿಗೆ ಈ ಪಾಲಕರು ಮಗನನ್ನು ಹೀಗೆ ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದ್ದು ನಿಜವಾಗಿಯೂ ಮೆಚ್ಚುಗೆ ಕಾರ್ಯ.


Google News

 

 

WhatsApp Group Join Now
Telegram Group Join Now
Suddi Sante Desk