ಧಾರವಾಡ –
ಬಾವಿಯಲ್ಲಿ ಬಿದ್ದಿದ್ದ ವೃದ್ಧೆಯನ್ನು ಧಾರವಾಡದಲ್ಲಿ ರಕ್ಷಣೆ ಮಾಡಲಾಗಿದೆ. ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬಾವಿಯಲ್ಲಿ ಬಿದ್ದ ವೃದ್ದೆಯನ್ನು ರಕ್ಷಣೆ ಮಾಡಲಾಗಿದೆ.
ಮಂಜುನಾಥ ಅನ್ನೋ ಬಾಲಕ ಆಗ ತಾನೇ ಶಾಲೆಯಿಂದ ಮನೆಗೆ ಹೊರಟಿದ್ದನು ಆಕಸ್ಮಿಕವಾಗಿ ಬಾವಿಯನ್ನು ಇಣುಕಿ ನೋಡಿದಾಗ ಅಜ್ಜಿ ಬಿದ್ದಿದ್ದನ್ನು ನೋಡಿದ್ದು ಬಾಲಕ ಕೂಡಲೇ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾನೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬಾವಿಯಲ್ಲಿ ಇಳಿದು ವೃದ್ದೆಯನ್ನು ರಕ್ಷಣೆ ಮಾಡಿದ್ದಾರೆ. ಹಗ್ಗದ ಮತ್ತು ಏಣಿ ಸಹಾಯದಿಂದ ವೃದ್ಧೆಯ ರಕ್ಷಣೆ ಮಾಡಲಾಗಿದೆ.
ಕುತೂಹಲದಿಂದ ಬಾವಿ ಇಣುಕಿ ನೋಡಿದ್ದ ಬಾಲಕ ವೃದ್ಧೆಯನ್ನು ಬಾವಿಯಲ್ಲಿ ಗಮನಿಸಿದ್ದ ಬಾಲಕ ಅಸ್ವಸ್ಥಗೊಂಡ ವೃದ್ಧೆ ಕೆಸರಿನಲ್ಲಿ ಸಿಲುಕಿದ್ದ ವೃದ್ಧೆ 50 ಅಡಿ ಆಳದ ಬಾವಿ ವನಮಾಲಾ ಕಲಕರ್ಣಿ ಬಾವಿಗೆ ಬಿದ್ದಿದ್ದು
ವೃದ್ಧೆ ಮಧ್ಯಾಹ್ನದಿಂದ ಮನೆಯಿಂದ ನಾಪತ್ತೆಯಾಗಿದ್ದರು. ವೃದ್ದೆ ಅಸ್ವಸ್ಥವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.